Site icon Vistara News

Baraguru Ramachandrappa : ಕವಿ ಗೋಷ್ಠಿಗೆ ಹೋಗಿದ್ದ ಬರಗೂರು ರಾಮಚಂದ್ರಪ್ಪ ಆರೋಗ್ಯದಲ್ಲಿ ಏರುಪೇರು

ಬರಗೂರು ರಾಮಚಂದ್ರಪ್ಪ ಅನಾರೋಗ್ಯ

#image_title

ದಾವಣಗೆರೆ: ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ (Baraguru Ramachandrappa) ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯ ಹರಿಹರದಲ್ಲಿ ಆಯೋಜನೆಗೊಂಡಿರುವ ಬಂಡಾಯ ಸಾಹಿತ್ಯ ಗೋಷ್ಠಿಯಲ್ಲಿ ಭಾಗವಹಿಸಿದ್ದ ಬರಗೂರು ಅವರನ್ನು ಹರಿಹರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಸಾಮಾನ್ಯ ಅನಾರೋಗ್ಯವಾಗಿದ್ದು, ಯಾವುದೇ ಆತಂಕವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುತ್ತಿರುವ ಬರಗೂರು

ಹರಿಹರದ ಗುರುಭವನದಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಕಾರು ಏರುವಾಗ ತಲೆ ಸುತ್ತು ಬಂದು ಸುಸ್ತಾದ ಬರಗೂರು ರಾಮಚಂದ್ರಪ್ಪ ಅವರು ಅಲ್ಲೇ ಕುಸಿದು ಕುಳಿತರು. ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಯಿತು.

ನಂಗೆ ಶುಗರ್‌, ಬಿಪಿ ಏನೂ ಇಲ್ಲ ಎಂದ ಬರಗೂರು
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಚೇತರಿಸಿಕೊಂಡ ಸಾಹಿತಿ ಬರಗೂರು ಬಳಿ ಮಾಧ್ಯಮಗಳ ಜತೆ ಮಾತನಾಡಿ ಏನಾಯಿತು ಎಂಬ ಬಗ್ಗೆ ವಿವರಣೆ ನೀಡಿದರು.

ʻʻಕವಿಗೋಷ್ಠಿ ಉದ್ಘಾಟನೆ ನಂತರ ಸಭಾಂಗಣದ ಹೊರಗೆ ಪೋಸ್ಟರ್ ಬಿಡುಗಡೆ ಮಾಡಲು ಹೋಗಿದ್ದೆ. ಎಸ್ಸಿ-ಎಸ್ಟಿ ಸ್ಪರ್ಧಾ ಪರೀಕ್ಷೆಗೆ ಪೋಸ್ಟರ್ ಬಿಡುಗಡೆ ಮಾಡಿದೆವು. ಆಗ ತಲೆ ಸುತ್ತು ಬಂತು, ಬೇಗ ಹೋಗಿ ಕಾರಲ್ಲಿ ಕುಳಿತುಕೊಂಡೆ. ನಂತರ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರು. ಕೆಲ ನಿಮಿಷಗಳ ಕಾಲ ನನಗೆ ಪ್ರಜ್ಞೆ ಇರಲಿಲ್ಲ. ನನಗೆ ಬಿಪಿ, ಶುಗರ್ ಇಲ್ಲ, ಆದರೆ ಇದೆಲ್ಲ ಆಗಿರುವ ಹಿನ್ನಲೆಯಲ್ಲಿ ಇಸಿಜಿ, ಬಿಪಿ, ಶುಗರ್ ಟೆಸ್ಟ್ ಮಾಡಿದರು. ಹೆಚ್ಚು ಒತ್ತಡದಿಂದ ಈ ರೀತಿಯಾಗುತ್ತದೆ ಎಂದು ಹೇಳುತ್ತಾರೆʼʼ ಎಂದು ಹೇಳಿದರು ಬರಗೂರು.

ʻʻಡ್ರಿಪ್ಸ್ ಹಾಕಿದ ಬಳಿಕ ವಿಶ್ರಾಂತಿ ಪಡೆದು ಈಗ ಡಿಸ್ಚಾರ್ಚ್ ಆಗಿದ್ದೇನೆ. ಡಿಸ್ಚಾರ್ಜ್ ಆಗುವ ಮುನ್ನವೂ ಮತ್ತೊಮ್ಮೆ ತಪಾಸಣೆ ನಡೆಸಿದರು. ಅ ಕ್ಷಣದಲ್ಲಿ ಸ್ನೇಹಿತರಲ್ಲಿ ಆತಂಕ ಹುಟ್ಟಿಸಿದ್ದು ನಿಜ. ವೈದ್ಯರು ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿಗೆ ಹೋದ ಮೇಲೆ ಮತ್ತೊಮ್ಮೆ ಆರೋಗ್ಯ ತಪಾಸಣೆ ಮಾಡಿಸುತ್ತೇನೆ. ವೈದ್ಯರು ವಿಶ್ರಾಂತಿ ಬೇಕು ಎಂದು ಹೇಳಿದ್ದಾರೆ, ಪಾಲಿಸುತ್ತೇನೆʼʼ ಎಂದು ಬರಗೂರು ಹೇಳಿದರು.

Exit mobile version