Site icon Vistara News

BBMP Chief Commissioner | ಮಣಿಪಾಲ್‌ ಆಸ್ಪತ್ರೆಗೆ ದಾಖಲಾದ ತುಷಾರ್‌ ಗಿರಿನಾಥ್‌; ಆರೋಗ್ಯ ವಿಚಾರಿಸಿದ ಸಚಿವ ಸೋಮಣ್ಣ

BBMP Chief Commissioner

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (BBMP Chief Commissioner), ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಶನಿವಾರದಿಂದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಪರೀಕ್ಷೆಗೆ ಒಳಪಟ್ಟಾಗ ಯೂರಿನರಿ ಇನ್‌ಫೆಕ್ಷನ್ ಪತ್ತೆಯಾಗಿತ್ತು. ಹೀಗಾಗಿ ವೈದ್ಯರ ಸೂಚನೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮನೆಯಲ್ಲಿಯೇ ಔಷಧ ಹಾಗೂ ಇಂಜೆಕ್ಷನ್ ನೀಡಲಾಗಿತ್ತು. ಜ್ವರ ಕ್ಷೀಣಿಸದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತುಷಾರ್ ಗಿರಿನಾಥ್ ಆಪ್ತರು ಮಾಹಿತಿ ನೀಡಿದ್ದಾರೆ. ಮಣಿಪಾಲ್ ಆಸ್ಪತ್ರೆಗೆ ಸಚಿವ ವಿ.ಸೋಮಣ್ಣ ಭೇಟಿ ನೀಡಿ ತುಷಾರ್‌ ಗಿರಿನಾಥ್‌ರ ಆರೋಗ್ಯ ವಿಚಾರಿಸಿದರು. ‌

ಇದನ್ನೂ ಓದಿ | Real Star Upendra | ಚಂದನವನಕ್ಕೆ ಸೂಪರ್ ಸ್ಟಾರ್‌ ಮಕ್ಕಳ ಗ್ರ್ಯಾಂಡ್‌ ಎಂಟ್ರಿ: ಹೊಂಬಾಳೆ ಫಿಲ್ಮ್ಸ್‌ಗೆ ಮುಂದಿನ ನಾಯಕಿ ಉಪ್ಪಿ ಪುತ್ರಿ?

Exit mobile version