ಬಳ್ಳಾರಿ: ಬಳ್ಳಾರಿಯ ಹಿರಿಯ ಜೆಡಿಎಸ್ ಮುಖಂಡ ಹಾಗೂ ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಬುಧವಾರ (Congress) ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾತನಾಡಿದ ನಾರಾ ಪ್ರತಾಪ ರೆಡ್ಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಜನಪರವಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಬಳ್ಳಾರಿಯ ಜೀನ್ಸ್ ಬಗ್ಗೆ ಮಾತನಾಡಿದ್ದಾರೆ. ಜೀನ್ಸ್ ಕ್ಯಾಪಿಟಲ್ ಆಗಿ ಬಳ್ಳಾರಿ ಜಿಲ್ಲೆಯನ್ನಾಗಿ ಮಾಡುವುದಾಗಿ ಹೇಳಿದ್ದಾರೆ. ಕ್ಯಾಪಿಟಲ್ ಮಾಡಬೇಕು ಎಂದರೆ ಕಾಂಗ್ರೆಸ್ ಪಕ್ಷ ಗೆಲ್ಲಬೇಕು. ಚುನಾವಣೆ ಮುಗಿದ ಬಳಿಕ ಅದರ ಬಗ್ಗೆ ಕಾರ್ಯ ನಿರ್ವಹಿಸಲಾಗುವುದು ಎಂದರು.
ಇದನ್ನೂ ಓದಿ: DK Shivakumar : ಹೆಲಿಕಾಪ್ಟರ್ ದುರಂತದಲ್ಲಿ ಗ್ರೇಟ್ ಎಸ್ಕೇಪ್ ಬಳಿಕ ಅಜ್ಜಯ್ಯನ ಮೊರೆ ಹೋದ ಡಿಕೆಶಿ
ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣಕ್ಕೆ ಪ್ರಯತ್ನ
ಯುವಕರಿಗೆ ಉದ್ಯೋಗ ನಿರ್ಮಿಸಲು ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಬಳ್ಳಾರಿಯನ್ನು ಲಂಚ ಮುಕ್ತ ನಿರ್ಮಾಣ ಮಾಡಲು ನಾರಾ ಭರತ್ ರೆಡ್ಡಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಎಲ್ಲ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಬಿಜೆಪಿ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸೇರ್ಪಡೆಯಾಗಿರುವುದು ಸಂತಸದ ವಿಷಯ
ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಮಾತನಾಡಿ, ಪಕ್ಷದಲ್ಲಿ ಅನುಭವಿ ರಾಜಕಾರಣಿಗಳು ಇರಬೇಕು, ಆಗ ಮಾತ್ರ ಪಕ್ಷ ಸಂಘಟನೆ ಮಾಡಲು ಸಾಧ್ಯ. ಆದ್ದರಿಂದ ನಾರಾ ಪ್ರತಾಪ್ ರೆಡ್ಡಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಸಂತಸದ ವಿಷಯ ಹಾಗೂ ಪಕ್ಷಕ್ಕೆ ಬಲ ಬಂದಂತಾಗಿದೆ ಎಂದರು.
ಇದನ್ನೂ ಓದಿ: Karnataka Election : ಚನ್ನಗಿರಿಯಲ್ಲಿ ಪಕ್ಷೇತರನಿಗೆ ಸಪೋರ್ಟ್; ಮಾಡಾಳು ಪುತ್ರನ ಜತೆ ಬಿಜೆಪಿ ಒಳ ಒಪ್ಪಂದ?
ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ
ಸಂಸದ ನಾಸೀರ್ ಹುಸೇನ್ ಮಾತನಾಡಿ, ನಾರಾ ಪ್ರತಾಪ್ ರೆಡ್ಡಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಆಯೋಜಿಸಬೇಕಿತ್ತು. ಕೆಲ ಕಾರಣಗಳಿಂದ ಸೇರ್ಪಡೆ ಕಾರ್ಯಕ್ರಮವನ್ನು ಬಳ್ಳಾರಿಯಲ್ಲಿ ಆಯೋಜಿಸಲಾಯಿತು. ನಾರಾ ಪ್ರತಾಪ್ ರೆಡ್ಡಿ ಅವರಿಗೆ ಜೆಡಿಎಸ್ ಪಕ್ಷದಲ್ಲಿ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ ಅನುಭವವಿದೆ. ಅವರ ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತೆ ಆಗಿದೆ ಎಂದು ತಿಳಿಸಿದರು.
ನನ್ನ ಚಿಕ್ಕಪ್ಪ ಎಂದು ಹೇಳುವುದಕ್ಕೆ ಬಹಳ ಸಂತಸ
ನಗರ ಕ್ಷೇತ್ರ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಮಾತನಾಡಿ, ನನ್ನ ಚಿಕ್ಕಪ್ಪ ನಾರಾ ಪ್ರತಾಪ್ ರೆಡ್ಡಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ನನಗೆ ನೂರು ಆನೆ ಬಲ ಬಂದಂತೆ ಆಗಿದೆ. ಕಂಪ್ಲಿ, ಗ್ರಾಮೀಣ, ನಗರ ಹಾಗೂ ಸಿರಗುಪ್ಪ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಜೆ ಸುಲಭವಾಗಿ ಜಯಶೀಲರಾಗುತ್ತವೆ ಎಂಬ ನಂಬಿಕೆ ಬಂದಿದೆ. ನಾರಾ ಪ್ರತಾಪ್ ರೆಡ್ಡಿ ಅವರು ನನ್ನ ಚಿಕ್ಕಪ್ಪ ಎಂದು ಹೇಳುವುದಕ್ಕೆ ಬಹಳ ಸಂತಸವಾಗುತ್ತದೆ. ಹಲವಾರು ರೈತ ಪರ ಹೋರಾಟಗಳಿಂದ ಜನಮನ್ನಣೆ ಪಡೆದ ವ್ಯಕ್ತಿಯಾಗಿದ್ದಾರೆ ಎಂದರು.
ಇದನ್ನೂ ಓದಿ: Manappuram Finance : ಮಣಪ್ಪುರಂ ಫೈನಾನ್ಸ್ ಕಚೇರಿಗೆ ಇ.ಡಿ ದಾಳಿ
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಕಲ್ಲುಕಂಭ ಪಂಪಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಫೀಕ್, ಶರತ್ ರೆಡ್ಡಿ ಹಾಗೂ ಇತರರಿದ್ದರು.