Site icon Vistara News

PM Modi Birthday: ಧಾನ್ಯದಲ್ಲಿ ಅರಳಿದ ಪ್ರಧಾನಿ ಮೋದಿ ಚಿತ್ರ; ವಿಶೇಷವಾಗಿ ಶುಭ ಕೋರಿದ ಬನವಾಸಿ ಕಲಾವಿದ

PM Narendra Modi

ಶಿರಸಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ (PM Modi Birthday) 73ನೇ ಹುಟ್ಟು ಹಬ್ಬದ ಪ್ರಯುಕ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ಹವ್ಯಾಸಿ ಕಲಾವಿದರಾದ ಗಣೇಶ ಖರೆ ಅವರು ವಿವಿಧ ಧಾನ್ಯಗಳನ್ನು ಬಳಸಿ ನರೇಂದ್ರ ಮೋದಿ ಅವರ ಚಿತ್ರ ಬಿಡಿಸುವ ಮೂಲಕ ಜನ ಮೆಚ್ಚಿದ ನಾಯಕನಿಗೆ ವಿಶೇಷವಾಗಿ ಶುಭ ಕೋರಿದ್ದಾರೆ.

ಕಲಾವಿದ ಗಣೇಶ ಖರೆ

ಈ ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಜಗ ಮೆಚ್ಚಿನ ನಾಯಕರಾಗಿದ್ದಾರೆ. ರೈತ ನಾಯಕರಾಗಿ ಜನರ ಮನಸ್ಸನ್ನು ಸೆಳೆದಿರುವ ಪ್ರಧಾನಿಯವರಿಗೆ ಜನ್ಮದಿನದ ಶುಭ ಕೋರಲು ದೇಶದ ಬೆನ್ನೆಲುಬು ಆಗಿರುವ ರೈತರು ಬೆಳೆದ ಧಾನ್ಯಗಳನ್ನು ಬಳಸಿಕೊಂಡು ಅವರ ಚಿತ್ರ ಬಿಡಿಸಲಾಗಿದೆ. ಗೋಧಿ, ಎಳ್ಳು, ತೊಗರಿ, ಬಿಳಿ ಎಳ್ಳು ಸೇರಿ ಹಲವಾರು ಧಾನ್ಯಗಳನ್ನು ಇದಕ್ಕೆ ಬಳಸಲಾಗಿದೆ ಎಂದು ತಿಳಿಸಿದ್ದಾರೆ.

ವಿವಿಧ ಧಾನ್ಯಗಳನ್ನು ಬಳಸಿ 10 ಅಡಿ ಉದ್ದ, 18 ಅಗಲವಾಗಿ ನರೇಂದ್ರ ಮೋದಿ ಅವರ ಚಿತ್ರವನ್ನು ಕಲಾವಿದರಾದ ಗಣೇಶ ಖರೆ ಅವರು ಬಿಡಿಸಿದ್ದಾರೆ. ಇದಕ್ಕೆ ಸುಮಾರು 60 ಕೆಜಿ ಧಾನ್ಯಗಳನ್ನು ಬಳಸಲಾಗಿದೆ.

ಇದನ್ನೂ ಓದಿ | PM Modi Birthday: ನರೇಂದ್ರ ಮೋದಿಯ ಅಚ್ಚುಮೆಚ್ಚಿನ ಟಾಪ್‌ 10 ಖಾದ್ಯಗಳಿವು

Exit mobile version