ಬೆಳಗಾವಿ: ಇಲ್ಲಿನ ಗೋಕಾಕ್ ತಾಲೂಕಿನ ಕೊಳವಿ ಬಳಿ ಬೆಳಗಾವಿಯಿಂದ ಗೋಕಾಕ್ ನಗರಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ವೊಂದು (Bus Accident) ಅಪಘಾತಕ್ಕಿಡಾಗಿದೆ. ಬಸ್ಸಿನ ಬ್ಲೇಡ್ (Leaf spring) ಕಟ್ ಆಗಿ ರಸ್ತೆ ಬದಿ ನುಗ್ಗಿದೆ.
ರಸ್ತೆ ಪಕ್ಕದ ದಿಬ್ಬಕ್ಕೆ ರಭಸವಾಗಿ ಗುದ್ದಿದ ಪರಿಣಾಮ ಚಾಲಕ, ನಿರ್ವಾಹಕ ಸೇರಿ ಎಂಟು ಜನರಿಗೆ ಗಾಯವಾಗಿದೆ. ಬಸ್ನಲ್ಲಿ ಒಟ್ಟು 17 ಜನ ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಗೊಂಡ 8 ಜನರನ್ನು ಗೋಕಾಕ ತಾಲೂಕಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗೋಕಾಕ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.
ಇದನ್ನೂ ಓದಿ | Accident | ಕೊಲ್ಹಾರ ತಾಲೂಕಿನಲ್ಲಿ ಕಾರು-ಸಾರಿಗೆ ಬಸ್ ನಡುವೆ ಅಪಘಾತ; ಇಬ್ಬರ ಸಾವು