Site icon Vistara News

Ballari News : ಕನ್ನಡದ ಒಳ್ಳೆಯ ಚಿತ್ರಗಳು ಕನ್ನಡಿಗರಿಗೆ ಮುಟ್ಟಬೇಕು: ಗಿರೀಶ್ ಕಾಸರವಳ್ಳಿ

film festival Inauguration at Ballari

ಬಳ್ಳಾರಿ: ನಾಡಿನ ಅನೇಕ ಸಂಘ-ಸಂಸ್ಥೆಗಳು ಚಿತ್ರೋತ್ಸವಗಳ (Film festival) ಮೂಲಕ ಸದಭಿರುಚಿಯ ಸಿನಿಮಾಗಳನ್ನು (Movie) ಪ್ರದರ್ಶನ ಮಾಡಿಸುತ್ತಿದ್ದಾರೆ. ಈ ಪರಂಪರೆ ಮುಂದುವರಿಯಬೇಕು ಎಂದು ಹಿರಿಯ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ತಿಳಿಸಿದರು.

ನಗರದ ವಿಮ್ಸ್ ಆವರಣದ ವೈದ್ಯಭವನದಲ್ಲಿ ವಿಮ್ಸ್ ಕನ್ನಡ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸನ್ಮಾರ್ಗ ಗೆಳೆಯರ ಬಳಗ ಸಹಯೋಗದಲ್ಲಿ ಭಾನುವಾರ ಜರುಗಿದ ಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದನ್ನೂ ಓದಿ: Actor Prabhudeva: 50ನೇ ವಯಸ್ಸಿಗೆ ಹೆಣ್ಣು ಮಗುವಿಗೆ ತಂದೆಯಾದ ಪ್ರಭು ದೇವ

ಅನೇಕ ಸಂಘ-ಸಂಸ್ಥೆಗಳು ಚಿತ್ರೋತ್ಸವಗಳ ಮೂಲಕ ಸದಭಿರುಚಿಯ ಸಿನಿಮಾಗಳನ್ನು ಪ್ರದರ್ಶನ ಮಾಡಿಸುತ್ತಿದ್ದಾರೆ, ಈ ಪರಂಪರೆ ಮುಂದುವರಿಯಬೇಕು ಎಂದ ಅವರು, ನಾವು ಸಹ ಚಿತ್ರೋತ್ಸವಕ್ಕೆ ಬರಲು ಸಿದ್ಧರಿದ್ದೇವೆ. ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ. ಒಟ್ಟು ನಮ್ಮ ಆಶಯ ಒಂದೇ ಕನ್ನಡದ ಒಳ್ಳೆಯ ಚಿತ್ರಗಳು ಕನ್ನಡಿಗರಿಗೆ ಮುಟ್ಟಬೇಕು ಎಂದು ಹೇಳಿದರು.

ಹಿರಿಯ ಕಥೆಗಾರ ಅಮರೇಶ ನುಗಡೋಣಿ ಮಾತನಾಡಿ, ಗಿರೀಶ್ ಕಾಸರವಳ್ಳಿ ಅವರ ಎಲ್ಲ ಸಿನಿಮಾಗಳು ಸಮಕಾಲೀನ, ಸಾಮಾಜಿಕ ವಾಸ್ತವತೆಯಿಂದ ಕೂಡಿರುವಂತಹದ್ದು. ಸ್ಪಷ್ಟವಾದ ಸಾಮಾಜಿಕ ನಿಲುವು ಹೊಂದಿವೆ ಎಂದು ವಿವರಿಸಿದರು.

ವಿಮ್ಸ್‌ ನ ಪ್ರಭಾರಿ ನಿರ್ದೇಶಕ ಡಾ.ಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಗಣೇಶ ಅಮೀನಗಡ ಅವರು ಗಿರೀಶ್‌ಕಾಸರವಳ್ಳಿಯ ಸಿನಿಮಾ ಬದುಕು ಕುರಿತು ಪರಿಚಯಿಸಿದರು.

ಇದನ್ನೂ ಓದಿ: WTC Final 2023 : ವಿಶ್ವದ ಯಾವ ಕ್ರಿಕೆಟ್​ ತಂಡವೂ ಮಾಡದ ವಿಶೇಷ ದಾಖಲೆ ಸೃಷ್ಟಿಸಿದ ಆಸ್ಟ್ರೇಲಿಯಾ!

ವಿಮ್ಸ್ ಕನ್ನಡ ಸಂಘದ ಅಧ್ಯಕ್ಷ ಡಾ. ಪರಸಪ್ಪ ಬಂದ್ರಕಳ್ಳಿ ಪ್ರಾಸ್ತಾವಿಕ ಮಾತನಾಡಿ, ಸಂಘದ ಚಟುವಟಿಕೆಗಳ ಕುರಿತು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್ ಉಪಸ್ಥಿತರಿದ್ದರು.

ಬಳಿಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ದ್ವೀಪ, ತಾಯಿ ಸಾಹೇಬ ಹಾಗೂ ಕೂರ್ಮಾವತಾರ ಸಿನಿಮಾಗಳು ಪ್ರದರ್ಶನಗೊಂಡವು. ಬಳಿಕ ಪ್ರೇಕ್ಷಕರು ನಿರ್ದೇಶಕ ಕಾಸರವಳ್ಳಿ ಅವರ ಜೊತೆ ಸಿನಿಮಾ ಕುರಿತು ಸಂವಾದ ನಡೆಸಿದರು.‌

ಇದನ್ನೂ ಓದಿ: Road Accident: ಬಸ್‌-ಕಾರು ಅಪಘಾತ; ಉಡುಪಿ ಮೂಲದ ಇಬ್ಬರ ಸಾವು, ಮತ್ತಿಬ್ಬರಿಗೆ ಗಾಯ

ವಿಮ್ಸ್ ವೈದ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಚಿತ್ರೋತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

Exit mobile version