Site icon Vistara News

Crime news: ಉದ್ಯಮಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್:‌ ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿಯ ಹತ್ಯೆಗೈದ ವೈದ್ಯ

Crime news

ಬೆಳಗಾವಿ: ಜಿಲ್ಲೆಯ ಗೋಕಾಕದಲ್ಲಿ ಉದ್ಯಮಿಯೊಬ್ಬರು ನಾಪತ್ತೆಯಾದ ಪ್ರಕರಣ ಈಗ ಮರ್ಡರ್ ಮಿಸ್ಟರಿಯಾಗಿ ತಿರುವು ಪಡೆದುಕೊಂಡಿದೆ. ಉದ್ಯಮಿಯ ಬರ್ಬರ ಹತ್ಯೆಯಾಗಿದೆ ಎಂದು ತಿಳಿದು ಬಂದಿದ್ದು, ಶವಕ್ಕಾಗಿ ಶೋಧ ನಡೆಯುತ್ತಿದೆ.

ಚಾಕುವಿನಿಂದ ಇರಿದು ಉದ್ಯಮಿ ರಾಜು ಝಂವರ ಹತ್ಯೆಗೈದು ಕಾಲುವೆಗೆ ಎಸೆದ ಮಾಹಿತಿ ದೊರೆತಿದ್ದು, ಕೊಳವಿ ಬಳಿ ಘಟಪ್ರಭಾ ನದಿ ಬಲದಂಡೆ ಕಾಲುವೆಯಲ್ಲಿ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತಿದೆ.

ಫೆ.10ರಂದು ಉದ್ಯಮಿ ರಾಜು ಝಂವರ ಗೋಕಾಕ್‌ನಿಂದ ನಾಪತ್ತೆಯಾಗಿದ್ದರು. ಗೋಕಾಕ್ ನಗರದ ಸಿಟಿ ಆಸ್ಪತ್ರೆ ಬಳಿ ಅವರ ದ್ವಿಚಕ್ರವಾಹನ ಪತ್ತೆಯಾಗಿತ್ತು. ಫೆ.11ರಂದು ಗೋಕಾಕ ನಗರ ಠಾಣೆಯಲ್ಲಿ ಉದ್ಯಮಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ರಾಜು ಝಂವರ್‌ಗೆ ಕೊನೆ ಬಾರಿ ಕರೆ ಮಾಡಿದ್ದ ವೈದ್ಯ ಡಾ.ಸಚಿನ್ ಶಿರಗಾವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಸಚಿನ್‌ ಸತ್ಯ ಬಾಯಿಬಿಟ್ಟಿದ್ದಾನೆ. ಮೂವರು ಯುವಕರ ಜೊತೆ ಸೇರಿ ರಾಜು ಝಂವರ್ ಹತ್ಯೆಗೈದು ಘಟಪ್ರಭಾ ಎಡದಂಡೆ ಕಾಲುವೆಗೆ ಎಸೆಯಲಾಗಿದೆ ಎಂದಿದ್ದಾನೆ.

ಎಫ್‌ಎಮ್‌ಸಿಜಿ ಹೋಲ್‌ಸೇಲ್ ಬ್ಯುಸಿನೆಸ್ ಜೊತೆ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಉದ್ಯಮಿ ರಾಜು ಝಂವರ್, ಜಾಗ ಖರೀದಿಗೆ ಡಾ.ಸಚಿನ್ ಶಿರಗಾವಿಗೆ ಹಣ ಸಾಲ ನೀಡಿದ್ದರು. ಕೊಟ್ಟ ಹಣ ವಾಪಸ್ ಕೇಳಿದ್ದರು. ಫೆ.10ರ ರಾತ್ರಿ ಹಣ ನೀಡುತ್ತೇನೆ ಬಾ ಎಂದು ಆಸ್ಪತ್ರೆಗೆ ಕರೆಸಿಕೊಂಡಿದ್ದ ಡಾ.ಸಚಿನ್, ಆಮ್ಲೆಟ್ ತಿಂದು ಬರೋಣ ಎಂದು ಯೋಗಿಕೊಳ್ಳ ಮಾರ್ಗದ ಬಳಿ ಕರೆದುಕೊಂಡು ಹೋಗಿದ್ದ. ಮಾರ್ಕಂಡೇಯ ನದಿ ದಡದಲ್ಲಿ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿ ಕಾಲುವೆಗೆ ಹೆಣ ಎಸೆದಿದ್ದ.

ಇದನ್ನೂ ಓದಿ: Businessman kidnapped : ಹಾಸನದ ಉದ್ಯಮಿ ಯುವಕ 4 ದಿನದಿಂದ ನಾಪತ್ತೆ, ಹಣಕಾಸು ವಿವಾದದಲ್ಲಿ ಕಿಡ್ನಾಪ್?

Exit mobile version