ಬೆಂಗಳೂರು: ಚುನಾವಣಾ ನಾಮಪತ್ರ ಸಲ್ಲಿಕೆ ಹಾಗೂ ಅನುಮೋದನೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಚುನಾವಣಾ ಪ್ರಚಾರ ಯಾತ್ರೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಆರಂಭಿಸಲು ಸಜ್ಜಾಗಿದ್ದಾರೆ.
ಭಾನುವಾರದಿಂದಲೇ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸುವ ʼಜಯವಾಹಿನಿʼ ಯಾತ್ರೆಯನ್ನು ಬೆಂಗಳೂರಿನಿಂದ ಆರಂಭಿಸಲಿದ್ದಾರೆ. ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿರುವ ಶ್ರೀ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಯಾತ್ರೆಯನ್ನು ಆರಂಭಿಸಲಿದ್ದಾರೆ.
ಯಾತ್ರೆಗಾಗಿ ವಿಶೇಷ ಬಸ್ ಸಿದ್ಧಪಡಿಸಲಾಗಿದ್ದು, ಅದಕ್ಕೆ ಜಯವಾಹಿನಿ ಎಂದು ಹೆಸರಿಡಲಾಗಿದೆ. ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ನಂತರ ಯಲಹಂಕ ವಿಧಾನಸಭೆ ಕ್ಷೇತ್ರದಲ್ಲಿ 17 ಕಿಲೋಮೀಟರ್ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ.
ನಂತರ ದೊಡ್ಡಬಳ್ಳಾಪುರದಲ್ಲಿ 27 ಕಿಲೋಮೀಟರ್, ನೆಲಮಂಗಲದಲ್ಲಿ 31 ಕಿಲೋಮೀಟರ್, ಡಾಬಸ್‌ಪೇಟೆಯಲ್ಲಿ 22 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಹೀಗೆಯೇ ತುಮಕೂರು ಗ್ರಾಮಾಂತರ, ತುಮಕೂರು ನಗರ, ಗುಬ್ಬಿ, ಕೆ.ಬಿ. ಕ್ರಾಸ್, ತಿಪಟೂರು, ಅರಸೀಕೆರೆ, ಬಾಣಾವರ, ಕಡೂರು, ದಾವಣಗೆರೆಗೆ ತೆರಳಲಿದ್ದಾರೆ. ಮೇ 7ರವರೆಗೂ ಬೊಮ್ಮಾಯಿ ಅವರ ಯಾತ್ರೆ ಸಾಗಲಿದೆ.
ಇದನ್ನೂ ಓದಿ: Apple iPhone : ಭಾರತದಲ್ಲಿ ಐಫೋನ್ 3ಜಿಯಿಂದ ಮೊದಲ ರಿಟೇಲ್ ಸ್ಟೋರ್ ತನಕ ಆ್ಯಪಲ್‌ನ 15 ವರ್ಷಗಳ ಯಾತ್ರೆ ಹೇಗಿತ್ತು?