Site icon Vistara News

BBMP Forest | ಹಸಿರೀಕರಣಕ್ಕಾಗಿ ಅರಣ್ಯ ಘಟಕದಿಂದ ಉಚಿತ ಸಸಿಗಳ ವಿತರಣೆ

ಬಿಬಿಎಂಪಿ ಅರಣ್ಯ ಘಟಕ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗದ (BBMP Forest) ವಿವಿಧ ವಲಯಗಳ ವ್ಯಾಪ್ತಿಯಲ್ಲಿರುವ ಸಸ್ಯಕ್ಷೇತ್ರಗಳಲ್ಲಿ “8X12” ಅಳತೆಯ ವಿವಿಧ ಜಾತಿಯ ಸಸಿಗಳು ಲಭ್ಯವಿದೆ. ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಬೆಂಗಳೂರು ನಗರವನ್ನು ಹಸಿರೀಕರಣ ಮಾಡಲು ಸಾರ್ವಜನಿಕರ ಸಹಯೋಗವನ್ನು ಬಯಸಿ ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಗುತ್ತಿದೆ.

ಈ ಸಂಬಂಧ ಆಸಕ್ತರು ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿ ಉಚಿತವಾಗಿ ಸಸಿಗಳನ್ನು ಪಡೆದುಕೊಂಡು ಸಸಿಗಳನ್ನು ನೆಟ್ಟು ಪೋಷಣೆ ಮಾಡಬಹುದೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಸ್ಯಕ್ಷೇತ್ರಗಳ ವಿವರ:

  1. ಕೂಡ್ಲು – 9480685039
  2. ಅಟ್ಟೂರು – 9480685196
  3. ಜ್ಞಾನಭಾರತಿ ಆವರಣ – 9164042566
  4. ಮಲ್ಲತ್ತಹಳ್ಳಿ – 9164042566
  5. ಕೆಂಪಾಪುರ – 9480685541
  6. ದೊಡ್ಡಬಸ್ತಿ – 9480685541

ಹೆಚ್ಚಿನ ಸಂಪರ್ಕಕ್ಕಾಗಿ:
ಸರಿನಾ ಸಿಕ್ಕಲಿಗರ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ವಿಭಾಗ, ಬಿಬಿಎಂಪಿ
ಮೊ.ಸಂ: 94806 83047

ಇದನ್ನೂ ಓದಿ: csir-ugc net 2022 | ಸಿಎಸ್‌ಐಆರ್-ಯುಜಿಸಿ ನೆಟ್‌ ಪರೀಕ್ಷೆಗೆ ಅರ್ಜಿ ಆಹ್ವಾನ

Exit mobile version