Site icon Vistara News

Bangalore traffic: ಬೆಂಗಳೂರು ಟ್ರಾಫಿಕ್‌ಗೆ ಬಲಿಯಾದ ಕಂದಮ್ಮ, ಆಂಬ್ಯುಲೆನ್ಸ್‌ನಲ್ಲೇ ಹೋದ ಜೀವ

Bangalore traffic

ಹಾಸನ: ಬೆಂಗಳೂರಿನ ಟ್ರಾಫಿಕ್‌ನಿಂದಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಒಂದೂವರೆ ವರ್ಷದ ಎಳೆಯ ಕಂದ ಆಂಬ್ಯುಲೆನ್ಸ್‌ನಲ್ಲೇ ಮೃತಪಟ್ಟ ಘಟನೆ ನೆಲಮಂಗಲದಲ್ಲಿ ನಡೆದಿದೆ. ಮಗುವಿನ ತಂದೆ ತಾಯಿ ಸಹ ಆಸ್ಪತ್ರೆಯಲ್ಲಿದ್ದಾರೆ.

ಹುದಾ ಕೌಸರ್(1.5) ಮೃತ ಬಾಲಕಿ. ನಿನ್ನೆ ತುಮಕೂರು ಜಿಲ್ಲೆಯ ತಿಪಟೂರಿನ ಕೈಮರ ಬಳಿ ಬುಲೇರೊ ವಾಹನ ಹಾಗು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ತಂದೆ ಅಹಮದ್ ಹಾಗೂ ತಾಯಿ ರುಕ್ಸಾನಾಗೆ ಗಂಭೀರ ಗಾಯಗಳಾಗಿತ್ತು. ಮಗುವಿಗೂ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಹಾಸನದ ಹಿಮ್ಸ್‌ಗೆ ತಿಪಟೂರು ಆಸ್ಪತ್ರೆ ವೈದ್ಯರು ಕಳಿಸಿದ್ದರು. ಹಾಸನದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಆಂಬ್ಯುಲೆನ್ಸ್‌ನಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಲು ಯತ್ನಿಸಲಾಗಿತ್ತು.

ವಿವಿಧ ಸಂಘಟನೆಗಳ ನೆರವಿನೊಂದಿಗೆ ಜೀರೊ ಟ್ರಾಫಿಕ್ ಮಾದರಿಯಲ್ಲಿ ಬೆಂಗಳೂರಿನ ನೆಲಮಂಗಲಕ್ಕೆ ಒಂದೂವರೆ ಗಂಟೆಯಲ್ಲಿ ಆಂಬ್ಯುಲೆನ್ಸ್ ತಲುಪಿತ್ತು. ಆಂಬ್ಯುಲೆನ್ಸ್ ಚಾಲಕ ಮಧು ಚಾಕಚಕ್ಯತೆಯಿಂದ ತಲುಪಿಸಿದ್ದರು. ಆದರೆ ನೆಲಮಂಗಲದಿಂದ ಟ್ರಾಫಿಕ್ ನಡುವೆ ಆಂಬ್ಯುಲೆನ್ಸ್‌ ಸಿಲುಕಿಕೊಂಡು, ಚಿಕಿತ್ಸೆ ಸಿಗದ ದಾರಿಮಧ್ಯೆಯೇ ಮಗು ಪ್ರಾಣ ಬಿಟ್ಟಿದೆ. ಕುಟುಂಬ ಮಗುವನ್ನು ಕಳೆದುಕೊಂಡು ನಡು ರಸ್ತೆಯಲ್ಲಿ ನಿಂತು ಕಣ್ಣೀರಿಟ್ಟಿದೆ.

ಇದನ್ನೂ ಓದಿ: Swiggy | ತುರ್ತು ಸಂದರ್ಭದಲ್ಲಿ ಸ್ವಿಗ್ಗಿ ವಿತರಣಾ ಪ್ರತಿನಿಧಿಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆ

Exit mobile version