Site icon Vistara News

Black Magic : ಅಮಾವಾಸ್ಯೆಯಂದು ಮಾಟ ಮಂತ್ರ; ತಲೆಬುರಡೆ, ನಿಂಬೆ ಕಂಡು ಬೆಚ್ಚಿ ಬಿದ್ದ ಗ್ರಾಮಸ್ಥರು!

Black magic At belgavi For amavaseye day

ಬೆಳಗಾವಿ: ಮಾಂತ್ರಿಕ ಶಕ್ತಿಯನ್ನು (Black Magic) ಉಪಯೋಗಿಸಿಕೊಂಡು ಜನರನ್ನು ಹಿಂಸಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಸದ್ಯ ಬೆಳಗಾವಿಯಲ್ಲಿ ರಾತೋರಾತ್ರಿ ಮನೆಯ ಮುಂದೆ ಕಿಡಿಗೇಡಿಗಳು ಮಾಟಮಂತ್ರ ಮಾಡಿರುವ ಘಟನೆ ನಡೆದಿದೆ. ಅಮವಾಸ್ಯೆ ಹಿನ್ನೆಲೆಯಲ್ಲಿ ಭಯಾನಕ ರೀತಿಯಲ್ಲಿ ವಾಮಾಚಾರ ಮಾಡಲಾಗಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಘಟನೆ ನಡೆದಿದೆ.

ಗ್ರಾಮದ ಬಸವ್ವ ಚನ್ನಯ್ಯ ಮಠಪತಿ ಎಂಬುವವರ ಮನೆಯ ಮುಂದೆ ಮಾನವನ ತಲೆ ಬುರುಡೆ ಹಾಗೂ ಅರಿಶಿನ- ಕುಂಕುಮ ಸಮೇತ ನಿಂಬೆ ಹಣ್ಣುಗಳನ್ನು ಕಿಡಿಗೇಡಿಗಳು ಇಟ್ಟು ಹೋಗಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ಕುಟುಂಬಸ್ಥರು ಭೀತಿಗೊಂಡಿದ್ದಾರೆ. ಮನೆಯವರ ಹೆಸರುಗಳನ್ನು ಬರೆದು ಮಾಟ ಮಾಡಿಸಿದ್ದಾರೆ. ಘಟನೆಯಿಂದ ಬಸವ್ವ ಕುಟುಂಬಸ್ಥರು ಮಾತ್ರವಲ್ಲದೆ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಆ ದಾರಿಯಲ್ಲಿ ಓಡಾಟಲು ಕೂಡ ಹೆದರುವಂತಾಗಿದೆ.

ಮನೆ ಮುಂದೆ ತಲೆಬುರುಡೆ ಇಟ್ಟು ನಿಂಬೆಹಣ್ಣು ಮಂತ್ರಿಸಿರುವುದು

ಇದನ್ನೂ ಓದಿ: ಹಾಸನದಲ್ಲಿ ಕಾಡಾನೆಗಳ ಪರೇಡ್‌; ರಾಮನಗರದಲ್ಲಿ ಒಂಟಿ ಸಲಗ ನೈಟ್‌ ವಾಕ್‌, ಸೋಲಾರ್‌ ಬೇಲಿಗೂ ಡೋಂಟ್‌ ಕೇರ್‌!

ಈ ಕೃತ್ಯವನ್ನು ಯಾರು ಮಾಡಿದ್ದು ಎನ್ನುವುದು ತಿಳಿದುಬಂದಿಲ್ಲ. ಇವರ ಗುರಿ ಯಾರು? ಯಾಕಾಗಿ ಹೀಗೆ ಮಾಡಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಆದರೆ, ಮಾಟಮಂತ್ರ ಮಾಡಿರುವುದು ಕಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಹೀಗಾಗಿ ಈ ಕೃತ್ಯ ಎಸಗಿರುವವರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಘಟಪ್ರಭಾ ಪೊಲೀಸರು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಯಾಕಾಗಿ ಈ ಕೆಲಸ?

ಗ್ರಾಮೀಣ ಭಾಗದಲ್ಲಿ ಹಲವೆಡೆ ವಾಮಾಚಾರ ಮಾಡುವುದು ಆಚರಣೆಯಲ್ಲಿದೆ. ಮನೆ ಅಥವಾ ತಮ್ಮ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಹೀಗೆ ಮಾಡುವುದು ರೂಢಿಯಲ್ಲಿದೆ. ಇನ್ನು ಕೆಲವು ಕಿಡಿಗೇಡಿಗಳು ಯಾರನ್ನೋ ಗುರಿಯಾಗಿಟ್ಟುಕೊಂಡು ವಾಮಾಚಾರ ಮಾಡುವುದಕ್ಕಾಗಿ ಈ ರೀತಿ ಮಾಡುವುದೂ ಇದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್ ಮಾಡಿ

Exit mobile version