ಬಳ್ಳಾರಿ: ಜನರ ಗಮನ (Attention) ಬೇರೆಡೆ ಸೆಳೆದು ಕಳ್ಳತನ (Theft) ಮಾಡುತ್ತಿದ್ದ ಮೂವರು ಆರೋಪಿಗಳನ್ನು (3 accused) ನಗರದ ಬ್ರೂಸ್ಪೇಟೆ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಆಂಧ್ರದ ಚಿತ್ತೂರು ಜಿಲ್ಲೆಯ ಒಬಿಕೊಪ್ಪಂ ನಿವಾಸಿಗಳಾದ ಜಕ್ಕರಯ್ಯ, ಸುಬ್ರಹ್ಮಣ್ಯಂ ಹಾಗೂ ಪಿ. ನಾರಾಯಣ ಎಂಬುವವರೇ ಬಂಧಿತ ಆರೋಪಿಗಳು.
ಬಂಧಿತರಿಂದ ಒಂದು ಲಕ್ಷ ರೂ. ಮೌಲ್ಯದ ಚಿನ್ನಭರಣ ಹಾಗೂ 4.25 ಲಕ್ಷ ರೂ. ನಗದು ಸೇರಿ ಒಟ್ಟಾರೆ 5.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈಗಾಗಲೇ ಜಿಲ್ಲೆಯ ನಾನಾ ಠಾಣೆಗಳಲ್ಲಿ ಈ ಮೂವರು ಆರೋಪಿಗಳ ವಿರುದ್ದ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಪೊಲೀಸ್ ಕಾರ್ಯಚಾರಣೆಗೆ ಎಸ್ಪಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.