Site icon Vistara News

New Year 2024: ಹೊಸ ವರ್ಷಕ್ಕೆ ಬೆಂಗಳೂರು ಮಂದಿಯ ಅದ್ಧೂರಿ ಸ್ವಾಗತ; ಹೀಗಿತ್ತು ಸಂಭ್ರಮ

ಬೆಂಗಳೂರು: ರಾಜಧಾನಿಯ ಜನರು 2024 ವರ್ಷವನ್ನು (New Year 2024) ಅದ್ಧೂರಿಯಾಗಿ ಸ್ವಾಗತಿಸಿದರು. ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವ ಮೂಲಕ ಯುವ ಜನರು ಸಂಭ್ರಮದಿಂದ ಹೊಸ ವರ್ಷವನ್ನು ಭಾನುವಾರ ಮಧ್ಯರಾತ್ರಿ ಬರಮಾಡಿಕೊಂಡರು.

ರಾಜ್ಯದ ವಿವಿಧೆಡೆಯಿಂದ ಹೊಸ ವರ್ಷದ ಸಂಭ್ರಮಾಚರಣೆಗೆ ಸಾವಿರಾರು ಜನ ಬೆಂಗಳೂರಿಗೆ ಆಗಮಿಸಿದ್ದರು. ಹೀಗಾಗಿ ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌ನ ಪಬ್‌ಗಳು, ಹೋಟೆಲ್‌ಗಳು ತುಂಬಿ ತುಳುಕಿದವು. ಇನ್ನು ರಸ್ತೆಗಳಲ್ಲಿ ಯುವಕ-ಯುವತಿಯರು ರಾತ್ರಿಯಿಡೀ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.

ಜನಸಂದಣಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್‌ ನಿಷೇಧ ಮಾಡಲಾಗಿತ್ತು. ಬ್ರಿಗೇಡ್ ರಸ್ತೆಯಲ್ಲಿ ತಳ್ಳಾಟ ನೂಕಾಟ ಹೆಚ್ಚಾಗಿದ್ದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಯುವತಿಯರೊಂದಿಗೆ ಅಸಭ್ಯ ವರ್ತನೆ

ಕೆಲವೆಡೆ ಯುವತಿಯರಿಗೆ ಕೆಲ ಯುವಕರು ಕಿರಿಕಿರಿ ಕೊಟ್ಟಿರುವುದು ಕಂಡುಬಂದಿದೆ. ಯುವತಿಯರ ಮೈ, ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಚರ್ಚ್‌ ಸ್ಟ್ರೀಟ್‌ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿವ ಯುವಕರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಅದೇ ರೀತಿ ಯಾರಿಗೂ ಗೊತ್ತಾಗಬಾರದು ಎಂದು ಕೆಲವರು ಹ್ಯಾಲೋವೀನ್‌ ಮಾಸ್ಕ್‌ಗಳನ್ನು ಧರಿಸಿ ಓಡಾಡುತ್ತಿದ್ದರು. ಅಂತಹವರನ್ನು ತಡೆದು ಪೊಲೀಸರು ಮಾಸ್ಕ್‌ ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಿದರು.

ಇದನ್ನೂ ಓದಿ | New Year 2024: ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ, ಭಾರತ ಸೇರಿ ವಿಶ್ವದಾದ್ಯಂತ ಮುಗಿಲು ಮುಟ್ಟಿದ ಸಂಭ್ರಮಾಚಾರಣೆ

ಸಿಕ್ಕಿಬಿದ್ದ ಮೊಬೈಲ್‌ ಕಳ್ಳ

ಬ್ರಿಗೇಡ್ ರಸ್ತೆಯಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದವನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕುಡಿದು ಮೊಬೈಲ್ ಕಳ್ಳತನಕ್ಕೆ ಕಳ್ಳ ಯತ್ನಿಸಿದ್ದಾನೆ. ಹೀಗಾಗಿ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದರು. ಹೀಗಾಗಿ ಆತ ತನ್ನನ್ನು ಬಿಟ್ಟುಬಿಡುವಂತೆ ಕೈಮುಗಿದು ಬೇಡಿಕೊಂಡಿದ್ದು ಕಂಡುಬಂತು. ನಂತರ ಆತನಿಂದ ಮೊಬೈಲ್ ಪಡೆದು ಯುವಕನಿಗೆ ಮರಳಿಸಲಾಗಿದೆ. ‌

ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ

ಹಾಸನದಲ್ಲಿ ಗಾಯನ ಕಾರ್ಯಕ್ರಮ

ಚಿಕ್ಕಮಗಳೂರಿನಲ್ಲಿ ಯುವತಿಯರ ಸಂಭ್ರಮ

ರಾಯಚೂರಿನಲ್ಲಿ ಮಕ್ಕಳ ನೃತ್ಯ
ಕೊಡಗಿನಲ್ಲಿ ಸಂಭ್ರಮಾಚರಣೆ

ಕಾರವಾರದಲ್ಲಿ ಪಟಾಕಿ ಸಿಡಿಸಿದ ಯುವಕರು

ಕಾರವಾರದ ಜನರ ಸಂಭ್ರಮ
Exit mobile version