ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಬಿಕ್ಕಟ್ಟಿಗೆ (Border Dispute) ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಬಣದ ಶಿವಸೇನೆ ಹಾಗೂ ಎನ್‌ಸಿಪಿ ಸಂಸದರ ನಿಯೋಗವು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ಕರ್ನಾಟಕದ ವಿರುದ್ಧ ದೂರು ನೀಡಿದ ಬೆನ್ನಲ್ಲೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿವಸೇನೆ ಹಾಗೂ ಎನ್‌ಸಿಪಿಗೆ ತಿರುಮಂತ್ರ ಹೆಣೆದಿದ್ದಾರೆ. ಸೋಮವಾರ (ಡಿಸೆಂಬರ್ ೧೨) ರಂದು ಕರ್ನಾಟಕದ ಸಂಸದರಿಗೆ ಅಮಿತ್ ಶಾ ಅವರನ್ನು ಭೇಟಿಯಾಗಿ ಎಂದು ಬೊಮ್ಮಾಯಿ ಅವರು ಸೂಚಿಸಿದ್ದಾರೆ. ಬಿಕ್ಕಟ್ಟಿನ ಕುರಿತು ಕರ್ನಾಟಕದ ನಿಲುವನ್ನೂ ರಾಜ್ಯದ ಸಂಸದರು ಕೇಂದ್ರ ಸಚಿವರಿಗೆ ಮನವರಿಕೆ ಮಾಡಲಿದ್ದಾರೆ. ಹಾಗೆಯೇ, ಬೊಮ್ಮಾಯಿ ಅವರೂ ಶೀಘ್ರದಲ್ಲಿಯೇ ಶಾ ಅವರನ್ನು ಭೇಟಿಯಾಗಲು ತೀರ್ಮಾನಿಸಿದ್ದಾರೆ.
ಸುಪ್ರಿಯಾ ಸುಳೆ ನೇತೃತ್ವದ ನಿಯೋಗವು ಅಮಿತ್ ಶಾ ಅವರನ್ನು ಭೇಟಿಯಾಗಿದ್ದಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. “ಮಹಾರಾಷ್ಟ್ರದ ನಿಯೋಗವು ಅಮಿತ್ ಶಾ ಅವರನ್ನು ಭೇಟಿಯಾದ ಮಾತ್ರಕ್ಕೆ ಇದರಿಂದ ಕರ್ನಾಟಕಕ್ಕೆ ವ್ಯತ್ಯಾಸ ಆಗುವುದಿಲ್ಲ. ಗಡಿ ವಿಚಾರದಲ್ಲಿ ನಾವು ರಾಜಿ ಆಗುವ ಪ್ರಶ್ನೆಯೇ ಇಲ್ಲ. ಸೋಮವಾರ ಅಮಿತ್ ಶಾ ಅವರನ್ನು ಭೇಟಿಯಾಗುವಂತೆ ಕರ್ನಾಟಕದ ಸಂಸದರಿಗೆ ತಿಳಿಸಿದ್ದೇನೆ. ನಾನೂ ಶೀಘ್ರದಲ್ಲಿಯೇ ಸಚಿವರನ್ನು ಭೇಟಿಯಾಗುತ್ತೇನೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Border Dispute | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಅಮಿತ್ ಶಾರನ್ನು ಭೇಟಿಯಾದ ಶಿವಸೇನೆ, ಎನ್‌ಸಿಪಿ, 14ಕ್ಕೆ ಸಿಎಂಗಳ ಸಭೆ?