Site icon Vistara News

Bangalore airport: ಸೆ.12ರಿಂದ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ನಿಂದ ಅಂತಾರಾಷ್ಟ್ರೀಯ ಯಾನ

Bengaluru Airport Terminal 2

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Bangalore Airport) ಟರ್ಮಿನಲ್ 2ರಲ್ಲಿ (Terminal 2) ಸೆಪ್ಟೆಂಬರ್ 12ರಿಂದ ಅಂತಾರಾಷ್ಟ್ರೀಯ ವಿಮಾನ ಯಾನ (International Air Travel) ಕಾರ್ಯಾಚರಣೆಗಳು ಆರಂಭವಾಗಲಿವೆ.

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಅಧಿಕಾರಿಗಳು ಇದನ್ನು ತಿಳಿಸಿದ್ದಾರೆ. ಕಳೆದ ಗುರುವಾರ ರಾತ್ರಿ ಪ್ರಾರಂಭವಾಗಬೇಕಿದ್ದ ವಿಮಾನಯಾನವನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿತ್ತು. ಸಿದ್ಧತೆಯ ಕೊರತೆಯಿಂದಾಗಿ ಸ್ವಲ್ಪ ವಿಳಂಬವಾಗಿದೆ ಎಂದು ವಿಮಾನ ನಿಲ್ದಾಣದ (Kempegowda International Airport) ನಿರ್ವಾಹಕ ಸಂಸ್ಥೆ ಬಿಐಎಎಲ್ ತಿಳಿಸಿತ್ತು. ಬುಧವಾರ ತಡರಾತ್ರಿ ನಡೆದ ಸನ್ನದ್ಧತೆ ಪರಿಶೀಲನಾ ಸಭೆಯ ನಂತರ ಟರ್ಮಿನಲ್‌ನಲ್ಲಿ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳ ಆರಂಭವನ್ನು ಮುಂದೂಡಲಾಗಿತ್ತು.

ಇದೀಗ “ವಿಮಾನ ನಿಲ್ದಾಣದ ನಿಯಂತ್ರಕ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇತರೆಲ್ಲರೊಂದಿಗೆ ಸಮಾಲೋಚಿಸಲಾಗಿದೆ. ಸೆಪ್ಟೆಂಬರ್ 12ರಂದು ಬೆಳಿಗ್ಗೆ 10.45ರಿಂದ BLR ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಘೋಷಿಸಲು ಸಂತೋಷವಾಗಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ. “ನಿಯಂತ್ರಣ ನಿಗಾ, ಕಾರ್ಯಾಚರಣೆಯ ನಿಖರತೆ, ಪ್ರಯಾಣಿಕರ ಅನುಕೂಲತೆ ಸೇರಿದಂತೆ ವಿವಿಧ ಅಂಶಗಳ ಎಚ್ಚರಿಕೆಯ ಮೌಲ್ಯಮಾಪನದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ವಕ್ತಾರರು ಹೇಳಿದ್ದಾರೆ.

ಇದನ್ನೂ ಓದಿ: Bengaluru airport trains : ಬೆಂಗಳೂರು ಏರ್‌ಪೋರ್ಟ್‌ಗೆ ರೈಲು ಸಂಚಾರ ಸ್ಥಗಿತ, ಕಾರಣವೇನು?

Exit mobile version