Site icon Vistara News

ಎಂಟೊಂಬತ್ತು ತಿಂಗಳಲ್ಲಿ ಬಿಜೆಪಿ ಬಾವುಟ ಇಳಿಯುತ್ತೆ, ಕಾಂಗ್ರೆಸ್ ಬಾವುಟ ಏರುತ್ತೆ: ಡಿ.ಕೆ.ಶಿವಕುಮಾರ್‌

ಡಿ.ಕೆ.ಶಿವಕುಮಾರ್‌

ಬೆಳಗಾವಿ: ಇನ್ನು 8 ರಿಂದ 9 ತಿಂಗಳು ಕಾಯಿರಿ, ಬಿಜೆಪಿ ಬಾವುಟ ಇಳಿಯಲಿದೆ, ಕಾಂಗ್ರೆಸ್ ಬಾವುಟ ಏರಲಿದೆ. ಅದು ನಿಮ್ಮ ಬಾವುಟ, ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಬಾವುಟ. ಆಗಸ್ಟ್ 15ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿರುವ ʼಸ್ವಾತಂತ್ರ್ಯ ನಡಿಗೆʼ ಕಾರ್ಯಕ್ರಮದಲ್ಲಿ ಎಲ್ಲರೂ ಹೆಜ್ಜೆ ಹಾಕಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕರೆ ನೀಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬನ್ನಿ ಮೊದಲು ದೇಶ ಉಳಿಸೋಣ, ರಾಷ್ಟ್ರಕ್ಕೆ ಗೌರವ ಸಲ್ಲಿಸೋಣ. ಆಗಸ್ಟ್ 15ರಂದು ನಿಮ್ಮನ್ನು ಬೆಂಗಳೂರಿನಲ್ಲಿ ಭೇಟಿಯಾಗಲು ಬಯಸುವೆ ಎಂದು ಜಿಲ್ಲೆಯ ಜನತೆಗೆ ಕರೆ ನೀಡಿದ ಅವರು, ಮೇಕೆದಾಟು ಪಾದಯಾತ್ರೆಯಲ್ಲಿ ವಾಕ್ ಫಾರ್ ವಾಟರ್‌ಗೆ ಸಾವಿರಾರು ಜನ ಭಾಗವಹಿಸಿ ಬೆಂಬಲ ನೀಡಿದ್ದರು. ಪಕ್ಷದ ಮುಖಂಡರಾದ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿ ಜಿಲ್ಲೆಯ ಶಾಸಕರೊಂದಿಗೆ ಮಹದಾಯಿ, ಕೃಷ್ಣೆಗಾಗಿ ದೊಡ್ಡ ಹೋರಾಟ ಹಮ್ಮಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗಿದೆ. ನಿಮ್ಮೆಲ್ಲರ ವಿಶ್ವಾಸ, ಬೆಂಬಲ ನಮಗೆ ಅವಶ್ಯವಿದೆ ಎಂದರು.

ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್‌ ಸಲ್ಲಿಕೆ ಬಗ್ಗೆ ಪ್ರತಿಕ್ರಿಯಿಸಿ, ಸತ್ತವನು ಸತ್ತ, ಸಾಯಿಸಿದವನು ಬಚಾವ್ ಆದ. ಪ್ರಕರಣ ನಡೆದಾಗ ಸಚಿವ ಕೆ.ಎಸ್‌.ಈಶ್ವರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದವರು ಈಗ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ. ಮೃತರ ಕುಟುಂಬದವರನ್ನು ಕರೆದು ಅವರ ಸಮಸ್ಯೆ ಆಲಿಸಲಿಲ್ಲ. ನಮ್ಮ ಶಾಸಕಾಂಗ ಪಕ್ಷದ ನಾಯಕರು ನ್ಯಾಯಾಂಗ ತನಿಖೆ ಆಗಬೇಕು ಎಂದಿದ್ದಾರೆ, ನಾನು ಅದಕ್ಕೆ ಸಹಮತ ವ್ಯಕ್ತಪಡಿಸಿದ್ದೇನೆ. ತನಿಖೆಗೂ ಮುನ್ನವೇ ಸಿಎಂ, ಗೃಹಸಚಿವರು ಕ್ಲೀನ್‌ಚಿಟ್‌ ಕೊಟ್ಟರು. ಇದು ನಮ್ಮ ಹಣೆಬರಹ ಎಂದರು.

ಇದನ್ನೂ ಓದಿ | ನಾನೂ CM ಆಗುವ ಅವಕಾಶವಿದೆ: ಸಿದ್ದರಾಮಯ್ಯ ತವರಲ್ಲೆ ಡಿ.ಕೆ. ಶಿವಕುಮಾರ್‌​​​​​​ ಹೇಳಿಕೆ

Exit mobile version