ಬೆಂಗಳೂರು: ಮಕ್ಕಳಿಗೆ ನಿದ್ದೆ ಬರುವ ಔಷಧಿ ನೀಡಿ ಭಿಕ್ಷಾಟನೆಯಲ್ಲಿ (Beggary Rescue) ತೊಡಗಿಸುತ್ತಿರುವುದು ಬೆಳಕಿಗೆ ಬಂದಿದೆ. ಸಿಸಿಬಿ ಮಹಿಳಾ ಸಂರಕ್ಷಣಾ ದಳವು ಬೆಂಗಳೂರಿನಲ್ಲಿ ಬುಧವಾರ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಭಿಕ್ಷಾಟನೆಯಲ್ಲಿ ತೊಡಗಿಸಲಾಗಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ನಗರದ್ಯಾಂತ ಸುಮಾರು 14 ತಂಡಗಳನ್ನು ರಚಿಸಿ ಬುಧವಾರ (ಫೆ.22) ಬೆಳಗ್ಗೆ 9 ರಿಂದ 6ಗಂಟೆ ವರೆಗೆ ನಗರದ ಪ್ರಮುಖ ಹಾಟ್‌ಸ್ಪಾಟ್ ಎಂದು ಗುರುತಿಸಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿದವರ ರಕ್ಷಣೆ ಮಾಡಲಾಗಿದೆ. ಭಿಕ್ಷಾಟನೆಯಲ್ಲಿ ತೊಡಗಿದ್ದ 3 ಹುಡುಗರು, 5 ಹುಡುಗಿಯರು, 17 ತಾಯಂದಿರು ಮತ್ತು 18 ಮಕ್ಕಳು ಹಾಗೂ 5 ಹೆಂಗಸರು, 7 ಗಂಡಸರು ಸೇರಿ 55 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಹಲವು ವಿಚಾರಗಳು ಬಹಿರಂಗವಾಗಿದ್ದು, ಕೆಲ ಮಹಿಳೆಯರನ್ನು ಬಾಡಿಗೆ ಹಾಗೂ ಕಳ್ಳ ಸಾಗಾಣಿಕೆ ಮೂಲಕ ಮಕ್ಕಳನ್ನು ತಂದಿರಬಹುದು ಎಂದು ತಿಳಿದುಬಂದಿದೆ. ಮಾತ್ರವಲ್ಲದೆ ಮಕ್ಕಳಿಗೆ ನಿದ್ದೆ ಔಷಧಿ ನೀಡಿ ಅವರು ಮಲಗಿದ ಬಳಿಕ ಭಿಕ್ಷಾಟನೆ ಮಾಡುತ್ತಿರುವ ಬೆಳಕಿಗೆ ಬಂದಿದೆ. ಈ ಸಂಬಂಧ ಸಿಸಿಬಿಯಿಂದ ತನಿಖೆ ಮುಂದುವರಿದಿದ್ದು, ರಕ್ಷಣೆ ಮಾಡಿದವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಾಂತ್ವನ ಕೇಂದ್ರಕ್ಕೆ ಬಿಡಲಾಗಿದೆ.
ಇದನ್ನೂ ಓದಿ: Road Accident: ಬೈಕ್‌ಗೆ ಟ್ಯಾಂಕರ್ ಡಿಕ್ಕಿಯಾಗಿ ಜೀವಬಿಟ್ಟ ಪಶುವೈದ್ಯ; ಪರಾರಿಯಾದ ಚಾಲಕ
ಈ ಕಾರ್ಯಾಚರಣೆಗೆ ಚೈಲ್ಡ್‌ಲೈನ್ ತಂಡ, ಮಕ್ಕಳ ಪಾಲಾನ ಸಂಸ್ಥೆಗಳು, ನೋಡೆಲ್ ಸಂಸ್ಥೆಗಳು ಸೇರಿ ಮಕ್ಕಳ ಸಹಾಯವಾಣಿ, ಆಫ್ಸಾ ಚೈಲ್ಡ್‌ಲೈನ್ ತಂಡ ಹಾಗೂ ಬೆಂಗಳೂರು ನಗರ ಸಹಾಯಕ ಪೊಲೀಸ್ ಆಯುಕ್ತರು ಸೇರಿದಂತೆ ವಿವಿಧ ತಂಡಗಳು ಸಾಥ್ ನೀಡಿವೆ.
ಬೆಂಗಳೂರಿನ ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ