Site icon Vistara News

ಬಸವರಾಜ ಹೊರಟ್ಟಿ ವಿಜಯ: 48 ವರ್ಷ MLC ಆಗುವ ದಾಖಲೆ ಬರೆಯಲು ಸಜ್ಜು

basavaraja horatti

ಬೆಂಗಳೂರು: ರಾಜ್ಯವಷ್ಟೆ ಅಲ್ಲ, ರಾಷ್ಟ್ರದ ರಾಜಕಾರಣದಲ್ಲಿ ಹೊಸ ದಾಖಲೆಯೊಂದು ಬುಧವಾರ ಬರೆಯಲ್ಪಟ್ಟಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ ಸದಸ್ಯರಾಗಿ ಬಸವರಾಜ ಹೊರಟ್ಟಿ ಆಯ್ಕೆಯಾಗಿದ್ದಾರೆ. ಈಗಾಗಲೆ ಏಳು ಬಾರಿ ಎಂಎಲ್‌ಸಿ ಆಗಿರುವ ಹೊರಟ್ಟಿ ಇದೀಗ ಎಂಟನೇ ಬಾರಿಗೆ ವಿಧಾನ ಪರಿಷತ್‌ ಸದಸ್ಯರಾಗುವ ಅವಕಾಶ ಪಡೆದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ್‌ ಗುರಿಕಾರ್‌ ವಿರುದ್ಧ ಜಯಗಳಿಸಿದ್ದಾರೆ.

ಈ ಅವಧಿ ಮುಕ್ತಾಯವಾಗುವ ವೇಳೆಗೆ ಅವರು ಎಂಎಲ್‌ಸಿ ಆಗಿ 48 ವರ್ಷ ಪೂರೈಸುತ್ತಾರೆ. ಕರ್ನಾಟಕದಲ್ಲಿ ಸತತವಾಗಿ ಐದು ಬಾರಿ ಎಂಎಲ್‌ಸಿ ಆದ ದಾಖಲೆಯನ್ನು ಈ ಹಿಂದೆ ಬಿಜೆಪಿ ಹಿರಿಯ ನಾಯಕ ರಾಮಚಂದ್ರಗೌಡ ಹೊಂದಿದ್ದರು.

ಎರಡು ಅವಧಿಗೆ ಮೊದಲೇ ರಾಮಚಂದ್ರಗೌಡರ ದಾಖಲೆಯನ್ನು ಹೊರಟ್ಟಿ ಮುರಿದು ಮುಂದೆ ಸಾಗಿದ್ದರು. ಈಗಂತೂ ಅವರ ಹತ್ತಿರಕ್ಕೂ ಯಾರೂ ಬರಲಾಗದಷ್ಟು ಜಯಗಳನ್ನು ದಾಖಲಿಸಿದ್ದಾರೆ. ಬುಧವಾರ ಬೆಳಗ್ಗೆಯಿಂದಲೇ ಆರಂಭೌಆದ ಮತ ಎಣಿಕೆಯಲ್ಲಿ ಪ್ರಾರಂಭದಿಂದಲೂ ಹೊರಟ್ಟಿ ಮುನ್ನಡೆ ಕಾಯ್ದುಕೊಂಡರು.

ಹೊರಟ್ಟಿ ಅವರಿಗೆ ಚಲಾಯಿಸಲಾಗಿದ್ದ ಕೆಲವು ಮತಗಳು ಕುಲಗೆಟ್ಟ ಮತಗಳೆಂದು ಪರಿಗಣಿತವಾದ ಕಾರಣಕ್ಕೆ ಕೆಲ ಸಮಯ ಹಿನ್ನಡೆ ಆಗುವಂತೆ ಕಾಣುತ್ತಿತ್ತು. ಆದರೆ ಗೆಲುವಿಗೆ ಅಗತ್ಯವಿದ್ದ 7,501 ಮತಗಳನ್ನು ಪಡೆಯಲು ಯಾವುದೇ ಅಡ್ಡಿ ಆಗಲಿಲ್ಲ. ಮದ್ಯಾಹ್ನ 1 ಗಂಟೆಗೂ ಮೊದಲೇ ಹೊರಟ್ಟಿ ಗೆಲುವಿನ ನಗೆ ಬೀರಿದರು. ಇನ್ನು ಚುನಾವಣಾಧಿಕಾರಿ ಅಧಿಕೃತವಾಗಿ ಘೋಷಣೆ ಮಾಡುವುದೊಂದೇ ಬಾಕಿ ಉಳಿದಿದೆ.

ಮೂಲತಃ ಹುಬ್ಬಳ್ಳಿ ಜಿಲ್ಲೆಯ ಧಾರವಾಡದವರು ಹೊರಟ್ಟಿ. 1946ರ ಏಪ್ರಿಲ್‌ 14ರಂದು ಚಿಕ್ಕಲಗುಂಡಿಯಲ್ಲಿ ಜನನ. ಬಿಎ ಎಂಪಿಇಡಿ ಪದವಿ ನಂತರ ರಾಜಕೀಯ ಪ್ರವೇಶ. ಜೆಡಿಎಸ್‌ನಿಂದ ವಿಧಾನ ಪರಿಷತ್‌ ಸದಸ್ಯರಾಗಿ ಸತತ ಏಳು ಬಾರಿ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೆ ಬಿಜೆಪಿ ಸೇರ್ಪಡೆ ಆಗಿದ್ದ ಹೊರಟ್ಟಿ, ಈ ಭಾಗದಲ್ಲಿ ಬಿಜೆಪಿ ಸಂಖ್ಯೆ ಹೆಚ್ಚಳಕ್ಕೆ ಕಾರಣರಾಗಿದ್ದಾರೆ.

ಇದನ್ನೂ ಓದಿ | ಸಿದ್ದರಾಮಯ್ಯ ನನಗಿಂತ ದೊಡ್ಡವ, ಅವನೇ ಮೊಮ್ಮಕ್ಕಳನ್ನ ಆಡಿಸ್ತಾ ಕೂರಲಿ: ಹೊರಟ್ಟಿ

ವಿಜಯದ ನಂತರ ಬೆಳಗಾವಿಯ ಜ್ಯೋತಿ ಪಿಯು ಕಾಲೇಜಿನ ಬಳಿ ಪ್ರತಿಕ್ರಿಯಿಸಿದ ಹೊರಟ್ಟಿ, ಇದು ದೇಶದ ರಾಜಕೀಯ ಇತಿಹಾಸದಲ್ಲೆ ಹೊಸ ದಾಖಲೆ. ನಾನು 1990ರಿಂದ 2022ರವರೆಗೆ ನಿರಂತರವಾಗಿ ಜಯಿಸಿದ್ದೇನೆ, ಈ ಚುನಾವಣೆಯಲ್ಲಿ 8-10 ಸಾವಿರ ಮತಗಳನ್ನು ಪಡೆಯುವ ನಿರೀಕ್ಷೆ ಇತ್ತು. ಇದೀಗ 7 ಸಾವಿರ ಲಭಿಸಿದೆ, ಇನ್ನೂ ಎರಡು ಸಾವಿರ ಮತಗಳು ಲಭಿಸಬಹುದು. ಈ ಗೆಲುವು ಎಲ್ಲ ಶಿಕ್ಷಕರಿಗೂ ಸೇರಿದ್ದು ಎಂದಿದ್ದಾರೆ.

ಇದನ್ನೂ ಓದಿ | ಲಕ್ಕಿ ಅಂಬಾಸಿಡರ್‌ನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ

Exit mobile version