ಮಂಗಳೂರು: ಇಲ್ಲಿನ ನೂತನ ಸೆಂಟ್ರಲ್ ಮಾರ್ಕೆಟ್ ನಿರ್ಮಾಣ ಯೋಜನೆಯಲ್ಲಿ ಬೀಫ್ ಸ್ಟಾಲ್‌ಗಳಿಗೆ (Beef Stall) ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಮಂಗಳೂರು ಮಹಾನಗರ ಪಾಲಿಕೆ ವಿರುದ್ಧ ವಿಶ್ವ ಹಿಂದೂ ಪರಿಷತ್ ಕೆಂಡಾಮಂಡಲವಾಗಿದೆ.
114 ಕೋಟಿ ರೂ.ವೆಚ್ಚದಲ್ಲಿ ನೂತನ ಸೆಂಟ್ರಲ್ ಮಾರ್ಕೆಟ್ ನಿರ್ಮಾಣವಾಗುತ್ತಿದೆ. ಇದರ ಕೆಳ ನೆಲಮಹಡಿಯಲ್ಲಿ 9 ಗೋಮಾಂಸದ ಮಳಿಗೆ ನಿರ್ಮಾಣ ಆಗಲಿದೆ. ಈ ಮಳಿಗೆಗಳ ನೀಲಿನಕ್ಷೆ ಸಿದ್ಧವಾಗಿದೆ. 18 ತಿಂಗಳಲ್ಲಿ ನೂತನ ಸೆಂಟ್ರಲ್ ಮಾರ್ಕೆಟ್ ಕಟ್ಟಡ ನಿರ್ಮಾಣಗೊಳ್ಳಲಿದೆ.
ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ನೂತನ ಮಾರುಕಟ್ಟೆ ನಿರ್ಮಾಣವಾಗುತ್ತಿದ್ದು, ಪ್ರಸ್ತಾವಿತ ಯೋಜನೆಯಲ್ಲಿ ಬೀಫ್ ಸ್ಟಾಲ್‌ಗೆ ಅವಕಾಶ ಕೊಟ್ಟಿದ್ದಕ್ಕೆ ವಿಶ್ವ ಹಿಂದು ಪರಿಷತ್ ಕಿಡಿಕಾರಿದೆ. ತರಕಾರಿ, ಕೋಳಿ ಅಂಗಡಿಗಳ ಜತೆಗೆ ಬೀಫ್ ಸ್ಟಾಲ್‌ಗೆ ಅವಕಾಶ ನೀಡಿದ್ದಕ್ಕೆ ಆಕ್ರೋಶವನ್ನು ಹೊರಹಾಕಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ಬಳಿಕವೂ ಬಿಜೆಪಿಯಿಂದ ಬೀಫ್ ಸ್ಟಾಲ್‌ಗೆ ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಮಂಡಳಿ ತಕ್ಷಣ ಈ ಯೋಜನೆಯನ್ನು ಕೈ ಬಿಡಬೇಕು. ಕೈ ಬಿಡದೇ ಇದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ | ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲಿ ಲಾರಿಗೆ ಖಾಸಗಿ ಬಸ್ ಡಿಕ್ಕಿ, ಒಬ್ಬನ ಸಾವು