ಬೆಳಗಾವಿ: ದೇಶದ ಅತ್ಯುತ್ತಮ ೧೩ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಪಟ್ಟಿಯಲ್ಲಿ ಬೆಳಗಾವಿ ಬಿಮ್ಸ್‌ಗೆ 12ನೇ ಸ್ಥಾನ ಪಡೆದುಕೊಂಡಿದೆ. ಇದು ಔಟ್‌ಲುಕ್ ನಿಯತಕಾಲಿಕೆ ಪ್ರತಿ ವರ್ಷ ಪ್ರಕಟಿಸುವ ರ‍್ಯಾಂಕಿಂಗ್ ಪಟ್ಟಿಯಾಗಿದೆ. ಇದರಲ್ಲಿ ಕರ್ನಾಟಕದ ಬಿಮ್ಸ್ ಆಯ್ಕೆಯಾಗಿರುವುದು ಸಂತಸದ ವಿಷಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಡಿಯೊ ಮಾಡಿ ಮಾತನಾಡಿರುವ ಸಚಿವರು, ಅಖಿಲ ಭಾರತ ಮಟ್ಟದಲ್ಲಿ 13 ಸಂಸ್ಥೆಗಳ ಪೈಕಿ ಬಿಮ್ಸ್‌ಗೆ 12ನೇ ಸ್ಥಾನ ಸಿಕ್ಕಿರುವುದು ನಿಜಕ್ಕೂ ಸಂತಸದ ಸಂಗತಿ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಬಿಮ್ಸ್ ವ್ಯವಸ್ಥೆ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಕೋವಿಡ್ ಸಮಯದಲ್ಲಿ ಸಮರ್ಪಕ ವ್ಯವಸ್ಥೆ ಮಾಡಲಾಗಿಲ್ಲ ಎಂದು ದೂರಲಾಗಿತ್ತು. ಹಾಗಾಗಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬಳಿ ವಿಶೇಷ ಅಧಿಕಾರಿ ನೇಮಕಕ್ಕೆ ಮನವಿ ಮಾಡಿಕೊಂಡಿದ್ದೆ. ಆದಾದ ಬಳಿಕ ವಿಶೇಷ ಆಡಳಿತಾಧಿಕಾರಿಯಾಗಿ ಆರ್.ಸಿ. ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರನ್ನು ನೇಮಕ ಮಾಡಲಾಯಿತು. ಈಗ ಕಾಲೇಜು ಸುಧಾರಣೆ ಕಂಡಿದ್ದು, ರಾಜ್ಯದಲ್ಲಿ ಉತ್ತಮ ವೈದ್ಯಕೀಯ ವಿಜ್ಞಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದ್ದಾರೆ.
ಮುಂದುವರೆದು ಶಿಕ್ಷಣ ಗುಣಮಟ್ಟದಲ್ಲಿ ದೇಶದಲ್ಲೇ 8ನೇ ಸ್ಥಾನ, ಮೂಲಸೌಕರ್ಯದಲ್ಲಿ ೫ನೇ ಸ್ಥಾನ ಹಾಗೂ ಆಡಳಿತ ವಿಚಾರದಲ್ಲಿ 12ನೇ ಸ್ಥಾನದಲ್ಲಿ ಬಿಮ್ಸ್ ಇದೆ. ಇದಕ್ಕಾಗಿ ಶ್ರಮಿಸಿದ ಬಿಮ್ಸ್ನ ಎಲ್ಲ ಸಿಬ್ಬಂದಿ, ವೈದ್ಯರಿಗೆ ಧನ್ಯವಾದ ಎಂದು ಸಚಿವರು ಹೇಳಿದ್ದಾರೆ.
ಇದನ್ನು ಓದಿ| ಕೆಆರ್‌ಎಸ್ ಡ್ಯಾಂ | ಬದಲಾಯಿಸುವ 80 ವರ್ಷದ ಹಳೇ ಗೇಟ್‌ಗಳು ಮ್ಯೂಸಿಯಂಗೆ: ಸಚಿವ ಗೋವಿಂದ ಕಾರಜೋಳ