Site icon Vistara News

Belagavi News | ಎಸಿ ದುರಸ್ತಿ ಮಾಡುತ್ತಿದ್ದ ಟೆಕ್ನಿಷಿಯನ್‌ ಮೂರನೇ ಮಹಡಿಯಿಂದ ಬಿದ್ದು ಗಾಯ

Injury belagavi Private Lodge

ಬೆಳಗಾವಿ: ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ಇರುವ (Belagavi News) ಖಾಸಗಿ ಲಾಡ್ಜ್‌ನ ೩ನೇ ಮಹಡಿಯಲ್ಲಿ ಟೆಕ್ನಿಷಿಯನ್‌ ಒಬ್ಬರು ಎಸಿ ದುರಸ್ತಿ ಮಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಬೀರ್ ಗಾಯಗೊಂಡ ವ್ಯಕ್ತಿಯಾಗಿದ್ದು, ಇವರು ಎಸಿ ದುರಸ್ತಿ ಮಾಡುತ್ತಿದ್ದಾಗ ಆಯತಪ್ಪಿದ್ದಾರೆ. ಹೀಗಾಗಿ ಮೂರನೇ ಮಹಡಿಯಿಂದ ಲಾಡ್ಜ್ ಪಕ್ಕದ ಮಳಿಗೆಯ ತಗಡಿನ ಚಾವಣಿಯ ಮೇಲೆ ಬಿದ್ದಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ಕೆಳಗಿಳಿಸಿ ಆಂಬ್ಯುಲೆನ್ಸ್‌‌ ಮೂಲಕ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಬೀರ್‌ಗೆ ಸದ್ಯ ಬಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ | Aamir Khan | ಮಾಜಿ ಪತ್ನಿ ಕಿರಣ್ ರಾವ್ ಜತೆ ಹಿಂದು ಸಂಪ್ರದಾಯದಂತೆ ಕಳಶ ಪೂಜೆ ಮಾಡಿದ ಆಮೀರ್ ಖಾನ್‌: ಏನಿದರ ವಿಶೇಷತೆ?

Exit mobile version