ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ (Bangalore-Mysore Highway) ಹೆದ್ದಾರಿಯಲ್ಲಿ ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತವಾಗಿದೆ. ಈ ಕುರಿತು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಖುಷಿಯಿಂದ ಪ್ರಯಾಣಿಸಿ, ಆದರೆ ಅತಿ ವೇಗ ಚಾಲನೆ ಬೇಡ. ಎಲ್ಲರೂ ಸುರಕ್ಷಿತವಾಗಿ ಚಲಿಸಿ ಎಂದು ಮನವಿ ಮಾಡಿದ್ದಾರೆ.
ಸುಮಾರು ಐದಾರು ಕಿ.ಮೀ ವರೆಗೆ ಮಂಡ್ಯ ಬೈಪಾಸ್ ನಿರ್ಮಾಣವಾಗಿದ್ದು, ಇದರಿಂದಾಗಿ ನಗರದಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಲಿದೆ. ಈಗಾಗಲೇ ರಾಮನಗರ ಹಾಗೂ ಚೆನ್ನಪಟ್ಟಣ ಬೈಪಾಸ್‌ಗಳು ಸಂಚಾರಕ್ಕೆ ಮುಕ್ತವಾಗಿದ್ದು, ಮಂಡ್ಯ ಹೊರವಲಯದ ಇಂಡುವಾಳು ಬಳಿಯ ಸೇತುವೆ ನಿರ್ಮಾಣ ಕಾಮಗಾರಿ ಇದರಿಂದ ವಾಹನ ಸವಾರರು ಸರ್ವೀಸ್ ರಸ್ತೆಯಲ್ಲಿ ಓಡಾಡಬೇಕಿತ್ತು. ಆದರೀಗ ಬೈಪಾಸ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬೆಂಗಳೂರು ಟು ಮೈಸೂರು ದಶಪಥ ಎಕ್ಸ್‌ಪ್ರೆಸ್ ಹೆದ್ದಾರಿ ಮಾರ್ಚ್‌ನಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.
ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್ ಹೈವೆಗೆ ಕಾವೇರಿ ಹೆಸರು
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ಕಾವೇರಿ ಮಾತೆ ಹೆಸರಿಡಲು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದ ಸಂಸದ ಪ್ರತಾಪ್ ಸಿಂಹ, ಗಂಗಾ, ಯಮನಾ, ಸರಸ್ವತಿ, ಗೋದಾವರಿ, ನರ್ಮದಾ, ಸಿಂಧೂ, ಕಾವೇರಿ ಭಾರತದ 7 ಪವಿತ್ರ ನದಿಗಳಾಗಿದ್ದು, ಕಾವೇರಿಯನ್ನು ದಕ್ಷಿಣ ಗಂಗಾ ಎನ್ನುತ್ತಾರೆ.
ಇದನ್ನೂ ಓದಿ: Bal Puarskar: ಬೆಂಗಳೂರಿನ 8 ವರ್ಷದ ಬಾಲಕ ರಿಷಿಗೆ ರಾಷ್ಟ್ರೀಯ ಬಾಲ ಪುರಸ್ಕಾರ, ಈತನ ಐಕ್ಯು ಐನ್‌ಸ್ಟೀನ್‌ಗಿಂತ ಹೆಚ್ಚು
ಉತ್ತರ ಪ್ರದೇಶದ ಹೆದ್ದಾರಿಗೆ ಗಂಗಾ ಹೈವೆ, ಮಧ್ಯಪ್ರದೇಶದ ಹೆದ್ದಾರಿಗೆ ನರ್ಮದಾ ಹೈವೆ ಎಂದು ಹೆಸರಿಡಲಾಗಿದೆ. ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ಸುತ್ತಲೂ ಅರಿಯುವ ಕಾವೇರಿಗೆ ಪಾರಂಪರಿಕ, ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆ ಇದೆ. ಆದ್ದರಿಂದ ದಶಪಥ ರಸ್ತೆಗೆ ಕಾವೇರಿ ಹೆಸರಿಡಲು ಮನವಿ ಮಾಡಲಾಗಿದೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ