Site icon Vistara News

Ballary News: ಜಮೀನಿನಲ್ಲಿದ್ದ 11 ಕ್ವಿಂಟಾಲ್ ಮೆಣಸಿನಕಾಯಿ ಕಳವು; ರೈತನ ತುತ್ತು ಅನ್ನಕ್ಕೆ ಕಳ್ಳರ ಕನ್ನ, ಎಫ್ಐಆರ್ ದಾಖಲು

Chilli Stolen ballary Moka Village

#image_title

ಬಳ್ಳಾರಿ: ಮನೆಯಲ್ಲಿ ಕಳ್ಳತನ, ವಾಹನಗಳಲ್ಲಿ ದರೋಡೆ ಮಾಡುವವರನ್ನು ನೋಡಿದ್ದೇವೆ, ಹಣ ಮತ್ತು ಬಂಗಾರದ ಒಡವೆಗಳ ಕಳ್ಳತನ ಮಾಡಿರುವುದನ್ನು ನೋಡಿದ್ದೇವೆ. ಅದರೆ ಬಳ್ಳಾರಿಯಲ್ಲಿ (Ballary News) ರೈತರ ತುತ್ತು ಅನ್ನಕ್ಕೂ ಕನ್ನ ಹಾಕಿದ ಘಟನೆ ನಡೆದಿದೆ. ಜಮೀನಿನಲ್ಲಿ ಬೆಳೆದ ಕ್ವಿಂಟಾಲ್ ಗಟ್ಟಲೆ ಮೆಣಸಿನಕಾಯಿ ಕಳವಾಗಿರುವುದು ರೈತನನ್ನು ಚಿಂತೆಗೀಡು ಮಾಡಿದೆ.

ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದ ಜಮೀನಿನಲ್ಲಿ ಕಣವೆ ಮಾಡಿದ್ದ ಸುಮಾರು ೧೧ ಕ್ವಿಂಟಾಲ್ ಮೆಣಸಿನಕಾಯಿಯನ್ನು ಕಳ್ಳರು ವಾಹನದಲ್ಲಿ ತುಂಬಿಕೊಂಡು ಹೋಗಿದ್ದಾರೆ. ರಾತ್ರೋರಾತ್ರಿ ಗೂಡ್ಸ್ ವಾಹನವನ್ನು ತೆಗೆದುಕೊಂಡು ಬಂದ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: Valentine Week: ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಮತ್ತೆ ರಿಲೀಸ್‌ ಆದ ʻದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆʼ: ವ್ಯಾಲೆಂಟೈನ್ಸ್ ವೀಕ್‌ಗೆ ಬಂಪರ್‌!

ವರ್ಷದ ತತ್ತು ಅನ್ನಕ್ಕೆ ಕನ್ನ

ಮೋಕಾ ಗ್ರಾಮದ ಕೆ.ಬಸವರಾಜ್ ತಮ್ಮ ೨.೪೨ ಎಕರೆ ಪ್ರದೇಶದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಮೆಣಸಿನಕಾಯಿಯನ್ನು ಕಣವೆ ಮಾಡಿ ಹಾಕಿದ್ದರು. ರೈತ ಮನೆಗೆ ಹೋಗಿರುವ ಸಮಯವನ್ನು ನೋಡಿದ ಕಳ್ಳರು ಕನ್ನ ಹಾಕಿದ್ದಾರೆ. ಬೆಳಗ್ಗೆ ಬಂದು ನೋಡಿದಾಗ ಮೆಣಸಿನಕಾಯಿ ಕಳವಾಗಿರುವುದು ಕಂಡು ಬಂದಿದೆ.

ಇದನ್ನೂ ಓದಿ: Rashmika Mandanna: ನೆಲ ಒರೆಸುವ ಬಟ್ಟೆ ಹಾಗಿದೆ ಎಂದ ನೆಟ್ಟಿಗರು: ರಶ್ಮಿಕಾ ಧರಿಸಿದ ಟಾಪ್‌ ಬೆಲೆ ಎಷ್ಟು?

ಠಾಣೆಯ ಮಟ್ಟಿಲು ಏರಿದ ರೈತ

ಜಮೀನಿನಲ್ಲಿ ಬೆಳೆದ ಅದರಲ್ಲೂ ರೈತರು ಕಣ ಮಾಡಿದ ಬೆಳೆ ಕಳವಾಗುವುದು ಬಲು ಅಪರೂಪ. ಇಡೀ ವರ್ಷದ ನಿತ್ಯದ ತುತ್ತು ಅನ್ನಕ್ಕೆ ಆಧಾರವಾಗಿರುವ ಮೆಣಸಿನಕಾಯಿ ಕಳವಾಗಿರುವುದರಿಂದ ದಿಕ್ಕು ತೋಚದ ಬಸವರಾಜ್ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ. ಮೋಕಾ ಪೊಲೀಸರು ದೂರು ದಾಖಲಿಸಿಕೊಂಡು, ಮೆಣಸಿನಕಾಯಿ ಕಳ್ಳನಿಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Women’s T20 World Cup: ಶ್ರೀಲಂಕಾ ವಿರುದ್ಧ ಮೂರು ರನ್​ ಅಂತರದಿಂದ ಸೋಲು ಕಂಡ ದಕ್ಷಿಣ ಆಫ್ರಿಕಾ

Exit mobile version