Site icon Vistara News

Ballari News: ಮಾಜಿ ಸಂಸದೆ ಶಾಂತಾ ವೈಎಸ್‌ಆರ್‌ಸಿಪಿ ಸೇರ್ಪಡೆ; ರಾಜ್ಯ ರಾಜಕಾರಣದಿಂದ ಆಂಧ್ರ ರಾಜಕೀಯಕ್ಕೆ!

Former Ballari MP Shantha joins YSRCP

ಬಳ್ಳಾರಿ: ಮಾಜಿ ಸಂಸದೆ (Former MP), ಮಾಜಿ ಸಚಿವ ಬಿ. ಶ್ರೀರಾಮುಲು ಸಹೋದರಿ ಜೆ. ಶಾಂತಾ ಅವರು ಆಂಧ್ರಪ್ರದೇಶದ ಸಿಎಂ ಜಗನ್‌ ಮೋಹನ್‌ ರೆಡ್ಡಿ (Andhra Pradesh CM Jagan Mohan Reddy) ಅವರ ನೇತೃತ್ವದಲ್ಲಿ ವೈಎಸ್‌ಆರ್‌ಸಿಪಿ (YSRCP) ಗೆ ಮಂಗಳವಾರ ಸೇರ್ಪಡೆಗೊಂಡಿದ್ದಾರೆ.

ವೈಎಸ್‌ಆರ್‌ಸಿಪಿಗೆ ಸೇರ್ಪಡೆಯಾಗುವ ಮೂಲಕ ಮಾಜಿ‌ ಸಂಸದೆ ಜೆ. ಶಾಂತಾ ಬಿಜೆಪಿ ಗೆ ಗುಡ್ ಬೈ ಹೇಳಿ, ಕರ್ನಾಟಕ ರಾಜಕಾರಣ ಬಿಟ್ಟು ಆಂಧ್ರ ರಾಜಕಾರಣಕ್ಕೆ ಎಂಟ್ರಿ ಕೊಟಂತಾಗಿದೆ. 2009 ರಲ್ಲಿ ಬಳ್ಳಾರಿ ಸಂಸದೆಯಾಗಿದ್ದರು.

ಮಂಗಳವಾರ ವಿಜಯವಾಡ ತಾಡಂಪಲ್ಲಿ ಸಿಎಂ ಕ್ಯಾಂಪ್ ಆಫೀಸ್‌ನಲ್ಲಿ ವೈಎಸ್‌ಆರ್‌ಸಿಪಿ‌ ಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ಎಂಪಿ‌ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿಯಿಂದ ಹಿಂದುಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಯ ಸಾಧ್ಯತೆ ಇದೆ. ಹಿಂದುಪುರ ಲೋಕಸಭಾ ಕ್ಷೇತ್ರವು ಅನಂತಪುರ ಜಿಲ್ಲೆಯ ವ್ಯಾಪ್ತಿಯಲ್ಲಿದೆ.

ಇದನ್ನೂ ಓದಿ: Coronavirus News: 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ; ರಾಜ್ಯ ಸರ್ಕಾರ ಸಲಹೆ

ಹಿಂದುಪುರ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯ ನಾಲ್ಕುವರೆ ಲಕ್ಷ ಮತದಾರರಿರುವುದರಿಂದ ಈ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜೆ.ಶಾಂತಾ ಅವರು ಆಂಧ್ರ ಪ್ರದೇಶದ ಗುಂತಕಲ್ ಪಟ್ಟಣ ನಗರ ನಿವಾಸಿಗಳಾಗಿದ್ದರು. 2009 ರಲ್ಲಿ ಶ್ರೀರಾಮುಲು ಅವರ ಸಹಕಾರದಿಂದಾಗಿ ಬಳ್ಳಾರಿಯಿಂದ ಬಿಜೆಪಿ ಸಂಸದೆಯಾಗಿ ಆಯ್ಕೆಯಾಗಿದ್ದರು.

ರಾಜ್ಯದಲ್ಲಿ ವಾಲ್ಮೀಕಿ ಸಮುದಾಯವು ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಆಂಧ್ರದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದೆ.

ಇದನ್ನೂ ಓದಿ: Gold Price: ಚಿನ್ನದ ಮೇಲೆ ಹೂಡಿಕೆಗೆ ಇದು ‘ಬಂಗಾರ’ದ ಸಮಯ; 10 ಗ್ರಾಂಗೆ 70 ಸಾವಿರ ರೂ.!?

ಜಗನ್‌ ಮೋಹನ್‌ ರೆಡ್ಡಿ ಅವರು ಎಂಪಿಯಾಗಿದ್ದಾಗ ಲೋಕಸಭೆಯಲ್ಲಿ ಶಾಂತಾ ಅವರ ಪರಿಚಯವಾಗಿತ್ತು. ಇದೀಗ ವೈಎಸ್‌ಆರ್‌ಸಿಪಿ ಗೆ ಸೇರ್ಪಡೆಯಾಗಲು ಇದು ಕಾರಣವಾಗಿದೆ. ಕಳೆದ ವಿಧಾನಸಭೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈಗ ಬಿಜೆಪಿಯಲ್ಲಿ ಎಂಪಿ ಟಿಕೆಟ್ ಸಿಗುವುದು ಕಷ್ಟಸಾಧ್ಯವಾಗಿದೆ ಎನ್ನುವುದು ಆಂಧ್ರ ರಾಜಕಾರಣಕ್ಕೆ ಹೋಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಶ್ರೀರಾಮುಲುಗೆ ಬಿಜೆಪಿಯಲ್ಲಿ ಕೊಂಚ ಮುಜುಗರಕ್ಕೆ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ.

Exit mobile version