ಬೆಂಗಳೂರು: ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ವರ್ಲ್ಡ್‌ಗೆಲ್ಲ ಫೇಮಸ್ ಆಗಿದೆ. ದೂರಾದೂರಿಗೆ ಬೇಕಾದರೂ ಹೋಗಿ ಬರಬಹುದು, ಬೆಂಗಳೂರಿನ ಟ್ರಾಫಿಕ್‌ಗೆ ಸಿಲುಕಿದರೆ ಮುಗಿದೆ ಹೋಯಿತು. ಸದ್ಯ ಸಿಟಿಯಲ್ಲಿನ ಟ್ರಾಫಿಕ್ (Bangalore Traffic) ಕಂಟ್ರೋಲ್‌ಗೆ ನಗರ ಸಂಚಾರಿ ಪೊಲೀಸರು ಡ್ರೋನ್ (Drone Camera) ಹಾರಿಸಿ ಕಂಟ್ರೋಲ್‌ಗೆ ತರಲು ಮುಂದಾಗಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರು ಪೊಲೀಸ್ ಇಲಾಖೆಯ ಜತೆ ಚರ್ಚೆ ನಡೆಸುವ ಸಮಯದಲ್ಲಿ ಟ್ರಾಫಿಕ್ ಜಾಮ್ ಬಗ್ಗೆ ಮಾತುಕತೆ ನಡೆಸಿದ್ದರು. ಟ್ರಾಫಿಕ್ ವಿಚಾರದಲ್ಲಿ ನಗರ ಕೆಟ್ಟ ಹೆಸರು ತೆಗೆದುಕೊಂಡಿದೆ. ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲೇಬೇಕು ಎಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಗತವಾಗಿದ್ದೇ ಈ ಡ್ರೋನ್ ಕಾನ್ಸೆಪ್ಟ್ .
ಸೋಮವಾರ (ಜೂ.19) ಪ್ರಾಯೋಗಿಕವಾಗಿ ಹೆಬ್ಬಾಳ ಮೇಲ್ಸೇತುವೆ, ಸಿಲ್ಕ್ ಬೋರ್ಡ್ ಜಂಕ್ಷನ್, ಕೆ.ಆರ್.ಪುರ ಮೇಲ್ಸೇತುವೆ, ಮಾರತ್‌ಹಳ್ಳಿ ಹಾಗೂ ಸಾರಕ್ಕಿ ಜಂಕ್ಷನ್, ಬನಶಂಕರಿ ಬಸ್ ನಿಲ್ದಾಣ, ಇಬ್ಬಲೂರು ಜಂಕ್ಷನ್, ಟ್ರಿನಿಟಿ ಜಂಕ್ಷನ್ ಬಳಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣವಾಗಿ ಡ್ರೋನ್ ಕೂಡ ಸಂಚಾರ ನಿಯಂತ್ರಣದ ಭಾಗವಾಗುತ್ತದೆ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಮಾಹಿತಿ ನೀಡಿದ್ದಾರೆ.
ಯಾವ ಟೈಂನಲ್ಲಿ ಡ್ರೋನ್ ಹಾರಾಟ?
ಇಲಾಖೆಯ ಬಳಿ ಇರುವ 8 ಡ್ರೋನ್‌ಗಳನ್ನು ನಾಲ್ಕು ಸಂಚಾರ ವಿಭಾಗಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಈ ಡ್ರೋನ್ ಅನ್ನು ಸಂಚಾರ ದಟ್ಟಣೆಯ ಸಮಯದಲ್ಲಿ (peak hours) ಮಾತ್ರ ಕಾರ್ಯನಿರ್ವಹಿಸುತ್ತದೆ. ಇದರ ಕಂಟ್ರೋಲ್ ನೇರವಾಗಿ ಕಮಾಂಡ್ ಸೆಂಟರ್‌ನಲ್ಲಿ ಇರಲಿದೆ. ಎಲ್ಲೆಲ್ಲಿ ಟ್ರಾಫಿಕ್ ಜಾಂ ಆಗಿರುತ್ತದೆಯೋ, ಅದರ ಸೂಚನೆಯನ್ನು ಮುಂದಿನ ಜಂಕ್ಷನ್‌ಗಳಿಗೆ ಮಾಹಿತಿ ನೀಡಲಾಗುತ್ತದೆ.
ಯಾವ ರೀತಿ ವಾಹನಗಳನ್ನು ಡೈವರ್ಟ್ ಮಾಡಬಹುದು. ಸಂಚಾರ ದಟ್ಟಣೆ ಇದ್ದರೆ ಅಲ್ಲಿ ಪೊಲೀಸರನ್ನು ನಿಯೋಜನೆ ಮಾಡುವುದು. ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವವರೆಗೂ ಡ್ರೋನ್ ಮೂಲಕ ಮಾಹಿತಿ ಪಡೆಯುವುದು. ಈ ವಿಷಯವನ್ನು ಸಾರ್ವಜನಿಕರಿಗೂ ಸಾಮಾಜಿಕ ಜಾಲತಾಣದ ಮೂಲಕ ವೇದಿಕೆಯನ್ನಾಗಿ ಬಳಸಿ ಪರ್ಯಾಯ ಮಾರ್ಗದ ಸೂಚನೆ ನೀಡಲಾಗುತ್ತದೆ.
ಇದನ್ನೂ ಓದಿ: Weather Report: ಮಲೆನಾಡಲ್ಲಿ ಭಾರಿ ಮಳೆ ಅಬ್ಬರ; ಕರಾವಳಿಗರೇ ನೀವೂ ಎಚ್ಚರ!
ಸದ್ಯ, ಗೂಗಲ್ ಮ್ಯಾಪ್ ಕೂಡ ಎಲ್ಲಿ ಟ್ರಾಫಿಕ್ ಜಾಂ ಇದೆ ಎಂಬುದರ ಮಾಹಿತಿಯನ್ನು ರೆಡ್ ಮಾರ್ಕ್ ಮೂಲಕ ಗೊತ್ತುಪಡಿಸುತ್ತದೆ. ಇದೇ ಕಾನ್ಸೆಪ್ಟ್‌ನ್ನು ಹೊಂದಿರುವ ಡ್ರೋನ್ ಎಷ್ಟರ ಮಟ್ಟಿಗೆ ಟ್ರಾಫಿಕ್ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ