ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ತನ್ನ 10ನೇ ಘಟಿಕೋತ್ಸವದಲ್ಲಿ (Convocation) ಖ್ಯಾತ ನಟ ರಮೇಶ್ ಅರವಿಂದ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆ ಪರಿಗಣಿಸಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ರಮೇಶ್ ಅರವಿಂದ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಈ ಸಂಭ್ರಮದ ಕ್ಷಣದಲ್ಲಿ ತಂದೆಯಿಲ್ಲದಿರುವುದನ್ನು ನೆನೆದು ನಟ ರಮೇಶ್ ಅರವಿಂದ್ ಭಾವುಕರಾದರು.
ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ರಮೇಶ್ ಅರವಿಂದ್, ನನ್ನ ಈ ಸಂಭ್ರಮದ ಕ್ಷಣದಲ್ಲಿ ನಮ್ಮ ತಂದೆ ಇರಬೇಕಿತ್ತು. ನನಗೆ ಗೌರವ ಡಾಕ್ಟರೇಟ್ ಸಿಕ್ಕ ವಿಷಯವನ್ನು ಫ್ಯಾಮಿಲಿ ವಾಟ್ಸಪ್ ಗ್ರೂಪ್‌ಗೆ ಹಾಕಿದಾಗ, ಎಲ್ಲರೂ ʻಅಭಿನಂದನೆಗಳು ತಂದೆ ಇರಬೇಕಿತ್ತುʼ ಎಂದು ಸಂದೇಶ ಕಳುಹಿಸಿದರು ಎಂದರು.
ಮಕ್ಕಳ ಸಾಧನೆಯನ್ನು ಹೆತ್ತವರು ಕಣ್ತುಂಬಿಕೊಂಡಾಗಲೇ ಆ ಖುಷಿ ಮತ್ತಷ್ಟು ಇಮ್ಮಡಿಗೊಳ್ಳುವುದೆಂದು ಹೇಳುತ್ತಾ ರಮೇಶ್ ಅರವಿಂದ್ ಭಾವುಕರಾದರು. 30 ವರ್ಷಗಳ ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಚಿತ್ರಮಂದಿರದಲ್ಲಿ ಟಿಕೆಟ್ ತೆಗೆದುಕೊಂಡು ಚಿತ್ರ ನೋಡಿದ ಪ್ರತಿ ಪ್ರೇಕ್ಷಕನಿಗೆ ನಾನು ಋಣಿ ಆಗಿರುವೆ. ಕರುನಾಡಿನ ಜನರು ನನ್ನ, ನನ್ನ ಚಿತ್ರ ನೋಡಿ ಪ್ರೋತ್ಸಾಹಿಸಿದರು. ನನ್ನ ಜತೆಗೆ ನಟಿಸಿರುವ ಹಲವು ನಾಯಕ-ನಟಿಯರನ್ನು ನಾನು ಸ್ಮರಿಸುವೆ. ಎಲ್ಲರ ಸಹಕಾರವೇ ನನ್ನ ಈ ಸಾಧನೆಗೆ ಕಾರಣ ಎಂದರು.
ಇದನ್ನೂ ಓದಿ | Shivaji Surathkal-2 | ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್-2 ಟೀಸರ್ ರಿಲೀಸ್ ಡೇಟ್ ರಿವೀಲ್!