ಬೆಳಗಾವಿ: ಪಾಗಲ್ ಪ್ರೇಮಿಯೊಬ್ಬನ ಹುಚ್ಚಾಟಕ್ಕೆ ನವ ವಿವಾಹಿತೆಯೊಬ್ಬಳ ಜೀವನವೇ ಹಾಳಾಗಿದೆ. ಪ್ರೇಯಸಿ ಬೇರೆನೊಬ್ಬನನ್ನು ಮದುವೆ ಆದಳೆಂದು ಸಿಟ್ಟಾದ ಮುತ್ತುರಾಜ್ ಎಂಬಾತ ಆಕೆಯೊಂದಿಗೆ ಕಳೆದಿದ್ದ ಖಾಸಗಿ ಫೋಟೊ, ವಿಡಿಯೊವನ್ನು ಪತಿಗೆ ಕಳಿಸಿದ್ದಾನೆ. ಬೆಳಗಾವಿಯ ಕಿತ್ತೂರು ಪಟ್ಟಣದಲ್ಲಿ ಘಟನೆ (Belgavi News) ನಡೆದಿದೆ.
ನವ ವಿವಾಹಿತೆಗೆ ವಿಲನ್ ಆದ ಹಳೇ ಪ್ರೇಮಿ ಮುತ್ತುರಾಜ್ ವಿರುದ್ಧ ದೂರು ನೀಡಲು ಹೋದರೆ ಪೊಲೀಸರು ನಿರಾಕರಿಸಿದ್ದರು ಎನ್ನಲಾಗಿದೆ. ನೀವೇ ಕರೆದುಕೊಂಡು ಬನ್ನಿ ಎಂದು ಪೊಲೀಸರು ಯುವತಿಯನ್ನೇ ದಬಾಯಿಸಿದ್ದಾರೆ ಎಂಬ ಆರೋಪವಿದೆ. ನೊಂದ ಯುವತಿ ನನಗೆ ಏನಾದರೂ ಆದರೆ ಅದಕ್ಕೆ ನೇರ ಕಾರಣ ಪೊಲೀಸರೇ ಎಂದಿದ್ದಳು. ಇದೀಗ ಎಚ್ಚೆತ್ತುಕೊಂಡಿರುವ ಕಿತ್ತೂರು ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯನ್ನೂ ಬಂಧಿಸಿದ್ದಾರೆ. ಮುತ್ತುರಾಜ್ ಸೇರಿ ಒಟ್ಟು ಎಂಟು ಮಂದಿ ವಿರುದ್ಧ ಸೆಕ್ಷನ್ 143,147, 417, 376, 323, 504, 506ರ ಅಡಿ ದೂರು ದಾಖಲಿಸಿಕೊಂಡಿದ್ದಾರೆ.
ಆರೋಪಿ ಮುತ್ತುರಾಜ್ (24) ಯುವತಿಯನ್ನು ಪುಸಲಾಯಿಸಿ ಪ್ರೀತಿ ಬಲೆಗೆ ಬೀಳಿಸಿಕೊಂಡಿದ್ದ. ಇವರಿಬ್ಬರು ಹಲವಾರು ವರ್ಷಗಳ ಕಾಲ ಪ್ರೀತಿಸಿದ್ದರು. ಪ್ರೀತಿ ನೆಪದಲ್ಲೆ ಮನೆಗೆ ಬಂದಿದ್ದ ಮುತ್ತುರಾಜ್ ಮದುವೆ ಆಗುವುದಾಗಿ ನಂಬಿಸಿ, ಆಕೆಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕವನ್ನು ಬೆಳೆಸಿದ್ದ. ಆ ಸಂದರ್ಭದಲ್ಲಿ ಆಕೆಗೆ ತಿಳಿಯದ ಹಾಗೇ ಖಾಸಗಿ ಕ್ಷಣದ ಫೋಟೊ ಹಾಗೂ ವಿಡಿಯೊಗಳನ್ನು ಸೆರೆಹಿಡಿದುಕೊಂಡಿದ್ದ.
ಇದನ್ನೂ ಓದಿ: Murder Case : ತಮ್ಮನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಅಣ್ಣ
ಬಳಿಕ ಮದುವೆ ಆಗು ಎಂದಾಗ ಮಾತು ಮರೆಸುತ್ತಿದ್ದ. ಯುವತಿ ಒತ್ತಾಯ ಮಾಡಿದಾಗ ಮದುವೆಗೆ ನಿರಾಕರಿಸಿ ಮೋಸ ಮಾಡಿದ್ದ. ಮಾತ್ರವಲ್ಲದೇ ಈ ವಿಷಯವನ್ನೆಲ್ಲ ಮನೆಯಲ್ಲಿ ಹೇಳಿದರೆ, ನಿನ್ನ ಹಾಗೂ ಮನೆಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾನೆ. ಈತನ ಸಹವಾಸವೇ ಬೇಡವೆಂದು ದೂರದ ಯುವತಿ ಇತ್ತೀಚೆಗೆ ಮನೆಯಲ್ಲಿ ತೋರಿಸಿದ್ದ ಬೇರೊಬ್ಬ ಯುವಕನನ್ನು ಮದುವೆ ಆಗಿದ್ದಳು.
ಈ ವಿಷಯ ತಿಳಿಯುತ್ತಿದ್ದಂತೆ ಸಿಟ್ಟಾದ ಮುತ್ತುರಾಜ್, ಆಕೆಯೊಟ್ಟಿಗೆ ಕಳೆದಿದ್ದ ಖಾಸಗಿ ಕ್ಷಣದ ಫೋಟೊ ಹಾಗೂ ವಿಡಿಯೊವನ್ನು ನೇರವಾಗಿ ಗಂಡನ ಮನೆಯವರಿಗೆ ತೋರಿದ್ದಾನೆ. ಇದನ್ನೂ ಕೇಳಲು ಹೋದರೆ ಯುವತಿಗೂ ಹಾಗೂ ಪೋಷಕರಿಗೆ ಹಲ್ಲೆ ಮಾಡಿದ್ದಾನೆ. ಇತ್ತ ಗಂಡನ ಕುಟುಂಬಸ್ಥರು ನವ ವಿವಾಹಿತೆಯನ್ನು ಹೊರ ಹಾಕಿದ್ದಾರೆ.
ಮತ್ತೊಂದು ಕಡೆ ಮುತ್ತುರಾಜ್ ಕುಟುಂಬಸ್ಥರು ಇವರಿಬ್ಬರ ಮದುವೆಗೆ ನಿರಾಕರಿಸಿದ್ದಾರೆ. ದಿಕ್ಕುತೋಚದಂತಾಗಿ ಮುತ್ತುರಾಜ್ ಮನೆ ಎದುರಿಗೆ ಧರಣಿಯನ್ನು ಕುಳಿತಿದ್ದಳು. ಸಂತ್ರಸ್ತೆ ಯುವತಿ ಹಾಗೂ ಪೋಷಕರು ದೂರು ಕೊಡಲು ಹೋದರೆ ಇತ್ತ ಪೊಲೀಸರು ಸರಿಯಾಗಿ ಸ್ಪಂದಿಸಿರಲಿಲ್ಲ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆರೋಪಿ ಮುತ್ತುರಾಜ್‌ನನ್ನು ಬಂಧಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ