Site icon Vistara News

Belagavi Session | ಗುರು ರಾಘವೇಂದ್ರ ಬ್ಯಾಂಕ್ ಅಕ್ರಮ; ಆರ್‌ಬಿಐ ವರದಿ ಬಂದ ಬಳಿಕ ಕ್ರಮ ಎಂದ ಎಸ್‌.ಟಿ.ಸೋಮಶೇಖರ್‌

Belagavi Session

ಬೆಳಗಾವಿ: ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಅವ್ಯವಹಾರ ಪ್ರಕರಣದಲ್ಲಿ 1294 ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಎಂದು ಆಡಿಟ್ ರಿಪೋರ್ಟ್ ಬಂದಿದ್ದು, ಈ ಬಗ್ಗೆ ಎಫ್‌ಐಆರ್ ಆಗಿದೆ. 819 ಕೋಟಿ ರೂಪಾಯಿ ಸಾಲಪಡೆದವರ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. 1,194 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಿಐಡಿ, ಇಡಿ ಸೂಚನೆ ನೀಡಿದೆ. ಹರಾಜು ಹಾಕಲು ಕ್ರಮ ಕೈಗೊಳ್ಳಲಿದ್ದೇವೆ. ರಿಸರ್ವ್‌ ಬ್ಯಾಂಕ್ ವರದಿಕೊಟ್ಟ ಬಳಿಕ ಅಂತಿಮ ಕ್ರಮ ಕೈಗೊಳ್ಳಲಾಗುತ್ತದೆ ಎಂದು (Belagavi Session) ಸಹಕಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಅವ್ಯವಹಾರದ ಬಗ್ಗೆ ಮಂಗಳವಾರ ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿ, 737 ಕೋಟಿ ರೂ.ಗಳನ್ನು 224 ಜನಕ್ಕೆ ಪರಿಹಾರ ಕೊಡಲಾಗಿದೆ. ರಿಸರ್ವ್‌ ಬ್ಯಾಂಕ್ ನಿರ್ದೇಶನದಂತೆ ಅಶೋಕನ್ ಎನ್ನುವ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಐವರು ಇದನ್ನು ಸ್ವಾಧೀನಕ್ಕೆ ಪಡೆಯಲು ಮುಂದಾಗಿದ್ದಾರೆ. ಇವರಲ್ಲಿ ಒಬ್ಬರಿಗೆ ನೀಡಲಾಗುತ್ತದೆ. ಠೇವಣಿದಾರರ 300 ಕೋಟಿ ರೂಪಾಯಿ ಫ್ರೀಜ್ ಮಾಡಿದ್ದೇವೆ. ಆಡಿಟ್ ಮಾಡಿದವರನ್ನು ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | Voter Data | ದತ್ತಾಂಶ ಕದ್ದ ಚಿಲುಮೆ ಸಂಸ್ಥೆ ಬ್ಯಾನ್‌: ಕಪ್ಪುಪಟ್ಟಿಗೆ ಸೇರಿಸುವ ಬಿಬಿಎಂಪಿ ಆದೇಶದಲ್ಲಿ ಬಿಜೆಪಿ ಮಾಜಿ ಶಾಸಕನ ಹೆಸರು ಉಲ್ಲೇಖ

ಪ್ರತಿ ಸದನದಲ್ಲೂ ಹಗರಣದ ಬಗ್ಗೆ ಸಚಿವರು ಅಧಿಕಾರಿಗಳು ಬರೆದುಕೊಟ್ಟ ಉತ್ತರವನ್ನು ಓದುತ್ತಾರೆ. ಇಲ್ಲಿಯವರೆಗೂ ಯಾವುದೇ ಪ್ರಗತಿ ಆಗಿಲ್ಲ. ಅತ್ಯಂತ ಹೆಚ್ಚಿನ ಸಾಲ ಪಡೆದ 24 ಜನರ ಹೆಸರು ಪ್ರಕಟಿಸುವಂತೆ ಕೇಳಿದರೂ ಪ್ರಕಟಿಸಿಲ್ಲ. ಸಿಐಡಿ ತನಿಖೆ ಏನಾಯಿತು. ಲೆಕ್ಕ ಪರಿಶೋಧಕರ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ? ಇ.ಡಿಯವರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳುತ್ತಾರೆ, ಏನು ಪ್ರಗತಿ ಆಗಿದೆ ಎಂದು ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್ ಪ್ರಶ್ನಿಸಿದ್ದರು.

ನಂತರ ಹಗರಣದಲ್ಲಿ ಪೋಲಿಸರು, ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದನ್ನು ಸಿಬಿಐಗೆ ಕೊಡಿ, ಸಿಐಡಿ ತನಿಖೆ ವಿಳಂಬ ಆಗುತ್ತಿದೆ. ಮೂರು ತಿಂಗಳಲ್ಲಿ 483 ಕೋಟಿ ರೂಪಾಯಿ ಖರ್ಚು ಹೇಗೆ ಆಯಿತು ಎಂಬ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಸಚಿವ ಸೋಮಶೇಖರ್ ಉತ್ತರಿಸಿ, ಇದನ್ನು ನಾವು ಒಪ್ಪುವುದಿಲ್ಲ. ಇದರಲ್ಲಿ ಸರ್ಕಾರ ಯಾರನ್ನೂ ರಕ್ಷಿಸುವ ಕೆಲಸ ಮಾಡುತ್ತಿಲ್ಲ. ಬಡವರ ಹಣದಲ್ಲಿ ಸರ್ಕಾರ ಆಟ ಆಡುವುದಿಲ್ಲ ಎಂದು ಹೇಳಿದರು.

ಪ್ರಕರಣದಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ? ಕಳೆದ ಬಾರಿ 2 ಸಾವಿರ ಕೋಟಿ ರೂಪಾಯಿ ಹಗರಣ ಎಂದಿದ್ದರು, ಈಗ 1194 ಕೋಟಿ ರೂಪಾಯಿ ಹಗರಣ‌ ಎಂದು ಹೇಳುತ್ತಿದ್ದಾರೆ ಎಂದು ಬಿ.ಕೆ.ಹರಿಪಸ್ರಾದ್ ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, 42 ಜನರ ಮೇಲೆ‌ ಕೇಸ್ ದಾಖಲಾಗಿದೆ. ಅದರಲ್ಲಿ ಕೆಲವರು ಬೇಲ್ ಮೇಲೆ ಹೊರ ಬಂದಿದ್ದಾರೆ. ಆರ್‌ಬಿಐ ಸೂಚನೆ ಮೇರೆಗೆ ಅಶೋಕನ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅವರಿಗೆ 483 ಕೋಟಿ ರೂಪಾಯಿ ಖರ್ಚು ಮಾಡುವ ಅಧಿಕಾರವಿಲ್ಲ. ಅದರ ಬಗ್ಗೆ ನನಗೆ ಮಾಹಿತಿಯಿಲ್ಲ. ೧ ಲಕ್ಷ ರೂಪಾಯಿ ಖರ್ಚು ಮಾಡಬೇಕಾದರೂ ಅರ್‌ಬಿಐ ಅನುಮತಿ ಬೇಕು. ಜಶವಂತ್ ರೆಡ್ಡಿ ಹಾಗೂ ರಂಚಿತ್‌ ರೆಡ್ಡಿ ಹೆಚ್ಚು ಸಾಲ‌ ಪಡೆದಿದ್ದಾರೆ. ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.

ನೀವು ಬಡವರ ಪರವಾಗಿದ್ದರೇ ಸಿಬಿಐ ತನಿಖೆಗೆ ಪ್ರಕರಣ ವಹಿಸಿ ಎಂದು ಬಿ.ಕೆ.ಹರಿಪಸ್ರಾದ್ ಹೇಳಿದರು. ಇದಕ್ಕೆ ಸ್ಪಂದಿಸಿದ ಸಚಿವ ಸೋಮಶೇಖರ್, ಸಿಬಿಐಗೆ ಕೊಡಲು ಅಭ್ಯಂತರವಿಲ್ಲ, ಆದರೆ ತಡ ಆಗುತ್ತದೆ. ನಮ್ಮ ಸಿಐಡಿಯವರೇ ಸಮರ್ಥವಾಗಿದ್ದಾರೆ. ಆದ್ದರಿಂದ ಸಿಬಿಐಗೆ ಕೊಡಲು ಆಗಲ್ಲ ಎಂದು ತಿಳಿಸಿದರು.

ಹಗರಣದಲ್ಲಿ ಬಿಜೆಪಿಯವರು ಶಾಮೀಲಾಗಿದ್ದಾರೆ. ಕಾಂಗ್ರೆಸ್‌ನವರು ಇದ್ದಿದ್ದರೆ ಇಷ್ಟೋತ್ತಿಗೆ ರುಬ್ಬಿ ಚಟ್ನಿ ಮಾಡುತ್ತಿದ್ದರು. ಬಿಜೆಪಿಯವರು ಇರುವ ಕಾರಣಕ್ಕೆ ತನಿಖೆ ವಿಳಂಬವಾಗುತ್ತಿದೆ ಎಂದು ಪಿ.ಆರ್. ರಮೇಶ್‌ ಆರೋಪಿಸಿದ್ದಕ್ಕೆ ಕೆರಳಿದ ಬಿಜೆಪಿ ಸದಸ್ಯರು, ಇದರಲ್ಲಿ ರಾಜಕಾರಣ ಮಾಡುವುದು ಬೇಡ. ಠೇವಣಿದಾರರಿಗೆ ಹಣ ಸಿಗಬೇಕು ಎಂದು ನಾವೂ ಒತ್ತಾಯಿಸಿದ್ದೇವೆ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್‌ ಸದಸ್ಯರು ಆಕ್ರೋಶ ಹೊರಹಾಕಿ

ಇದನ್ನೂ ಓದಿ | Bank fraud | ಸಹಕಾರಿ ಬ್ಯಾಂಕ್‌ಗಳ ಅಕ್ರಮ ಕೇಸ್‌ ಸಿಬಿಐಗೆ ವಹಿಸಿ ಸಂತ್ರಸ್ತರಿಗೆ ನ್ಯಾಯ ಕೊಡಿಸಿ: ಡಾ. ಶಂಕರ ಗುಹಾ ದ್ವಾರಕಾನಾಥ್

Exit mobile version