ಬೆಂಗಳೂರು: ಮುಂಬೈ, ದೆಹಲಿಯಂತಹ ನಗರಗಳಲ್ಲಿ ಹೋಟೆಲ್ಗಳು 24/7 ಓಪನ್ ಇರಲು ಸರ್ಕಾರದ ಅನುಮತಿ ಇರುವಂತೆಯೇ ಬೆಂಗಳೂರಿನಲ್ಲೂ ಅವಕಾಶ ನೀಡಬೇಕು ಎಂದು ಪೊಲೀಸ್ ಇಲಾಖೆಯನ್ನು ಹೋಟೆಲ್ ಮಾಲೀಕರು ಒತ್ತಾಯಿಸಿದ್ದಾರೆ. ಹೋಟೆಲ್ ಸೇರಿ ಎಲ್ಲ ಉದ್ದಿಮೆಗಳನ್ನೂ ದಿನದ 24 ಗಂಟೆಯೂ ತೆರೆಯಲು ಅವಕಾಶ ನೀಡಿ 2019ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಅನುಗುಣವಾಗಿ ಅವಕಾಶ ನೀಡಿ ಎಂಬ ಒತ್ತಾಯವನ್ನು ಮಾಡಿದ್ದಾರೆ.
2019ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಎಲ್ಲ ಉದ್ದಿಮೆದಾರರೂ ಸ್ವಾಗತಿಸಿದ್ದರು. ಇನ್ನೇನು ಆದೇಶ ಜಾರಿ ಆಗಬೇಕು ಎನ್ನುವಷ್ಟರಲ್ಲಿ ಕೊರೋನಾ ಸಂಕಷ್ಟ ಎದುರಾಗಿತ್ತು. ಸಾಕಷ್ಟು ಹೋಟೆಲ್ಗಳು ನಷ್ಟ ಅನುಭವಿಸುವಂತಾಗಿತ್ತು. ಅನೇಕ ಹೋಟೆಲ್ಗಳು ಮುಚ್ಚಿದವು. ಈಗ ಕೊರೋನಾ ಭೀತಿಯಿಂದ ಹೊರಬಂದಿರುವ ಕಾರಣ ಹೋಟೆಲ್ ಸಂಘದವರು ಲಾಭದತ್ತ ಮುಖಮಾಡಿದ್ದಾರೆ. ಸರ್ಕಾರ ನೀಡಿರುವ ಅನುಮತಿಯ ಅಧೀಸೂಚನೆ ಜಾರಿಗಾಬೇಕು ಎಂದಿದ್ದಾರೆ. ಅಧಿಸೂಚನೆಗೆ ಅನುಗುಣವಾಗಿ ಪೊಲೀಸರು ಅನುಮತಿ ನೀಡಬೇಕು. ಈ ಕುರಿತು ಶೀಘ್ರದಲ್ಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೃಹತ್ ಬೆಂಗಳೂರು ಹೋಟೆಲ್ ಸಂಘದ ಸದಸ್ಯರು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ಗೆ ಮನವಿ ಮಾಡಿದ್ದಾರೆ.
ಏನೇನು ತೆರೆದಿರುತ್ತದೆ?
ಬೆಂಗಳೂರು ನಗರದಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ನೌಕರರು, ವಾಹನ ಚಾಲಕರು, ನಗರದ ವ್ಯಾಪಾರಿಗಳು, ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹೋಟೆಲ್ಗಳು, ಬೇಕರಿಗಳು, ಆಹಾರೋತ್ಪನ್ನ, ಬಟ್ಟೆ ಅಂಗಡಿ ಸೇರಿದಂತೆ ಇನ್ನಿತರೆ ಅಂಗಡಿಗಳು ದಿನದ 24 ಗಂಟೆ ತೆರೆದಿಡಬಹುದು.
ಎದುರಿರುವ ಆತಂಕಗಳು?
- ರಾತ್ರಿ ಓಡಾಟ ಹೆಚ್ಚಾಗುವುದರಿಂದ ನಗರದಲ್ಲಿ ಕ್ರೈಂ ಸಂಖ್ಯೆ ಏರಿಕೆ ಆಗಬಹುದು ಎಂಬುದು ಪೊಲೀಸರ ಆತಂಕ.
- ರಾತ್ರಿಯಲ್ಲಿ ಹೋಟೆಲ್, ಇತರೆ ನೌಕರರು ಹಾಗೂ ಸಾರ್ವಜನಿಕರ ಸುರಕ್ಷೆಯ ಹೊಣೆ ಪೊಲೀಸರದ್ದಾಗಿರುತ್ತದೆ. ಅವರಿಗೆ ಭದ್ರತೆಯನ್ನು ಕಲ್ಪಿಸಲು ಪೊಲೀಸರು ಕಷ್ಟಪಡಬೇಕಾಗಬಹುದು.
- ರಾತ್ರಿ ವೇಳೆ ರಸ್ತೆ ಖಾಲಿ ಇರುತ್ತದೆ ಎಂದು ಮನಸೋಯೆಚ್ಛೆ ವಾಹನ ಚಲಾಯಿಸುವವರು ಹೆಚ್ಚಬಹುದು. ಮದ್ಯಸೇವನೆ ಮಾಡಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಬಹುದು. ಅದರಿಂದ ಆಕ್ಸಿಡೆಂಟ್ ಸಂಖ್ಯೆ ಏರಬಹುದು. ಇದನ್ನು ತಡೆಯಲು ನಗರದಲ್ಲಿ ಸಿಗ್ನಲ್ ನಿಯಮವನ್ನು ಇಡೀ ರಾತ್ರಿ ಚಾಲತಿಯಲ್ಲಿಡಬೇಕಾಗುತ್ತದೆ. ಈ ಕುರಿತು ಪೊಲೀಸ್ ಇಲಾಖೆ ಚಿಂತನೆ ನಡೆಸಬೇಕಾಗುತ್ತದೆ.
- ಹೋಟೆಲ್ ಇಡೀ ರಾತ್ರಿ ತೆರೆದಿಡುವುದರಿಂದ ವಿದ್ಯತ್ ಹಾಗೂ ನೀರಿನ ಸಮಸ್ಯೆ ಎದುರಾಗಬಹುದು. ಹಾಗೂ ನಗರದಲ್ಲಿ ತ್ಯಾಜ್ಯದ ಪ್ರಮಾಣ ಅಧಿಕಗೊಳ್ಳಬಹುದು.
ಇದರಿಂದ ಆಗುವ ಅನುಕೂಲಗಳು?
- ಇಡೀ ರಾತ್ರಿ ಅಂಗಡಿಗಳು ತೆರೆದಿಡುವುದರಿಂದ ಆತಂಕಗಳು ಎಷ್ಟಿವೆಯೋ ಅದರಿಂದ ಅನುಕೂಲಗಳು ಸಾಕಷ್ಟಿವೆ.
- ಇದರಿಂದ ಮುಖ್ಯವಾಗಿ ಹೋಟೆಲ್ ಮಾಲೀಕರಿಗೆ ತುಂಬಅ ಸಹಾಯವಾಗುತ್ತದೆ. ಜಾಗದ ಬಾಡಿಗೆ ಕಟ್ಟುತ್ತಿರುವ ಮಾಲೀಕರು, ಅದೇ ಬಾಡಿಗೆಯಲ್ಲಿ ಹೆಚ್ಚಿನ ಆದಾಯ ಪಡೆಯಬಹುದು. ಕೇವಲ 10ರಿಂದ 12 ಗಂಟೆ ತೆರೆದಿಟ್ಟು ಆದಾಯ ಗಳಿಸಿದರೂ ಜಾಗದ ಬಾಡಿಗೆ ಕಟ್ಟುವಷ್ಟೇ ಕಟ್ಟಬೇಕು. ಆದರೆ, 24 ಗಂಟೆ ತೆರಿದಿದ್ದರೆ ಹೆಚ್ಚಿನ ಆದಾಯ ಉತ್ಟತ್ತಿಯಾಗುತ್ತದೆ.
- ಅಧಿಕ ಉದ್ಯೋಗ ಅವಕಾಶ
ಹೋಟೆಲ್ನಲ್ಲಿ ಅರೆಕಾಲಿಕ ಉದ್ಯೋಗ ಮಾಡುವವರಿಗೆ ಅವಕಾಶಗಳು ಹೆಚ್ಚಾಗುತ್ತದೆ. - ರಾತ್ರಿ ಪಾಳಿಯ ನೌಕರರಿಗೆ ಸಂತೋಷ
ಬೆಂಗಳೂರು ನಗರದಲ್ಲಿ ಹಲವು ಕಾಲ್ ಸೆಂಟರ್ಗಳು, ಉದ್ಯೋಗ ಕಂಪೆನಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತವೆ. ನೌಕರರು ರಾತ್ರಿ ಆಹಾರಕ್ಕಾಗಿ ಹೋಟೆಲ್ಗಳನ್ನು ಅವಲಂಬಿಸುತ್ತಾರೆ. ಅಂಥವರಿಗೆ ಇದೊಂದು ಸಿಹಿ ಸುದ್ದಿಯಾಗಿದೆ.
ವಾಹನ ಚಾಲಕರು, ಆಟೋರಿಕ್ಷಾ ಚಾಲಕರಿಗೆ ಇದರಿಂದ ಉಪಯೋಗವಾಗುತ್ತದೆ. ನಡುರಾತ್ರಿ ಆಹಾರಕ್ಕಾಗಿ ಪರದಾಡುವ ಸನ್ನಿವೇಶ ಎದುರಾಗುವುದಿಲ್ಲ. - ರಾತ್ರಿ ವೇಳೆ ನಗರದಲ್ಲಿ ಅಂಗಡಿಗಳು ತೆರೆದಿಡುವುದರಿಂದ ಕ್ರೈಂ ಸಂಖ್ಯೆ ಇಳಿಯಬಹುದು ಎಂದು ಈ ಹಿಂದೆ ನಗರದ ಕಮಿಷನರ್ ಆದ ಭಾಸ್ಕರ್ ರಾವ್ ಹೇಳಿದ್ದರು. ರಾತ್ರಿ ಜನರ ಓಡಾಟ ಹೆಚ್ಚುವುದರಿಂದ ರೌಡಿಗಳು, ಕಳ್ಳರು ಕ್ರೈಂ ಮಾಡುವ ಧೈರ್ಯ ಮಾಡುವುದಿಲ್ಲ. ಇದರಿಂದ ಅನುಕೂಲವಾಗುತ್ತದೆ ಎಂದು ಭಾಸ್ಕರ್ ರಾವ್ ತಿಳಿಸಿದ್ದರು.
- ಈಗಿನ ಯುವಕ/ಯುವತಿಯರಿಗೆ ನಡು ರಾತ್ರಿ ಏನಾದರೂ ಸೇವಿಸುವ ಆಸೆಯಾದಾಗ ಅಂಗಡಿ ಮುಚ್ಚಿರುತ್ತದೆ ಎಂಬ ಭಯವಿರುವುದಿಲ್ಲ. ಪತಿ ತನ್ನ ಪತ್ನಿಯನ್ನು ಹೋಟೆಲ್ಗೆ ಕರೆದುಕೊಂಡು ಹೋಗುವುದಾಗಿ ಹೇಳಿ ನಂತರ ಆಫೀಸ್ನಿಂದ ಹೊರಡಲು ತಡವಾದರೆ ಹೆಂಡತಿ ಹೋಟೆಲ್ ಮುಚ್ಚುತ್ತದೆ ಎಂದು ಕೋಪಮಾಡಿಕೊಳ್ಳುತ್ತಾಳೆ. ಹಾಗೆ ತಡಮಾಡುವ ಪತಿಯರಿಗೆ ಇದೊಂದು ಖುಷಿಯ ವಿಚಾರ ಎನ್ನಬಹುದು.