ದೇವನಹಳ್ಳಿ: ಯುಟ್ಯೂಬರ್ಸ್ ವೀವ್ಸ್ ಹೆಚ್ಚಿಸಿಕೊಳ್ಳಲು ಏನೇನೋ ಮಾಡಿದರೆ ಕೇಸ್ ಬೀಳೋದು ಪಕ್ಕಾ. ಯಾಕೆಂದರೆ ಇಲ್ಲೊಬ್ಬ ಯುವಕ ಏರ್‌ಪೋರ್ಟ್‌ನಲ್ಲಿ ವಿಡಿಯೊ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಪಟ್ಟಣದ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಬಂಧಿತ ಪ್ರದೇಶದಲ್ಲಿ ವಿಡಿಯೊ ಮಾಡಿದ ಯುಟ್ಯೂಬರ್‌ನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಯುಟ್ಯೂಬ್ ಚಾನೆಲ್‌ನಲ್ಲಿ ವೀವ್ಸ್ ಹೆಚ್ಚಿಸಿಕೊಳ್ಳುವ ಭರದಲ್ಲಿ ನಿಯಮ ಮೀರಿ ವಿಡಿಯೊ ಮಾಡಿದ್ದರಿಂದ ಯುವಕನನ್ನು ಏರ್‌ಪೋರ್ಟ್ ಠಾಣೆ ಪೊಲೀಸರು ಬಂಧಿಸಿ, ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಯಲಹಂಕ ಮೂಲದ ಯುಟ್ಯೂಬರ್ ವಿಕಾಸ್ ಗೌಡ ಬಂಧಿತ. ಏರ್ಪೋರ್ಟ್ ರನ್ ವೇ ಚಿತ್ರೀಕರಣ ಮಾಡಿ ಯುಟ್ಯೂಬರ್ ಸಿಕ್ಕಿಹಾಕಿಕೊಂಡಿದ್ದು, ಟಿಕೆಟ್ ಇಲ್ಲದೆ ಒಳಗಡೆ ಹೋಗಿದ್ದೆ, 24 ಗಂಟೆ ರನ್ ವೇ ಬಳಿಯೇ ಇದ್ದೆ ಎಂದು ವಿಡಿಯೊದಲ್ಲಿ ಯುವಕ ಹೇಳಿಕೊಂಡಿದ್ದಾನೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರಿಂದ ಸಿಐಎಸ್ಎಫ್ ಅಧಿಕಾರಿಗಳು ಕೇಸ್ ದಾಖಲಿಸಿದ್ದಾರೆ. ಹೀಗಾಗಿ ಏರ್‌ಪೋರ್ಟ್ ಠಾಣೆ ಪೊಲೀಸರು ಯುಟ್ಯೂಬರ್ ವಿಕಾಸ್ ಗೌಡನನ್ನು ಬಂಧಿಸಿದ್ದಾರೆ.
ವಿಡಿಯೊ ಮಾಡುವ ವೇಳೆ ಟಿಕೆಟ್ ಪಡೆಯದೆ ಒಳಗೆ ಹೋಗಿರುವುದಾಗಿ ಯುವಕ ಹೇಳಿಕೊಂಡಿದ್ದ. ಆದರೆ, ಪೊಲೀಸರ ವಿಚಾರಣೆ ವೇಳೆ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಪಡೆದಿರುವುದಾಗಿ ಹೇಳಿದ್ದಾನೆ. ಟಿಕೆಟ್ ಪಡೆದು ಪ್ರಯಾಣ ಮಾಡದೇ ಯುವಕ ರನ್ ವೇನಲ್ಲಿ ಉಳಿದುಕೊಂಡಿದ್ದ. ಸುಮಾರು ನಾಲ್ಕೈದು ಗಂಟೆಗಳ ಕಾಲ ಅಲ್ಲೇ ಇದ್ದು, ವಿಡಿಯೊ ಮಾಡಿಕೊಂಡು ಬಂದಿದ್ದ.
ಇದನ್ನೂ ಓದಿ | Bengaluru News: ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ
ಎಲ್ಲಾ ಅಧಿಕಾರಿ, ಸಿಬ್ಬಂದಿ ಕಣ್ತಪ್ಪಿಸಿ ಏರ್ಪೋರ್ಟ್ ಪ್ರವೇಶ ಮಾಡಿದ್ದಾಗಿ ವಿಡಿಯೋ ಮಾಡಿದ್ದರಿಂದ ವಿಕಾಸ್‌ನನ್ನು ಏರ್ಪೋರ್ಟ್ ಠಾಣೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾಟರ್ ಟ್ಯಾಂಕರ್‌ಗೆ ಡಿಕ್ಕಿಯಾಗಿ ಬೈಕ್ ಹಿಂಬದಿ ಸವಾರ ಸಾವು
ಬೆಂಗಳೂರು: ವಾಟರ್ ಟ್ಯಾಂಕರ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ (Road Accident) ನಗರದಲ್ಲಿ ನಡೆದಿದೆ. ಅಣ್ಣಪ್ಪಣ್ಣ ಲೇಔಟ್‌ನ ತುಂಗಾ ನಗರದಲ್ಲಿ ನಡೆದ ಅಪಘಾತ ಬೆಚ್ಚಿ ಬೀಳಿಸುವಂತೆ ಇದ್ದು, ಎದೆ ಜಲ್ ಎನ್ನಿಸುವ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹರೀಶ್ ಮೃತ ಸವಾರ, ಸುಜೀತ್ ಗಾಯಳುವಾಗಿದ್ದಾರೆ. ಅಪಘಾತದ ಬಳಿಕ ಟ್ಯಾಂಕರ್ ಚಾಲಕ ಅನಿಲ್ ಪರಾರಿಯಾಗಿದ್ದಾನೆ. ಮೃತ ಹರೀಶ್ ಆಟೋ ಚಾಲಕನಾಗಿದ್ದು, ಸುಜೀತ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ. ಭಾನುವಾರ ತಡರಾತ್ರಿ 2 ಗಂಟೆಯ ವೇಳೆ ಇಬ್ಬರೂ ಬೈಕ್‌ನಲ್ಲಿ ಹೋಗುವ ಸಂದರ್ಭದಲ್ಲಿ ಎದುರುಗಡೆ ದಿಢೀರಣೆ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಈ ವೇಳೆ ಗಂಭಿರವಾಗಿ ಗಾಯಗೊಂಡ ಹರೀಶ್ ಮೃತಪಟ್ಟಿದ್ದಾರೆ. ಅಕ್ಕ ಪಕ್ಲದ ಸ್ಥಳೀಯರು ಭಾರಿ ಶಬ್ದಕ್ಕೆ ಬೆಚ್ಚಿ ಬಿದ್ದು ಸ್ಥಳಕ್ಕೆ ಆಗಮಿಸಿ ಸುಜೀತ್‌ನನ್ನು ಕಾಪಾಡಿದ್ದಾರೆ.
ಯುವಕರು ತುಂಗಾನಗರ ಹೊಸಹಳ್ಳಿಯ ಮನೆಯೊಂದರಲ್ಲಿ ಬೇರೆ ಬೇರೆಯಾಗಿ ಬಾಡಿಗೆಗೆ ಇದ್ದವರು. ಪೊಲೀಸ್ ಮೂಲಗಳ ಪ್ರಕಾರ ಸಾಫ್ಟ್ವೇರ್ ಎಂಜಿನಿಯರ್ ಸುಜೀತ್ ವಿಪರೀತ ಕುಡುಕ. ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬಂತೆ ಹರೀಶ್ ಕೂಡ ಸುಜೀತ್ ಜೊತೆ ಸೇರಿ ಕುಡಿಯುವ ಚಟ ಅಂಟಿಸಿಕೊಂಡಿದ್ದ. ಹೀಗೆ ಕಂಠಮಟ್ಟ ಕುಡಿದು ಮನೆಗೆ ಹೋಗುವಂತಹ ಸಂಧರ್ಭದಲ್ಲಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದಾರೆ. ರಸ್ತೆ ಸ್ವಲ್ಪ ಮಟ್ಟಿಗೆ ತಿರುವು ಇದ್ದ ಕಾರಣ ಎದುರು ಬಂದ ವಾಹನ ಅಷ್ಟಾಗಿ ಕಾಣಿಸೋದಿಲ್ಲ. ಅಲ್ಲದೆ ರಾತ್ರಿ ವೇಳೆ ಅಷ್ಟಾಗಿ ವಾಹನ ಇರೋದಿಲ್ಲ ಎಂಬ ಕಾರಣಕ್ಕೆ ಇಬ್ಬರೂ ಕೂಡ ಅತಿ ವೇಗವಾಗಿಯೇ ಬಂದಿದ್ದ ಹಿನ್ನಲೆ ಘಟನೆ ನಡೆದಿದೆ.
ಮೃತ ಹರೀಶ್‌ಗೆ ಒಂದು ವರ್ಷದ ಹಿಂದೆ ಮದುವೆಯಾಗಿ 11 ತಿಂಗಳ ಮಗು ಕೂಡ ಇದೆ. ಇನ್ನು ಮೃತ ಹಾಗು ಸವಾರ ಇಬ್ನರೂ ಕೂಡ ಕುಡಿದಿದ್ದು ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಘಟನೆ ನಡೆದ ಬಳಿಕ ಟ್ಯಾಂಕರ್ ಚಾಲಕ ಅಲ್ಲಿಂದ ಎಸ್ಕೇಪ್ ಆಗಿದ್ದ. ಇನ್ನು ಸಾಫ್ಟ್‌ವೇರ್ ಎಂಜಿನಿಯರ್ ಸುಜೀತ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ | Robbery case : ಎಎಸ್‌ಐ ಬೈಕ್ ಎಗರಿಸಿ ಹೆದ್ದಾರಿಯಲ್ಲಿ ರಾಬರಿ; ಖತರ್ನಾಕ್ ಗ್ಯಾಂಗ್ ಅರೆಸ್ಟ್
ಟ್ಯಾಂಕರ್ ಚಾಲಕನಿಗಾಗಿ ಶೋಧ
ಅಪಘಾತ ಎಸಗಿ ಎಸ್ಕೇಪ್ ಆಗಿರುವ ಚಾಲಕ ಅನಿಲ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈತ ಅಪಘಾತ ಬಳಿಕ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಟ್ಯಾಂಕರ್ ನಿಲ್ಲಿಸಿ ಎಸ್ಕೇಪ್ ಆಗಿದ್ದ. ಹೀಗಾಗಿ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.