ಬೆಂಗಳೂರು: ರಾಜಧಾನಿಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ (Bangalore Water Crisis) ಉಲ್ಬಣವಾಗುತ್ತಿದೆ. ಹೀಗಾಗಿ ನೀರಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಹಲವು ಕ್ರಮ ಕೈಗೊಂಡಿರುವ ಬೆಂಗಳೂರು ಜಲಮಂಡಳಿಯು(ಬಿಡಬ್ಲ್ಯುಎಸ್‌ಎಸ್‌ಬಿ), ಇದೀಗ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ ಮಾಡಿ (Aerators for Taps) ಆದೇಶ ಹೊರಡಿಸಿದೆ.
ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ ಜಲಮಂಡಲಿ ಕ್ರಮ ಕೈಗೊಂಡಿದ್ದು, ಮಾರ್ಚ್ 21 ರಿಂದ 31ರೊಳಗೆ ನಲ್ಲಿಗಳಿಗೆ ಕಡ್ಡಾಯವಾಗಿ ಏರಿಯೇಟರ್ ಅಳವಡಿಸಲು ಸೂಚನೆ ನೀಡಿದೆ.
ಇದನ್ನೂ ಓದಿ | Water Crisis: ರಾಜಧಾನಿಯಲ್ಲಿ ನೀರಿನ ಸಮಸ್ಯೆ; ವರ್ಕ್ ಫ್ರಮ್ ಹೋಮ್, ಆನ್‌ಲೈನ್ ಕ್ಲಾಸ್‌ಗೆ ಬೇಡಿಕೆ
ಏರಿಯೇಟರ್ ಅಳವಡಿಕೆಯಿಂದ ಶೇ. 60 ರಿಂದ 85ರಷ್ಟು ನೀರಿನ ಉಳಿತಾಯ ಸಾಧ್ಯವಾಗಲಿದೆ. ವಾಣಿಜ್ಯ ಮಳಿಗೆಗೆಳು, ಕೈಗಾರಿಕೆಗಳು, ಅಪಾರ್ಟ್‌ಮೆಂಟ್‌ಗಳು, ಐಷಾರಾಮಿ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ವಾಷ್ ಬೇಸಿನ್, ಕಿಚನ್, ಕೈ ಮತ್ತು ಕಾಲು ತೊಳೆಯುವ ಸ್ಥಳಗಳು, ಸ್ವಚ್ಛತೆಗಾಗಿ ಮೀಸಲಿರುವ ನಲ್ಲಿಗಳಿಂದ ಹೆಚ್ಚಿನ ನೀರು ಪೋಲಾಗುವುದನ್ನು ತಡೆಯಲು ಕ್ರಮ ಏರಿಯೇಟರ್ ಕಡ್ಡಾಯವಾಗಿ ಅಳವಡಿಸಲು ಸೂಚನೆ ನೀಡಲಾಗಿದೆ.
ಬೆಂಗಳೂರಿಗರೇ ಹುಷಾರ್.. ಹೋಳಿ ಹಬ್ಬಕ್ಕೆ ನೀರಲ್ಲಿ ಜಾಲಿ ಮಾಡಿದ್ರೆ ಬೀಳುತ್ತೆ ಕೇಸ್
ಬೆಂಗಳೂರು: ರಂಗು ರಂಗಿನ ಹೋಳಿ ಹಬ್ಬಕ್ಕೆ (Holi Fest 2024) ಬರಗಾಲವು (Water Crisis) ಜನರಿಗೆ ತಣ್ಣೀರು ಎರಚಿದೆ. ರಾಜಧಾನಿ ಬೆಂಗಳೂರಲ್ಲಿ ಬೋರ್‌ವೆಲ್‌ಗಳೆಲ್ಲವೂ ಬತ್ತಿ ಹೋಗಿದ್ದು, ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಹೀಗಾಗಿ ಹೋಳಿ ಹಬ್ಬಕ್ಕೆ ನೀರಿನಲ್ಲಿ ಜಾಲಿ ಮಾಡೋದಕ್ಕೂ ಜಲಮಂಡಳಿ (BWSSB) ರೂಲ್ಸ್ ಜಾರಿ ಮಾಡಿದೆ.
ಹೋಳಿ ಆಚರಣೆ ನೆಪದಲ್ಲಿ ಬೇಕಾಬಿಟ್ಟಿ ನೀರು ವ್ಯರ್ಥ ಮಾಡಿದರೆ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಜಲಮಂಡಳಿ ನೀಡಿದೆ. ಮನೆಗಳಲ್ಲಿ ನೀರನ್ನು ವ್ಯರ್ಥ ಮಾಡದೇ ಹೋಳಿ ಆಚರಣೆ ಮಾಡಿದರೆ ಯಾವುದೇ ಅಡ್ಡಿ ಇಲ್ಲ. ಆದರೆ ಕಮರ್ಷಿಯಲ್ ಉದ್ದೇಶದಿಂದ ನೂರಾರು ಜನರನ್ನು ಸೇರಿಸಿ ನೀರು ವ್ಯರ್ಥ ಮಾಡಿದರೆ ಅಂತಹ ಹೋಟೆಲ್, ಮಾಲ್‌ಗಳ ಮೇಲೆ ಕ್ರಮವಹಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾಥ್ ಮನೋಹರ್ ಎಚ್ಚರಿಕೆ ನೀಡಿದ್ದಾರೆ.
ಜಲಸ್ನೇಹಿ ಹೋಳಿ ಆಚರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ನಗರದಲ್ಲಿ ಜಲಕ್ಷಾಮ ಹಿನ್ನೆಲೆಯಲ್ಲಿ ದೊಡ್ಡ ಹೋಟೆಲ್, ಪಬ್ ಸೇರಿದಂತೆ ಹೋಳಿ ರೈನ್ ಡ್ಯಾನ್ಸ್‌ಗಳಿಗೆ ಕಡಿವಾಣ ಹಾಕಲಾಗಿದೆ. ಈಗಾಗಲೇ ಹಲವು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಹೋಳಿ ಸೆಲೆಬ್ರೆಷನ್‌ಗಳನ್ನು ಹಮ್ಮಿಕೊಂಡಿವೆ. ಮಾಲ್, ಮೈದಾನ ಸೇರಿದಂತೆ ಹಲವೆಡೆ ಹೋಳಿ ಸೆಲೆಬ್ರೇಷನ್‌ಗೆ ಬುಕ್ಕಿಂಗ್ ಶುರುವಾಗಿದೆ.
ಕಮರ್ಷಿಯಲ್ ಉದ್ದೇಶದಿಂದ ಹೆಚ್ಚು ಜನರನ್ನು ಸೇರಿಸಿ ನೀರು ವ್ಯರ್ಥ ಮಾಡದಂತೆ ಸೂಚಿಸಲಾಗಿದೆ. ನೀರಿನ ಹೋಳಿ ಬದಲಾಗಿ, ಡ್ರೈ ಹೋಳಿ ಆಚರಿಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ನಿಯಮವನ್ನು ಗಾಳಿಗೆ ತೂರಿ ಮಿತಿ ಮೀರಿ ನೀರು ಬಳಸಿದರೆ ದಂಡ ಪ್ರಯೋಗದ ಎಚ್ಚರಿಕೆಯನ್ನು ನೀಡಲಾಗಿದೆ.