Site icon Vistara News

Belagavi to Delhi Flight : ಬೆಳಗಾವಿ-ದಿಲ್ಲಿ ನೇರ ವಿಮಾನ ಅ.5ರಿಂದ; ದರ ಎಷ್ಟು? ಟೈಮಿಂಗ್‌ ಹೇಗೆ?

Belagavi delhi flights

ಬೆಂಗಳೂರು: ಹಲವು ರಾಜಕೀಯ ಚಟುವಟಿಕೆಗಳ ತಾಣ, ಹಲವು ರಾಜ್ಯಗಳ ಜತೆ ಸಂಪರ್ಕ ಹೊಂದಿರುವ ಬೆಳಗಾವಿಯನ್ನು ರಾಷ್ಟ್ರ ರಾಜಧಾನಿಯ ದಿಲ್ಲಿಗೆ ನೇರವಾಗಿ ಕನೆಕ್ಟ್‌ ಮಾಡುವ ವಿಮಾನ ಯಾನ ಸೇವೆ (Belagavi to Delhi flight) ಅಕ್ಟೋಬರ್‌ 5ರಿಂದ (Flight to delhi from october 5) ಆರಂಭವಾಗಲಿದೆ. ಇದಕ್ಕಾಗಿ ಭರದ ಸಿದ್ಧತೆಗಳು ನಡೆದಿದ್ದು, ಬೆಳಗಾವಿಗರೂ ಸಂಭ್ರಮದಲ್ಲಿದ್ದಾರೆ.

ಇದುವರೆಗೆ ಬೆಳಗಾವಿಯಿಂದ ದಿಲ್ಲಿಗೆ ಹೋಗಬೇಕು ಎಂದರೆ ಒಂದೋ ಬೆಂಗಳೂರಿಗೆ ಬಂದು ಹೋಗಬೇಕು, ಇಲ್ಲವೇ ಹೈದರಾಬಾದ್‌ ಮೂಲಕ ಸಾಗಬೇಕು. ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಈಗ ನೇರ ವಿಮಾನ ಸಂಚಾರಕ್ಕೆ ಅಣಿಯಾಗಿರುವುದು ಭಾರಿ ಲಾಭವನ್ನು ತಂದುಕೊಡಲಿದೆ.

ಈ ವಿಮಾನಯಾನ ಸೇವೆ ಆರಂಭಕ್ಕೆ ಮನಸು ಮಾಡಿರುವುದು ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಇಂಡಿಗೋ ಏರ್‌ಲೈನ್ಸ್‌. ಅದು ಅಕ್ಟೋಬರ್‌ 5ರಿಂದ ಪ್ರತಿ ದಿನ ವಿಮಾನ ಯಾನಕ್ಕೆ ನಿರ್ಧರಿಸಿದೆ. ಇದರೊಂದಿಗೆ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.

ಇದನ್ನೂ ಓದಿ : IndiGo Flight: ವಿಮಾನದಲ್ಲಿ ದುರ್ವರ್ತನೆ ತೋರಿ, ಟಾಯ್ಲೆಟ್‌ನಲ್ಲಿ ಲಾಕ್‌ ಮಾಡಿಕೊಂಡವನ ಬಂಧನ

ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಅಕ್ಟೋಬರ್‌ 5ರಂದು ದೆಹಲಿ ಮತ್ತು ಬೆಳಗಾವಿ ನಡುವೆ ವಿಮಾನಯಾನ ಆರಂಭಿಸುವ ಜತೆಗೆ ಅಕ್ಟೋಬರ್‌ 31 ರಿಂದ ಪುಣೆ-ಬೆಳಗಾವಿ ನಡುವೆ ಕೂಡ ವಾರದಲ್ಲಿ 3 ದಿನ (ಮಂಗಳವಾರ, ಗುರುವಾರ ಮತ್ತು ಶನಿವಾರ) ವಿಮಾನಯಾನ ಸಂಚಾರ ಸೇವೆ ಒದಗಿಸಲಿದೆ ಎಂದು ಹೇಳಲಾಗಿದೆ.

ಇನ್ನು ಅಕ್ಟೋಬರ್‌ 29ರಿಂದ ಸ್ಟಾರ್ ಏರ್‌ಲೈನ್ಸ್ ಸಂಸ್ಥೆಯು ಪುಣೆ-ಬೆಳಗಾವಿ ನಡುವೆ ಪ್ರತಿದಿನ ವಿಮಾನಯಾನ ಸಂಚಾರ ಸೇವೆಯನ್ನು ಪ್ರಾರಂಭಿಸಲಿದೆ ಬೆಳಗಾವಿಯಿಂದ ದೆಹಲಿ ಹಾಗೂ ಪುಣೆ ನಗರಗಳಿಗೆ ವಿಮಾನಯಾನ ಸೇವೆ ಪ್ರಾರಂಭಿಸಲಿದೆ.

ಟಿಕೆಟ್‌ ದರ ಎಷ್ಟು? ಟೈಮಿಂಗ್ಸ್‌ ಹೇಗೆ?

ಬೆಳಗಾವಿಯಿಂದ ದಿಲ್ಲಿಗೆ ಹೋಗುವ ವಿಮಾನದಲ್ಲಿ ಟಿಕೆಟ್‌ ದರ 5,926 ರೂ. ಎಂದು ನಿಗದಿಪಡಿಸಲಾಗಿದೆ. ಇದು ಬೇಡಿಕೆಗೆ ತಕ್ಕಂತೆ ಬದಲಾವಣೆ ಆಗಬಹುದು. ಪ್ರತಿದಿನ ಸಂಜೆ 6.35ಕ್ಕೆ ವಿಮಾನ ಬೆಳಗಾವಿಯಿಂದ ದಿಲ್ಲಿಗೆ ಹೊರಡಲಿದೆ. ದಿಲ್ಲಿಯಿಂದ ಸಂಜೆ 3.45ಕ್ಕೆ ಬೆಳಗಾವಿಗೆ ಹೊರಡಲಿದೆ. ಇದು ಸುಮಾರು ಎರಡೂವರೆ ಗಂಟೆಗಳ ಪಯಣ.

Exit mobile version