ಬೆಳಗಾವಿ: ಓದಬೇಕೆನ್ನುವ ಛಲ ಇದ್ದರೆ ಯಾವುದೂ ಅಡ್ಡಿ ಆಗುವುದಿಲ್ಲ. ಗರ್ಭಿಣಿ ಆಗಿದ್ದಾಗಲೇ ಪರೀಕ್ಷೆ ಎದುರಿಸಿ ಪ್ರಥಮ ರ‍್ಯಾಂಕ್ ಪಡೆದಿರುವುದಾಗಿ ಅವಳಿ ಮಕ್ಕಳ ತಾಯಿ ಉಮಾ ಕೋಳಿಯವರ ಅವರು ಘಟಿಕೋತ್ಸವದಲ್ಲಿ (Convocation) ಪದವಿ ಪಡೆದು ಸಂತಸ ವ್ಯಕ್ತಪಡಿಸಿದರು.
ಬುಧವಾರ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಎಂಇಡಿ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿರುವ ಬಾಗಲಕೋಟೆ ಜಿಲ್ಲೆಯ ಉಮಾ ಕೋಳಿಯವರ ಅವರಿಗೆ ಪದವಿ ಪ್ರದಾನ ಮಾಡಲಾಯಿತು.
ಅವಳಿ ಮಕ್ಕಳನ್ನು ನಟ ಡಾ. ರಮೇಶ್ ಅರವಿಂದ್ ಅವರಿಗೆ ತೋರಿಸಿ ಸಂಭ್ರಮಿಸಿದರು. ಉಮಾ ಸಾಧನೆಗೆ ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿ, ಮಕ್ಕಳನ್ನು ಮುದ್ದಾಡಿದರು. ಬಳಿಕ ವಿಸ್ತಾರ ನ್ಯೂಸ್ ಜತೆ ಖುಷಿ ಹಂಚಿಕೊಂಡ ಉಮಾ “”ಕುಟುಂಬಸ್ಥರು ನನ್ನ ಓದಿಗೆ ಸಾಕಷ್ಟು ಸಹಾಯ ಮಾಡಿದ್ದರು. ಬಿಇಡಿ, ಎಂಇಡಿ ಪದವಿಯನ್ನು ಬಾಗಲಕೋಟೆಯಲ್ಲಿ ಪೂರೈಸಿದ್ದೇನೆ. ರಾಣಿ ಚೆನ್ನಮ್ಮ ವಿವಿಯೇ ನನ್ನ ಈ ಸಾಧನೆಗೆ ದೊಡ್ಡ ಶಕ್ತಿʼʼ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ | Convocation | ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈಜೋಡಿಸಿ: ರಾಣಿ ಚೆನ್ನಮ್ಮ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲರ ಕರೆ