ಬೆಳಗಾವಿ: ಇತ್ತೀಚೆಗೆ ಸೆಪ್ಟೆಂಬರ್ ತಿಂಗಳಲ್ಲಿ ಬಿಹಾರ್ ರಾಜ್ಯದಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿತ್ತು. ಹೀಗಾಗಿ ಅಲ್ಲಿದ್ದವರು ವ್ಯಕ್ತಿಗೆ ಮನಬಂದಂತೆ ಥಳಿಸಿ ಬಳಿಕ ಬಲವಂತವಾಗಿ ತಲೆಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರು. ಇದೀಗ ಅದೇ ರೀತಿ ಕರ್ನಾಟಕದ ಬೆಳಗಾವಿಯ (Belgavi News) ಘಟಪ್ರಭಾದಲ್ಲಿ ತಡರಾತ್ರಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮರವಣಿಗೆ ಮಾಡಿರುವ ಘಟನೆ ನಡೆದಿದೆ.
ಶ್ರೀದೇವಿ ಗೊಡಚಿ ಎಂಬಾಕೆಗೆ ಮಹಿಳೆಯರು ಎಲ್ಲ ಸೇರಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಶ್ರೀದೇವಿ ಮೇಲೆ ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್ ಮೇಲ್ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ. ಮೃತ್ಯುಂಜಯ ಸರ್ಕಲ್‌ನಲ್ಲಿ ಹತ್ತಾರು ಮಹಿಳೆಯರಿಂದ ಶ್ರೀದೇವಿಗೆ ಚಪ್ಪಲಿ ಹಾರ ಹಾಕಿದ್ದಾರೆ.
ಕೆಲ ದಿನಗಳ ಹಿಂದೆ ಸ್ಥಳೀಯರು ಎಸ್‌ಪಿಗೂ ಶ್ರೀದೇವಿಯ ಕಿರುಕುಳುದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಅವರು ಯಾವುದೇ ಕ್ರಮಕೈಗೊಳದೇ ಇದ್ದಾಗ ಈ ರೀತಿ ತಾವೇ ಶಿಕ್ಷಿಸಲು ಮುಂದಾಗಿದ್ದಾರೆ. ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಶ್ರೀದೇವಿ ಹನಿಟ್ರ್ಯಾಪ್ ಮಾಡಿ ಬಳಿಕ ಲಕ್ಷಾಂತರ ರೂಪಾಯಿ ಹಣವನ್ನು ದೋಚಿಸಿದ್ದಾರೆ. ರೌಡಿಸಂ ಮಾಡಿ ಹಲ್ಲೆಗೂ ಮುಂದಾಗಿದ್ದಾಳೆ. ಬೆಳಗಾವಿಯಿಂದಲೇ ಈಕೆಯನ್ನು ಗಡಿಪಾರು ಮಾಡಬೇಕು. ಪೊಲೀಸರು ಕೂಡಲೇ ಈಕೆಯನ್ನು ಬಂಧಿಸಿ ಶಿಕ್ಷೆಯನ್ನು ಕೊಡಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ