ಬಳ್ಳಾರಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ನಗರ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಪರ ಅವರ ತಂದೆ ಮಾಜಿ ಶಾಸಕ ನಾರಾ ಸೂರ್ಯ ನಾರಾಯಣ ರೆಡ್ಡಿ, ಕಾಂಗ್ರೆಸ್ ಪಕ್ಷದ ಮುಖಂಡರು ಇಲ್ಲಿನ ಕುರಿಹಟ್ಟಿ, ಹವಂಬಾವಿ, 21 ವಾರ್ಡ್‌ನ ಕಾಲುವೆ ಗಡ್ಡೆ ಸೇರಿದಂತೆ ಇತರೆಡೆ ಭರ್ಜರಿ ಪ್ರಚಾರ ನಡೆಸಿದರು.
ಭಾನುವಾರ ಬೆಳಗ್ಗೆ ಬಳ್ಳಾರಿ ನಗರ ಕ್ಷೇತ್ರ ವ್ಯಾಪ್ತಿಯ ಕುರಹಟ್ಟಿ, ಹಾವಂಭಾವಿಯಲ್ಲಿ ಭರತ್ ರೆಡ್ಡಿ ಮತಯಾಚನೆ ಮಾಡಿ, ಸಾಮಾಜಿಕ ನ್ಯಾಯದ ತತ್ವದಡಿ ವಿಶ್ವಾಸವಿಟ್ಟಿರುವ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಸರ್ವ ಜನಾಂಗದ ಜನರ ಅಭಿವೃದ್ಧಿ ಸಾಧ್ಯ ಎಂದರು.
ಇದನ್ನೂ ಓದಿ: ಹಸಿರುಮಕ್ಕಿ ಲಾಂಚ್‌ನ ಡೋರ್ ಕೇಬಲ್ ಕಟ್; ಶರಾವತಿ ನದಿಯೊಳಗೆ ಬಿದ್ದ ಬೈಕ್; ಈಜಿ ದಡ ಸೇರಿದ ಸಿಬ್ಬಂದಿ
ನಾರಾಭರತ್ ರೆಡ್ಡಿ ಅವರ ತಂದೆ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ, ನಗರದ 21ನೇ ವಾರ್ಡ್‌ನ ಕಾಲುವೆ ಗಡ್ಡೆಯ ಮೇಲೆ ಮತಯಾಚನೆ ಮಾಡಿದರು.
ಕಾಂಗ್ರೆಸ್ ಮುಖಂಡರಿಂದ ವಿವಿಧೆಡೆ ಪ್ರಚಾರ
ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರ ಪರ ಕ್ಷೇತ್ರದಾದ್ಯಂತ ನೂರಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮತಯಾಚನೆ ನಡೆಸಿದರು. 5ನೇ ವಾರ್ಡಿನ ಕಾಕರ್ಲತೋಟ, ಹನುಮಾನ್ ನಗರ್, ಮುಂಡರಗಿ ಪ್ರದೇಶಗಳಿಗೆ ಮನೆ ಮನೆಗೆ ಕಾಲ್ನಡಿಗೆಯ ಮೂಲಕ ಭೇಟಿ ನೀಡಿ ಪ್ರಚಾರ ಕಾರ್ಯ ನಡೆಸಲಾಯಿತು.
ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಸ್.ಆಂಜನೇಯಲು, ಮೇಯರ್ ತ್ರಿವೇಣಿ, 5ನೇ ವಾರ್ಡ್‌ನ ಸದಸ್ಯ ರಾಜಶೇಖರ್, ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಬೋಯಪಾಟಿ ವಿಷ್ಣುವರ್ಧನ್, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶೋಭಾ ಕಳಿಂಗ, ಬ್ರೂಸ್‍ಪೇಟೆ ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸ್, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ವಿಜಯ್, ಹರಿ ಹಾಗೂ ನೂರಾರು ಜನ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದರು.
ಮಾಜಿ ಜಿಪಂ ಸದಸ್ಯ ಎ. ಮಾನಯ್ಯ, ಬಳ್ಳಾರಿ ನಗರ ಗ್ರಾಮೀಣ ಪ್ರಚಾರ ಸಮಿತಿ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಕಾಂಗ್ರೆಸ್ ಮುಖಂಡ ಎಲ್. ಮಾರೆಣ್ಣ ಸೇರಿದಂತೆ ಹತ್ತಾರು ಮುಖಂಡರು, ನಗರ ವಿಧಾನಸಭಾ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ಇದನ್ನೂ ಓದಿ: IPL 2023: ಡೆಲ್ಲಿ ತಂಡದ ವಿರುದ್ಧ ಎಸ್ಆರ್ಎಚ್ ತಂಡ ಗೆದ್ದ ಬಳಿಕ ಐಪಿಎಲ್ ಅಂಕಪಟ್ಟಿ ಹೀಗಿದೆ
ನಗರ ವಿಧಾನಸಭಾ ಕ್ಷೇತ್ರದ ಬಾಪೂಜಿ ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾಲ್ನಡಿಗೆ ಮೂಲಕ ತೆರಳಿ ಮತ ಯಾಚನೆ ನಡೆಸಿದರು. ಬಳ್ಳಾರಿ ನಗರದ ಅಭಿವೃದ್ಧಿಗಾಗಿ ಭರತ್ ರೆಡ್ಡಿ ಅವರನ್ನು ಬೆಂಬಲಿಸುವಂತೆ ಮುಖಂಡರು ಮನವಿ ಮಾಡಿದರು.
ದಲಿತ ಮುಖಂಡರಾದ ಸಿದ್ಧೇಶ್, ಎರುಕುಲಸ್ವಾಮಿ, ಪೃಥ್ವಿರಾಜ್, ಛಲವಾದಿ ಮಹಾಸಭಾದ ಅಧ್ಯಕ್ಷ ನರಸಪ್ಪ, ಚಿಕ್ಕಗಾದಿಲಿಂಗಪ್ಪ, ಸಿ.ಸೋಮಶೇಖರ, ಮಹಾನಂದಿಕೊಟ್ಟಂ ಗೋವಿಂದರಾಜುಲು, ಮಹಾ ನಂದಿಕೊಟ್ಟಂ ಸೋಮಶೇಖರ್ ಸೇರಿದಂತೆ ಹಲವು ಮುಖಂಡರು ಭರತ್ ರೆಡ್ಡಿ ಅವರ ಪರ ಮತಯಾಚನೆ ಮಾಡಿದರು.