Site icon Vistara News

ಬೈಕ್ ಕದ್ದು ಅಡ ಇಡುತ್ತಿದ್ದ ಕಳ್ಳರ ಬಂಧನ, 9 ಬೈಕ್ ಜಪ್ತಿ

ಬೆಳಗಾವಿ: ಇವರು ಖತರ್ನಾಕ್ ಕಳ್ಳರು‌, ಬೈಕ್‌ಗಳನ್ನು ಕದ್ದು ಅಡ ಇಟ್ಟು ಮೋಜು ಮಾಡುತ್ತಿದ್ದರು. ನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ ಓಡಿಸಿಕೊಂಡು ಹೋಗುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಮೂಡಲಗಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಬಸ್ ನಿಲ್ದಾಣ ಹಾಗೂ ರಸ್ತೆಗಳ ಪಕ್ಕದಲ್ಲಿ ನಿಲ್ಲಸಿದ್ದ ಬೈಕಗಳೇ ಇವರ ಟಾರ್ಗೆಟ್‌ ಆಗಿತ್ತು. ಜುಲೈ 11 ರಂದು ಬೆಳಗ್ಗೆ ಪಟ್ಟಣದ ಗೋಕಾಕ ಕ್ರಾಸ್ ಬಳಿ ಪೊಲೀಸರು ಬೈಕ್ ತಪಾಸಣೆ ನಡೆಸುತ್ತಿದ್ದಾಗ ಮೂವರು ಯುವಕರು ಬೈಕ್‌ನಲ್ಲಿ ಬಂದಿದ್ದಾರೆ. ಆ ಬೈಕ್‌ಗೆ ನಂಬರ್‌ ಪ್ಲೇಟ್‌ ಕೂಡಾ ಇರಲಿಲ್ಲ. ಬೈಕ್ ನಿಲ್ಲಿಸುವಂತೆ ಪೊಲೀಸ್ ಸಿಬ್ಬಂದಿ ಕೈ ತೋರಿಸಿದರೂ ನಿಲ್ಲಿಸದೇ ಹಾಗೆ ಹೋಗಿದ್ದಾರೆ. ಅವರನ್ನು ಪೊಲೀಸ್ ಸಿಬ್ಬಂದಿ ಹಿಂಬಾಲಿಸಿ ಬೈಕ ಸಹಿತ ಆರೋಪಿಗಳನ್ನು ಹಿಡಿದಿದ್ದಾರೆ.

ವಿಚಾರಣೆ ನಡೆಸಿದ ಪೊಲೀಸರಿಗೆ ಇವರು ೬ ತಿಂಗಳಿನಿಂದ ಬೈಕ್‌ ಕದಿಯುತ್ತಿರುವ ಬಗ್ಗೆ ತಿಳಿದಿದೆ. ಇದುವರೆಗೆ ಸುಮಾರು 9 ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬಳಿಕ ಮೋಜು ಮಾಡಿಕೊಂಡಿರುತ್ತಿದ್ದರು. ಒಂದೇ ಪಟ್ಟಣದಲ್ಲಿ ಬೈಕ್‌ಗಳನ್ನು ಕದಿಯದೇ ಬೇರೆ ಬೇರೆ ಪಟ್ಟಣಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.

ಇದನ್ನೂ ಓದಿ| ಚಿನ್ನ, ಬೆಳ್ಳಿ, ಹಣ ಅಲ್ಲ; ಬೈಕ್‌ನಲ್ಲಿ ಬಂದು ಪಾಟ್‌, ಚಪ್ಪಲಿ ಕದಿಯುವ ಕಳ್ಳರು ಇವರು

ಪಟ್ಟಣದ ಗವಿ ತೋಟದ ಆನಂದ ಶರತ್ ಚೌಗಲಾ, ಕಲ್ಲಪ್ಪ ಮಲ್ಲಿಕಾರ್ಜನ ಬಿಸನಕೊಪ್ಪ, ಬಸವರಾಜ ಶ್ರೀಕಾಂತ ನಿಡಗುಂದಿ ಆರೋಪಿಗಳಾಗಿದ್ದು, ಪಟ್ಟಣದಲ್ಲಿ ಒಂದು ಬೈಕ್, ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಒಂದು, ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಒಂದು, ಪಾಲಬಾಂವಿ ಗ್ರಾಮದಲ್ಲಿ ಒಂದು, ಮುಧೋಳ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ನಾಲ್ಕು, ಸೈದಾಪೂರ ಗ್ರಾಮದಲ್ಲಿ ಒಂದು ಬೈಕ್‌ಗಳನ್ನು ಕಳ್ಳತನ ಮಾದ್ದರು. ಇದರಲ್ಲಿ ರಾಯಬಾಗ ತಾಲೂಕಿನ ಇಟನ್ಯಾಳ ಗ್ರಾಮದ ವ್ಯಕ್ತಿಯೊಬ್ಬನ ಬಳಿ ಎರಡು ಬೈಕ್‌ಗಳನ್ನು ಅಡವಿಟ್ಟರುವ ಬಗ್ಗೆ ಆರೋಪಿಗಳು ತಿಳಿಸಿದ್ದು, ಆ ಬೈಕ್‌ಗಳನ್ನು ಮೂಡಲಗಿ ಪೊಲೀಸರು ವಶಪಡೆಕೊಂಡಿದ್ದಾರೆ. ಉಳಿದ ಬೈಕ್‌ಗಳನ್ನು ಸಹ ವಶಪಡಿಸಿಕೊಂಡಿದ್ದು, ಈ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ| ಮನೆ ಮುಂದೆಯೇ ಬೈಕ್‌ ಕದಿಯುತ್ತಿದ್ದ ಕುಖ್ಯಾತರ ಬಂಧನ

Exit mobile version