Ballari News Good Kannada movies should reach Kannadigas Senior film director Girish Kasaravalli Ballari News : ಕನ್ನಡದ ಒಳ್ಳೆಯ ಚಿತ್ರಗಳು ಕನ್ನಡಿಗರಿಗೆ ಮುಟ್ಟಬೇಕು: ಗಿರೀಶ್ ಕಾಸರವಳ್ಳಿ - Vistara News

ಕರ್ನಾಟಕ

Ballari News : ಕನ್ನಡದ ಒಳ್ಳೆಯ ಚಿತ್ರಗಳು ಕನ್ನಡಿಗರಿಗೆ ಮುಟ್ಟಬೇಕು: ಗಿರೀಶ್ ಕಾಸರವಳ್ಳಿ

Ballari News: ಬಳ್ಳಾರಿಯ ವಿಮ್ಸ್ ಆವರಣದ ವೈದ್ಯಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ನಿರ್ದೇಶನದ ಚಿತ್ರಗಳ ಪ್ರದರ್ಶನ‌ ಹಾಗೂ ಸಂವಾದ ಕಾರ್ಯಕ್ರಮ ಜರುಗಿತು.

VISTARANEWS.COM


on

film festival Inauguration at Ballari
ಬಳ್ಳಾರಿಯ ವಿಮ್ಸ್ ವೈದ್ಯ ಭವನದಲ್ಲಿ ಜರುಗಿದ ಚಿತ್ರೋತ್ಸವಕ್ಕೆ ಹಿರಿಯ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಕಥೆಗಾರ ಅಮರೇಶ ನುಗಡೋಣಿ ಚಾಲನೆ ನೀಡಿದರು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಳ್ಳಾರಿ: ನಾಡಿನ ಅನೇಕ ಸಂಘ-ಸಂಸ್ಥೆಗಳು ಚಿತ್ರೋತ್ಸವಗಳ (Film festival) ಮೂಲಕ ಸದಭಿರುಚಿಯ ಸಿನಿಮಾಗಳನ್ನು (Movie) ಪ್ರದರ್ಶನ ಮಾಡಿಸುತ್ತಿದ್ದಾರೆ. ಈ ಪರಂಪರೆ ಮುಂದುವರಿಯಬೇಕು ಎಂದು ಹಿರಿಯ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ತಿಳಿಸಿದರು.

ನಗರದ ವಿಮ್ಸ್ ಆವರಣದ ವೈದ್ಯಭವನದಲ್ಲಿ ವಿಮ್ಸ್ ಕನ್ನಡ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸನ್ಮಾರ್ಗ ಗೆಳೆಯರ ಬಳಗ ಸಹಯೋಗದಲ್ಲಿ ಭಾನುವಾರ ಜರುಗಿದ ಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದನ್ನೂ ಓದಿ: Actor Prabhudeva: 50ನೇ ವಯಸ್ಸಿಗೆ ಹೆಣ್ಣು ಮಗುವಿಗೆ ತಂದೆಯಾದ ಪ್ರಭು ದೇವ

ಅನೇಕ ಸಂಘ-ಸಂಸ್ಥೆಗಳು ಚಿತ್ರೋತ್ಸವಗಳ ಮೂಲಕ ಸದಭಿರುಚಿಯ ಸಿನಿಮಾಗಳನ್ನು ಪ್ರದರ್ಶನ ಮಾಡಿಸುತ್ತಿದ್ದಾರೆ, ಈ ಪರಂಪರೆ ಮುಂದುವರಿಯಬೇಕು ಎಂದ ಅವರು, ನಾವು ಸಹ ಚಿತ್ರೋತ್ಸವಕ್ಕೆ ಬರಲು ಸಿದ್ಧರಿದ್ದೇವೆ. ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ. ಒಟ್ಟು ನಮ್ಮ ಆಶಯ ಒಂದೇ ಕನ್ನಡದ ಒಳ್ಳೆಯ ಚಿತ್ರಗಳು ಕನ್ನಡಿಗರಿಗೆ ಮುಟ್ಟಬೇಕು ಎಂದು ಹೇಳಿದರು.

ಹಿರಿಯ ಕಥೆಗಾರ ಅಮರೇಶ ನುಗಡೋಣಿ ಮಾತನಾಡಿ, ಗಿರೀಶ್ ಕಾಸರವಳ್ಳಿ ಅವರ ಎಲ್ಲ ಸಿನಿಮಾಗಳು ಸಮಕಾಲೀನ, ಸಾಮಾಜಿಕ ವಾಸ್ತವತೆಯಿಂದ ಕೂಡಿರುವಂತಹದ್ದು. ಸ್ಪಷ್ಟವಾದ ಸಾಮಾಜಿಕ ನಿಲುವು ಹೊಂದಿವೆ ಎಂದು ವಿವರಿಸಿದರು.

ವಿಮ್ಸ್‌ ನ ಪ್ರಭಾರಿ ನಿರ್ದೇಶಕ ಡಾ.ಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಗಣೇಶ ಅಮೀನಗಡ ಅವರು ಗಿರೀಶ್‌ಕಾಸರವಳ್ಳಿಯ ಸಿನಿಮಾ ಬದುಕು ಕುರಿತು ಪರಿಚಯಿಸಿದರು.

ಇದನ್ನೂ ಓದಿ: WTC Final 2023 : ವಿಶ್ವದ ಯಾವ ಕ್ರಿಕೆಟ್​ ತಂಡವೂ ಮಾಡದ ವಿಶೇಷ ದಾಖಲೆ ಸೃಷ್ಟಿಸಿದ ಆಸ್ಟ್ರೇಲಿಯಾ!

ವಿಮ್ಸ್ ಕನ್ನಡ ಸಂಘದ ಅಧ್ಯಕ್ಷ ಡಾ. ಪರಸಪ್ಪ ಬಂದ್ರಕಳ್ಳಿ ಪ್ರಾಸ್ತಾವಿಕ ಮಾತನಾಡಿ, ಸಂಘದ ಚಟುವಟಿಕೆಗಳ ಕುರಿತು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಆಚಾರ್ ಕಪ್ಪಗಲ್ ಉಪಸ್ಥಿತರಿದ್ದರು.

ಬಳಿಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ದ್ವೀಪ, ತಾಯಿ ಸಾಹೇಬ ಹಾಗೂ ಕೂರ್ಮಾವತಾರ ಸಿನಿಮಾಗಳು ಪ್ರದರ್ಶನಗೊಂಡವು. ಬಳಿಕ ಪ್ರೇಕ್ಷಕರು ನಿರ್ದೇಶಕ ಕಾಸರವಳ್ಳಿ ಅವರ ಜೊತೆ ಸಿನಿಮಾ ಕುರಿತು ಸಂವಾದ ನಡೆಸಿದರು.‌

ಇದನ್ನೂ ಓದಿ: Road Accident: ಬಸ್‌-ಕಾರು ಅಪಘಾತ; ಉಡುಪಿ ಮೂಲದ ಇಬ್ಬರ ಸಾವು, ಮತ್ತಿಬ್ಬರಿಗೆ ಗಾಯ

ವಿಮ್ಸ್ ವೈದ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಚಿತ್ರೋತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ರಾಯಚೂರು

Leopard Attack : ದಾಳಿ ಮಾಡಿದ ಚಿರತೆಯನ್ನು ಹೊಡೆದು ಕೊಂದು ಆಂಬ್ಯುಲೆನ್ಸ್‌ಗೆ ಹಾಕಿದ ಗ್ರಾಮಸ್ಥರು

Leopard Attack : ದಾಳಿ ಮಾಡಿದ ಚಿರತೆಯನ್ನು ಹೊಡೆದು ಕೊಂದ ಗ್ರಾಮಸ್ಥರು ಪಶು ಇಲಾಖೆಯ ಆಂಬ್ಯುಲೆನ್ಸ್‌ಗೆ ಹಾಕಿದ್ದಾರೆ. ಕಣ್ಮುಂದೆ ಇದ್ದ ಚಿರತೆಯನ್ನು ಸೆರೆಹಿಡಿಯಲು ಅಧಿಕಾರಿಗಳು ವಿಫಲರಾದರೂ, ರೊಚ್ಚಿಗೆದ್ದ ಗ್ರಾಮಸ್ಥರು ಚಿರತೆಯನ್ನು ಕೊಂದಿದ್ದಾರೆ.

VISTARANEWS.COM


on

By

leopard attack
Koo

ರಾಯಚೂರು: ಜಮೀನಿಗೆ ತೆರಳುತ್ತಿದ್ದ ಮೂವರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಹಿಡಿದು ಗ್ರಾಮಸ್ಥರು ಹೊಡೆದು ಕೊಂದಿದ್ದಾರೆ. ರಾಯಚೂರಿನ ದೇವದುರ್ಗ ತಾಲ್ಲೂಕಿನ ಕಮದಾಳು ಗ್ರಾಮದಲ್ಲಿ ಮೂವರ ಮೇಲೆ ಚಿರತೆ (Leopard attack) ದಾಳಿ ನಡೆಸಿತ್ತು.

ಅರಣ್ಯಾಧಿಕಾರಿಗಳ ಕಾರ್ಯಾಚರಣೆ ವೇಳೆ ಚಿರತೆ ಸೆರೆ ಸಿಗದ ಹಿನ್ನೆಲೆಯಲ್ಲೇ ಅಖಾಡಕ್ಕೆ ಇಳಿದ ಗ್ರಾಮಸ್ಥರೇ ಚಿರತೆ ಮೇಲೆ ದಾಳಿ ಮಾಡಿದ್ದರು. ಅರಣ್ಯ ಅಧಿಕಾರಿಗಳ ಎದುರೇ ಚಿರತೆಯನ್ನು ಕೊಂದು ಹಾಕಿದ್ದರು. ಇತ್ತ ಸ್ಥಳದಲ್ಲಿ ಸೇರಿದ್ದ ಸಾವಿರಾರು ಜನರನ್ನು ನಿಯಂತ್ರಿಸಲು ಆಗದೆ ಪೊಲೀಸರು ಹರಸಾಹಸ ಪಟ್ಟರು. ಮಾತ್ರವಲ್ಲದೇ ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದರು.

ಚಿರತೆಯನ್ನು ಕೊಂದು ಪಶು ಆಂಬ್ಯುಲೆನ್ಸ್‌ಗೆ ತಂದು ಹಾಕಿದರು. ಅರಣ್ಯ ಹಾಗೂ ಪೊಲೀಸರ ಅಧಿಕಾರಿ ಮುಂದೆಯೇ ಚಿರತೆ ಬಲಿಯಾಯಿತು. ಚಿರತೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಅಸಹಾಯಕರಾಗಿದ್ದರು. ಸಂಜೆಯಾಗುತ್ತಿದ್ದಂತೆ ರೊಚ್ಚಿಗೆದ್ದ ಜನರು ಚಿರತೆಯನ್ನು ಕೊಂದಿದ್ದಾರೆ. ಸದ್ಯ ದೇವದುರ್ಗ ತಾಲೂಕು ಪಶು ಆಸ್ಪತ್ರೆಯಲ್ಲಿ ಚಿರತೆ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

ಚಿರತೆ ದಾಳಿಗೆ ಮೂವರು ಗಂಭೀರ

ಕಾಡುಪ್ರಾಣಿಗಳ ಹಾವಳಿ (Wild Animal Attack) ಹೆಚ್ಚಾಗಿದ್ದು, ಜನ-ಸಾಮಾನ್ಯರು ಆತಂಕದಲ್ಲೇ ಓಡಾಡುವಂತಾಗಿದೆ. ಆಹಾರ ಅರಸಿ ನಾಡಿಗೆ ಕಾಲಿಡುತ್ತಿರುವ ಪ್ರಾಣಿಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಜತೆಗೆ ಸಾಕುಪ್ರಾಣಿಗಳನ್ನು ಕೊಂದು ಎತ್ತಿಕೊಂಡು ಹೋಗುತ್ತಿವೆ. ಜು.7ರ ಮುಂಜಾನೆ ರಾಯಚೂರಿನ ದೇವದುರ್ಗ ತಾಲ್ಲೂಕಿನ ಕಮದಾಳು ಗ್ರಾಮದಲ್ಲಿ ಮೂವರ ಮೇಲೆ ಚಿರತೆ (Leopard attack) ದಾಳಿ ನಡೆಸಿತ್ತು.

Leopard attack three in Raichur

ಚಿರತೆ ದಾಳಿಯಿಂದಾಗಿ ಮೂವರು ಗಂಭೀರ ಗಾಯಗೊಂಡಿದ್ದರು. ಮಲ್ಲಣ್ಣ, ರಂಗನಾಥ್‌, ಹನಮೇಶ ಕಮದಾಳ ಗಾಯಾಳುಗಳು. ಗಂಭೀರ ಗಾಯಗೊಂಡಿದ್ದ ಗಾಯಾಳುಗಳನ್ನು ದೇವದುರ್ಗ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ಮೂವರು ಜಮೀನಿಗೆ ತೆರಳುತ್ತಿದ್ದಾಗ, ಹಿಂದಿನಿಂದ ಬಂದ ಚಿರತೆಯು ಮೂವರ ಮೇಲೂ ಎರಗಿ ದಾಳಿ ಮಾಡಿ ಗಾಯಗೊಳಿಸಿತ್ತು. ಚಿರತೆ ಪ್ರತ್ಯಕ್ಷವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿತ್ತು. ಇನ್ನೂ ಸ್ಥಳಕ್ಕೆ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕಮದಾಳು,ಯರಮಸಾಳ, ಜೇರಬಂಡಿ, ಗುಂಡಗುರ್ತಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಕೂಡಲೇ ಸೆರೆಹಿಡಿಯುವಂತೆ ಜನರು ಒತ್ತಾಯಿಸಿದ್ದರು. ಆದರೆ ಯಾವಾಗ ಕಣ್ಮುಂದೆ ಇದ್ದ ಚಿರತೆಯನ್ನು ಸೆರೆಹಿಡಿಯಲು ಅಧಿಕಾರಿಗಳು ವಿಫಲರಾದರೂ, ರೊಚ್ಚಿಗೆದ್ದ ಗ್ರಾಮಸ್ಥರು ಚಿರತೆಯನ್ನು ಹೊಡೆದು ಕೊಂದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Bomb Threat: ಬಾಯ್‌ ಫ್ರೆಂಡ್‌ ಬಿಟ್ಟು ಹೋಗ್ತಾನೆ ಎಂದು ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ!

Bomb Threat: ಗೆಳೆಯ ಬೆಂಗಳೂರಿನಿಂದ ಮುಂಬೈಗೆ ಹೋಗೋದನ್ನು ತಡೆಯುವ ಉದ್ದೇಶದಿಂದ ಯುವತಿ ಹುಸಿ ಬಾಂಬ್‌ ಬೆದರಿಕೆ ಕರೆ ಮಾಡಿದ್ದಳು, ಆದರೆ, ಇದೀಗ ಆಕೆಗೆ ಸಂಕಷ್ಟ ಎದುರಾಗಿದೆ.

VISTARANEWS.COM


on

bomb threat
Koo

ಬೆಂಗಳೂರು: ತನ್ನನ್ನು ಬಾಯ್‌ ಫ್ರೆಂಡ್‌ ಬಿಟ್ಟು ಹೋಗಬಾರದು ಎಂದು ಯುವತಿಯೊಬ್ಬಳು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ (hoax bomb threat call) ಕರೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹುಸಿ ಬಾಂಬ್ ಕರೆ (Bomb Threat) ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಯುವತಿ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾಳೆ.

ಪುಣೆ ಮೂಲದ ಇಂದ್ರ ರಾಜ್ವಾರ್ (29) ಆರೋಪಿ ಯುವತಿ. ಈಕೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಈಕೆಯ ಗೆಳೆಯ ಮೀರ್ ರಾಜಾ ಮೆಹ್ದಿ ಎಂಬಾತ ಬೆಂಗಳೂರಿನಿಂದ ಮುಂಬೈಗೆ ತೆರಳಲು ಏರ್‌ಪೋರ್ಟ್‌ಗೆ ಹೋಗಿದ್ದ. ಆದರೆ, ಆತ ತನ್ನನ್ನು ಬಿಟ್ಟು ಹೋಗಬಾರದು ಎಂದು ಯುವತಿ ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಬೆದರಿಕೆ ಕರೆ ಮಾಡಿದ್ದಳು. ಗೆಳೆಯನನ್ನು ತಡೆಯುವ ಉದ್ದೇಶದಿಂದ ಯುವತಿ ಹುಸಿ ಬಾಂಬ್‌ ಬೆದರಿಕೆ ಕರೆ ಮಾಡಿದ್ದಳು, ಆದರೆ, ಇದೀಗ ಆಕೆಗೆ ಸಂಕಷ್ಟ ಎದುರಾಗಿದೆ.

ವ್ಯಕ್ತಿಯೊಬ್ಬರ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿದ್ದರಿಂದ ಸಿಬ್ಬಂದಿ ತಕ್ಷಣವೇ ಅಲರ್ಟ್‌ ಆಗಿ, ಮೀರ್ ರಾಜಾ ಮೆಹ್ದಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ. ಆದರೆ ಯಾವುದೇ ಸ್ಫೋಟಕಗಳು ಕಂಡುಬರದ ಹಿನ್ನೆಲೆಯಲ್ಲಿ ಹುಸಿ ಬಾಂಬ್‌ ಬೆದರಿಕೆ ಬಂದಿದೆ ಎನ್ನುವುದು ತಿಳಿದುಬಂದಿದೆ.

ತನ್ನ ಗೆಳೆಯ ಮುಂಬೈ ವಿಮಾನ ಹತ್ತುವುದನ್ನು ತಡೆಯುವುದು ಆಕೆಯ ಉದ್ದೇಶವಾಗಿತ್ತು. ಆದರೆ, ಅದು ಉಲ್ಟಾ ಹೊಡೆದಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಜೂನ್ 26 ರಂದು ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏರ್‌ಪೋರ್ಟ್‌ನಲ್ಲಿ ಪರಿಶೀಲನೆ ನಡೆಸಿದಾಗ ಹುಸಿ ಬಾಂಬ್‌ ಕರೆ ಮಾಡಿದ್ದ ಯುವತಿ ಇಂದ್ರ ರಾಜ್ವಾರ್ ಕೂಡ ಅಲ್ಲೇ ಇದ್ದದ್ದು ಕಂಡುಬಂದಿದೆ. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಯುವತಿ ಮತ್ತು ಯುವಕ ಇಬ್ಬರೂ ಮುಂಬೈಗೆ ಪ್ರಯಾಣಿಸಲು ಆಗಮಿಸಿದ್ದರು ಎಂದು ತಿಳಿದುಬಂದಿದೆ. ಇಬ್ಬರೂ ಪ್ರತ್ಯೇಕವಾಗಿ ಟಿಕೆಟ್‌ ಕೂಡ ಬುಕ್‌ ಮಾಡಿದ್ದರು.

ಇದನ್ನೂ ಓದಿ | Viral News: ಶಾಕಿಂಗ್‌ ಘಟನೆ! ಬುದ್ದಿ ಹೇಳಿದ ಗುರುವನ್ನೇ ಚುಚ್ಚಿ ಕೊಂದ ವಿದ್ಯಾರ್ಥಿ

ಯುವತಿ ಮತ್ತು ಮೆಹ್ದಿ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿದ್ದವು. ಹೀಗಾಗಿ ಮುಂಬೈಗೆ ಹೋಗುತ್ತಿದ್ದ ಯುವಕನನ್ನು ತಡೆಯಲು ಯುವತಿ ಏರ್‌ಪೋರ್ಟ್‌ ಸಹಾಯವಾಣಿಗೆ ಹುಸಿ ಬಾಂಬ್‌ ಕರೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಮಳೆ

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

No Rain : ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಮಳೆ ಇಲ್ಲದೆ ಜನರಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ಮುನಿಸಿಕೊಂಡಿರುವ ವರುಣ ದೇವನಿಗಾಗಿ ಕಂತೆ ಭಿಕ್ಷೆ (Davanagere News ) ಎತ್ತುತ್ತಿದ್ದಾರೆ.

VISTARANEWS.COM


on

By

Davanagere news
Koo

ದಾವಣಗೆರೆ: ರಾಜ್ಯಾದ್ಯಂತ ಮಳೆಯು (Karnataka Rain) ಅಬ್ಬರಿಸುತ್ತಿದ್ದರೂ, ಅದೊಂದು ಗ್ರಾಮಕ್ಕೆ ಮಾತ್ರ ಈವರೆಗೆ ಮಳೆಯೇ (No Rain) ಆಗಿಲ್ಲ. ಮುಂಗಾರು ಸಂಪೂರ್ಣವಾಗಿ ಆವರಿಸಿದ್ದರೂ, ದಾವಣಗೆರೆಯ ಆ ಗ್ರಾಮದಲ್ಲಿ (Davanagere News ) ಮಳೆ ಇಲ್ಲದೇ ಬರೆ ಎಳದಂತಾಗಿದೆ. ಮಳೆ ಇಲ್ಲದೆ ಜನರಲ್ಲಿ ಆತಂಕ ಶುರುವಾಗಿದ್ದು, ಇದೀಗ ಮುನಿಸಿಕೊಂಡಿರುವ ವರುಣ ದೇವನಿಗಾಗಿ ಕಂತೆ ಭಿಕ್ಷೆ ಎತ್ತುತ್ತಿದ್ದಾರೆ.

ಮಳೆ ಬಾರದೆ ಇದ್ದಾಗ ಹಿಂದಿನ ಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ದಾವಣಗೆರೆಯ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಮಳೆರಾಯ ನಾಪತ್ತೆಯಾಗಿದ್ದಾನೆ. ಹೀಗಾಗಿ ಮಳೆಗಾಗಿ ಕಂತೆ ಭಿಕ್ಷೆ ಎತ್ತುತ್ತಿದ್ದಾರೆ. ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಮಳೆ ಬರುತ್ತಿದ್ದರೆ, ಈ ಗ್ರಾಮದಲ್ಲಿ ಮಳೆಯೇ ಆಗುತ್ತಿಲ್ಲ. ಬಾರದ ಮಳೆಯಿಂದಾಗಿ ರೈತರು ಸೇರಿ ಗ್ರಾಮದ ಜನರು ಕಂಗಲಾಗಿದ್ದಾರೆ.

ಮಳೆಗಾಗಿ ದೇವರ ಮೊರೆ ಹೋಗಿರುವ ಗ್ರಾಮಸ್ಥರು ಕಂತೆ ಭಿಕ್ಷೆ ಎತ್ತುತ್ತಿದ್ದಾರೆ. ಮನೆ ಮನೆಗೆ ತೆರಳಿ ಕಂತೆ ಭಿಕ್ಷೆ ಬೇಡಿ ಸಾಮೂಹಿಕ ಪ್ರಸಾದ ಮಾಡಲಿದ್ದಾರೆ. ಗ್ರಾಮದಿಂದ ದೀಕ್ಷೆ ಪಡೆದ ಮುರುಘಾಸ್ವಾಮಿಗಳ ನೇತೃತ್ವದಲ್ಲಿ ಸತತ ಐದು ದಿನಗಳ ಕಾಲ ಭಿಕ್ಷಾಟನೆ ಮಾಡಲಾಗುತ್ತದೆ. ನಂತರ ಸಾಮೂಹಿಕ ಪ್ರಸಾದ ಸೇವನೆ ಮಾಡಲಾಗುತ್ತದೆ. ಈ ರೀತಿ ಆಚರಣೆಯಿಂದ ಮಳೆ ಬರುತ್ತೆ ಎನ್ನುವ ನಂಬಿಕೆ ಇದೆ.

ಇದನ್ನೂ ಓದಿ: Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

ಸಮುದ್ರಕ್ಕೆ ಇಳಿಯದಂತೆ ಸೂಚನೆ

ಉಡುಪಿ: ಜಿಲ್ಲೆಯಲ್ಲಿ 3 ದಿನ ನಿರಂತರವಾಗಿ ಸುರಿದ ಮಳೆಗೆ ಇಂದು ಕೊಂಚ ಬಿಡುವು ಸಿಕ್ಕಿದೆ. ಹೀಗಾಗಿ ವೀಕೆಂಡ್ ಎಂಜಾಯ್ ಮಾಡಲು ಪ್ರವಾಸಿಗರರ ದಂಡು ಬೀಚ್‌ ಕಡೆಗೆ ಮುಖ ಮಾಡಿದೆ. ಆದರೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಉಡುಪಿ ಜಿಲ್ಲೆಯ ಕಾಪು ಬೀಚ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸಮುದ್ರ ದಡದಲ್ಲಿಯೇ ಸೆಲ್ಫಿ ತೆಗೆದು ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ. ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯದಂತೆ ಲೈಫ್ ಗಾರ್ಡ್ಸ್ ಎಚ್ಚರಿಕೆ ನೀಡುತ್ತಿದ್ದು, ಬೀಚ್‌ ಉದ್ದಕ್ಕೂ ಕಣ್ಗಾವಲು ಇಟ್ಟಿದ್ದಾರೆ. ಹೀಗಾಗಿ ಪ್ರವಾಸಿಗರು ದೂರದಲ್ಲಿಯೇ ನಿಂತು ಕಡಲಬ್ಬರವನ್ನು ವೀಕ್ಷಿಸುತ್ತಿದ್ದಾರೆ. ಮಳೆ ನಿಂತ ಹಿನ್ನೆಲೆಯಲ್ಲಿ ಬೀಚ್‌ನಲ್ಲಿ ಸಮಯ ಕಳೆಯುವ ಉದ್ದೇಶದಿಂದ ಆಗಮಿಸಿದ ಪ್ರವಾಸಿಗರು ನಿರಾಸೆಯಿಂದ ವಾಪಸಾಗುತ್ತಿದ್ದಾರೆ.

ಸಮುದ್ರ ಪಾಲಾಗುತ್ತಿರುವ ಮೀನುಗಾರಿಕ ರಸ್ತೆ

ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಕಡಲು ಪ್ರಕ್ಷಬ್ಧಗೊಂಡಿದ್ದು, ಪಡುಕರೆ ಬೀಚ್‌ನಲ್ಲಿ ಅಬ್ಬರಿಸುತ್ತಿರುವ ರಕ್ಕಸಗಾತ್ರದ ಅಲೆಗಳಿಂದಾಗಿ ಮೀನುಗಾರಿಕ ರಸ್ತೆ ಸಮುದ್ರ ಪಾಲಾಗುತ್ತಿದೆ. ಸಮುದ್ರದ ಅಲೆಗಳ ಅಬ್ಬರ ಜಾಸ್ತಿಯಾದರೆ ರಸ್ತೆ ಸಂಪರ್ಕ ಕಡಿತವಾಗುವ ಭೀತಿ ಎದುರಾಗಿದೆ. ಗಾಳಿ ಮಳೆಯಿಂದಾಗಿ ಅರಬ್ಬಿ ಸಮುದ್ರ ಅಬ್ಬರಿಸುತ್ತಿದೆ. ಈಗಾಗಲೇ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Rain News: ಭಾರಿ ಮಳೆ ಹಿನ್ನೆಲೆ, ಜಲಪಾತ ವೀಕ್ಷಣೆ- ಟ್ರೆಕ್ಕಿಂಗ್‌ಗೆ ನಿರ್ಬಂಧ; ಈ ತಾಣಗಳಿಗೆ ಹೋಗಬೇಡಿ!

ಕಲಬುರಗಿಯಲ್ಲೂ ಮಳೆಯ ಅಬ್ಬರ

ಇನ್ನು ಕಲಬುರಗಿಯಲ್ಲಿ ಶನಿವಾರ ರಾತ್ರಿಯಿಡಿ ವರ್ಷಧಾರೆಯಾಗಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಫಜಲಪುರ ತಾಲೂಕಿನಲ್ಲಿ ಸಿದ್ದನೂರ್‌ನಿಂದ ರೆವೂರ್‌ಗೆ ಹೋಗುವ ಮಾರ್ಗದ ಬಳಿ ಇರುವ ಹಳ್ಳದಲ್ಲಿ ನೀರಿನ ಪ್ರಮಾನ ಹೆಚ್ಚಾಗಿದ್ದು, ಪ್ರಯಾಣಿಕರ ಪರದಾಡುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

Karnataka Rain : ಬೆಂಗಳೂರು, ಧಾರವಾಡ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ (Heavy Rain Effect) ಮಳೆಯಾಗಿದ್ದು, ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಮಳೆಗೆ ಮರಗಳು ರಸ್ತೆಗೆ ಉರುಳಿ ಬೀಳುತ್ತಿವೆ. ಈ ಮಧ್ಯೆ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ.

VISTARANEWS.COM


on

By

Karnataka Rain
Koo

ಚಿಕ್ಕಮಗಳೂರು/ಕಾರವಾರ: ಭಾನುವಾರವೂ ಕರಾವಳಿ, ಮಲೆನಾಡು ಸೇರಿದಂತೆ ಒಳನಾಡಿನ ಕೆಲವೆಡೆ ಮಳೆಯು (Heavy Rain) ಅಬ್ಬರಿಸಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆಯಿಂದಲೂ ಮೋಡ ಕವಿದ ವಾತಾವರಣ (Karnataka Rain) ಇತ್ತು.. ಸಂಜೆ ಆಗುತ್ತಿದ್ದಂತೆ ಮೆಜೆಸ್ಟಿಕ್‌, ಕಾಟನ್‌ಪೇಟೆ, ಕೆಆರ್‌ ಮಾರ್ಕೆಟ್‌ ,ಟೌನ್ ಹಾಲ್, ಶಿವಾನಂದ ಸರ್ಕಲ್, ಮೈಸೂರು ಸರ್ಕಲ್ ಸುತ್ತಮುತ್ತ ಮಳೆಯಾಗಿದೆ. ಜಿಟಿ ಜಿಟಿಯಾಗಿ ಶುರುವಾದ ಮಳೆಯು ನಂತರ ಕೆಲ ಕಾಲ ಅಬ್ಬರಿಸಿತ್ತು. ಇತ್ತ ಧಾರವಾಡ ನಗರದಲ್ಲೂ ನಿರಂತರ ಮಳೆಯಾಗಿದೆ. ಬೆಳಗ್ಗೆಯಿಂದಲ್ಲೂ ಬಿಟ್ಟು ಬಿಡದೆ ಸುರಿಯುತ್ತಿದೆ. ಕೆಲವೆಡೆ ಜಿಟಿ ಜಿಟಿ ಮಳೆಯಿಂದಾಗಿ ಸವಾರರು ಪರದಾಡಿದರು. ಧಾರವಾಡ ಗ್ರಾಮೀಣ ಕೆಲ ಭಾಗಗಳಲ್ಲಿ ಹೊರತುಪಡಿಸಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.

ನಿರಂತರ ಮಳೆಗೆ ಗುಡ್ಡ ಕುಸಿತ

ಚಿಕ್ಕಮಗಳೂರಿನಲ್ಲಿ ಬಿಟ್ಟುಬಿಡದೆ ಮಳೆಯು ಸುರಿಯುತ್ತಿದ್ದು, ರಸ್ತೆ ಬದಿ ಗುಡ್ಡ ಕುಸಿತ ಹೆಚ್ಚಾಗುತ್ತಿದೆ. ಶೃಂಗೇರಿ ತಾಲೂಕಿನ ಕೂತು ಗೋಡು ಗ್ರಾಮದ ಬಳಿ ಘಟನೆ ನಡೆದಿದೆ. ಗುಡ್ಡ ಕುಸಿತದಿಂದಾಗಿ ಹಲವು ಗಂಟೆಗಳ ಕಾಲ ಸಂಚಾರ ಬಂದ್ ಆಗಿತ್ತು. ಅಧಿಕಾರಿಗಳು ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯದಲ್ಲಿ ತೊಡಗಿದ್ದರು. ಕಳೆದ ಏಳೆಂಟು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪದೆಪದೇ ಗುಡ್ಡದ ಮಣ್ಣು ಕುಸಿಯುತ್ತಿದೆ. ಹೀಗಾಗಿ ತಾಲೂಕು ಆಡಳಿತವು ಗುಡ್ಡಗಾಡು ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಿದೆ.

ರಸ್ತೆಗೆ ಅಡ್ಡಲಾಗಿ ಬಿದ್ದ ಮರ

ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಮರವೊಂದು ಅಡ್ಡಲಾಗಿ ಬಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿತ್ತು. ಉತ್ತರಕನ್ನಡದ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಇತ್ತ ಹೆದ್ದಾರಿ ಸಿಬ್ಬಂದಿಯಿಂದ ಮರ ತೆರವು ಕಾರ್ಯಾಚರಣೆವರೆಗೆ ವಾಹನಗಳು ಹೆದ್ದಾರಿಯ ಮತ್ತೊಂದು ಬದಿಯಿಂದ ಸಂಚರಿಸುತ್ತಿದ್ದವು.

ಮುಂದುವರಿದ ಪ್ರವಾಸಿಗರ ಹುಚ್ಚಾಟ

ಬೆಳಗಾವಿಯ ಗೋಕಾಕ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ. ನೀರು ರಭಸವಾಗಿ ಧುಮ್ಮಿಕ್ಕುವ ಸ್ಥಳಗಳಲ್ಲಿ ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಜತೆಗೆ ಕೆಲವರು ಬಂಡೆಗಲ್ಲುಗಳ‌ ಮೇಲೆ ಕುಳಿತು ಊಟ ಮಾಡುತ್ತಿರುವುದು ಕಂಡು ಬಂದಿದೆ. ಜಲಪಾತಕ್ಕೆ ಭದ್ರತೆ ‌ಒದಗಿಸದೆ ಪೊಲೀಸರು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಚೂರು ಆಯ ತಪ್ಪಿದರೂ ಸಹ ಅಪಾಯ ಗ್ಯಾರಂಟಿ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಮಳೆಯಲ್ಲೇ ಟ್ರಾಫಿಕ್‌ಗೆ ಸಿಲುಕಿದ ಪ್ರವಾಸಿಗರು

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದೇವರ ಮನೆ ಪ್ರವಾಸಿತಾಣಕ್ಕೆ ಪ್ರವಾಸಿಗರ ದಂಡು ಹರಿದುಬರುತ್ತಿದ್ದು, ಮಳೆಯಲ್ಲೇ ಟ್ರಾಫಿಕ್‌ನಲ್ಲಿ ಸಿಲುಕಿದರು. ಸುಮಾರು ಎರಡು ಗಂಟೆ ಕಾಲ ನಿಂತಲ್ಲೇ ನಿಲ್ಲುಂತಾಯಿತು. ವೀಕೆಂಡ್ ಹಿನ್ನೆಲೆಯಲ್ಲಿ ಸಾವಿರಾರು ಟೂರಿಸ್ಟ್‌ಗಳು ಆಗಮಿಸಿದ್ದರು.

ಇದನ್ನೂ ಓದಿ: Rain News: ಕರಾವಳಿಯಲ್ಲಿ ಮುಂದುವರಿದ ವರುಣನ ಅಬ್ಬರ; ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ

ಮಳೆಗೆ ಜಲಾಶಯಗಳು ಭರ್ತಿ!

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ರಾಜ್ಯದ ಹಲವೆಡೆ ಜಲಾಶಯಗಳು ಭರ್ತಿಯಾಗುತ್ತಿವೆ. ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯ ಭರ್ತಿಗೆ ಎರಡು ಅಡಿ ಬಾಕಿ‌ ಇದೆ. ಕೇರಳದ ವೈನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವು ಗಣನೀಯವಾಗಿ ಏರಿಕೆ ಆಗುತ್ತಿದೆ. ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಅಣೆಕಟ್ಟಾಗಿದೆ.

ಇತ್ತ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಯಾಣ- ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳಗೊಂಡಿದೆ. ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಭಾರೀ ಪ್ರಮಾಣ ಹೆಚ್ಚಳವಾಗುತ್ತಿದ್ದು, 24 ಗಂಟೆಗಳಲ್ಲಿ ಬರೋಬ್ಬರಿ 5 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ನಿನ್ನೆ ಶನಿವಾರ 13.90 ಟಿಎಂಸಿ ಇದ್ದ ನೀರಿನ ಸಂಗ್ರಹ ಇಂದು ಭಾನುವಾರ 18. 24 ಗೆ ಏರಿಕೆ ಆಗಿದೆ.

ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳ ಹರಿವು ಇರುವುದರಿಂದ ರೈತರಲ್ಲಿ ಸಂತಸ ಹೆಚ್ಚಿಸಿದೆ. ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರ ತೆಲಂಗಾಣ ರಾಜ್ಯಗಳ ರೈತರ ಜೀವನಾಡಿ ಆಗಿದೆ. ಇದೇ ರೀತಿ ಒಳ ಹರಿವು ಹೆಚ್ಚಾದರೆ 10 ರಿಂದ 15 ದಿನದಲ್ಲಿ ಜಲಾಶಯ ಭರ್ತಿ ಆಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Yogi Adityanath
ದೇಶ6 mins ago

Yogi Adityanath: ನಿಂತ ಜಾಗದಲ್ಲೇ ಬಡ ಮಹಿಳೆಗೆ ಮನೆ ಮಂಜೂರು ಮಾಡಿದ ಯೋಗಿ ಆದಿತ್ಯನಾಥ್;‌ ಇದು ‌Instant ಮಾನವೀಯತೆ

leopard attack
ರಾಯಚೂರು9 mins ago

Leopard Attack : ದಾಳಿ ಮಾಡಿದ ಚಿರತೆಯನ್ನು ಹೊಡೆದು ಕೊಂದು ಆಂಬ್ಯುಲೆನ್ಸ್‌ಗೆ ಹಾಕಿದ ಗ್ರಾಮಸ್ಥರು

Viral Video
ವೈರಲ್ ನ್ಯೂಸ್19 mins ago

Viral Video: ದುಬೈ ಮಾಲ್‌ನಲ್ಲಿ ಬೊಂಬೆಗಳೊಂದಿಗೆ ಬೊಂಬೆಯಾದ ಮಾಡೆಲ್‌! ಗ್ರಾಹಕರು ಕಕ್ಕಾಬಿಕ್ಕಿ

bomb threat
ಕರ್ನಾಟಕ19 mins ago

Bomb Threat: ಬಾಯ್‌ ಫ್ರೆಂಡ್‌ ಬಿಟ್ಟು ಹೋಗ್ತಾನೆ ಎಂದು ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ!

Puri Jagannath Yatra
ಧಾರ್ಮಿಕ29 mins ago

Puri Jagannath Yatra: ಪ್ರತಿ ವರ್ಷ ಹೊಸ ರಥ, ಜಗನ್ನಾಥನಿಗೆ ಜ್ವರ! ಪುರಿ ರಥ ಯಾತ್ರೆ ವಿಶೇಷ ಹಲವು!

Riyan Parag
ಪ್ರಮುಖ ಸುದ್ದಿ33 mins ago

Riyan Parag : ರಿಯಾನ್ ಪರಾಗ್​​ ಈ ಸಾಧನೆ ಮಾಡಿದ ಭಾರತದ ಮೊದಲ ಪುರುಷ ಆಟಗಾರ

Davanagere news
ಮಳೆ45 mins ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Viral News
ದೇಶ1 hour ago

Viral News: ಶಾಕಿಂಗ್‌ ಘಟನೆ! ಬುದ್ದಿ ಹೇಳಿದ ಗುರುವನ್ನೇ ಚುಚ್ಚಿ ಕೊಂದ ವಿದ್ಯಾರ್ಥಿ

ಪ್ರಮುಖ ಸುದ್ದಿ1 hour ago

Ravi Bishnoi : ಭಾರತ ಪರ ಸ್ಪಿನ್​ ಬೌಲಿಂಗ್​​ನಲ್ಲಿ ವಿಶೇಷ ಸಾಧನೆ ಮಾಡಿದ ರವಿ ಬಿಷ್ಣೋಯ್​​

Shashi Tharoor
ಕ್ರೀಡೆ1 hour ago

Shashi Tharoor: ಜಿಂಬಾಬ್ವೆ ಎದುರು ಭಾರತಕ್ಕೆ ಸೋಲು: ಲೇವಡಿ ಮಾಡಿದ ಶಶಿ ತರೂರ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Davanagere news
ಮಳೆ45 mins ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ1 hour ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ12 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ23 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ1 day ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ1 day ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

ಟ್ರೆಂಡಿಂಗ್‌