ಬೆಳಗಾವಿ: ಬೀದಿ ನಾಯಿಗಳ ಹಾವಳಿಗೆ (Dog Bite) ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಬೆಳಗಾವಿ (Belgavi News) ನ್ಯೂ ಗಾಂಧಿನಗರದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿ ಬೀದಿ ನಾಯಿಗಳು ಅಟ್ಯಾಕ್ ಮಾಡಿವೆ.
ಘಟನೆಯಲ್ಲಿ ಒಂದು ಮಗುವಿಗೆ ಗಂಭೀರ ಗಾಯವಾಗಿದ್ದು, ಗಂಭೀರ ಗಾಯಗೊಂಡ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾವುದೇ ಕ್ರಮಕೈಗೊಳ್ಳದ ಮಹಾನಗರ ಪಾಲಿಕೆ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿ ನ್ಯೂ ಗಾಂಧಿನಗರ ಹಾಗೂ ಉಜ್ವಲ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಒಂದೂವರೆ ತಿಂಗಳ ಹಿಂದೆ 10ಕ್ಕಿಂತ ಹೆಚ್ಚು ಜನರ ಮೇಲೆ ನಾಯಿಗಳು ಕಚ್ಚಿದ್ದವು. ಎಲ್ಲೆಂದರಲ್ಲಿ ಗುಂಪು ಗುಂಪಾಗಿ ಓಡಾಡುತ್ತಿರುವ ಬೀದಿ ನಾಯಿಗಳು ಮಕ್ಕಳನ್ನು ಕಂಡರೆ ದಾಳಿ ಮಾಡಿ ಕಚ್ಚುತ್ತಿವೆ.
ಬೀದಿ ನಾಯಿಗಳನ್ನು ಹಿಡಿಯುವಂತೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಬೀದಿ ನಾಯಿಗಳ ಕಾಟಕ್ಕೆ ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇದ್ದರೆ ಬೀದಿ ನಾಯಿಗಳನ್ನು ನಾವೇ ಹಿಡಿದು ಪಾಲಿಕೆ ಆವರಣದಲ್ಲಿ ಬಿಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: Dogs Attack: ನಾಯಿಗಳು ದಾಳಿ ಮಾಡಲು ಬಂದರೆ ಏನು ಮಾಡಬೇಕು? ಹೇಗೆ ರಕ್ಷಿಸಿಕೊಳ್ಳಬೇಕು?
ಮಗುವಿಗೆ ಕಚ್ಚಿದ ನಾಯಿ; ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ದಂಪತಿಗೆ ಥಳಿತ, ಇಲ್ಲಿದೆ ವಿಡಿಯೊ
ನವ ದೆಹಲಿ: ನೋಯ್ಡಾದ ಸೆಕ್ಟರ್ -70 ರ (Noida Society) ವಸತಿ ಸೊಸೈಟಿಯಲ್ಲಿ ಬಾಲಕನೊಬ್ಬನಿಗೆ ಬೀದಿ ನಾಯಿಯೊಂದು ಕಚ್ಚಿದ ಪರಿಣಾಮ (Dog Bite) ಕೆರಳಿ ಕೆಂಡವಾದ ಅಪಾರ್ಟ್ಮೆಂಟ್ ನಿವಾಸಿಗಳು, ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಈ ಘಟನೆಯ ವಿಡಿಯೊ ವೈರಲ್ ಆಗಿದ್ದು ಪರ- ವಿರೋಧ ಚರ್ಚೆ ಜೋರಾಗಿ ನಡೆದಿದೆ. ಅದಕ್ಕಿಂತಲೂ ಹೆಚ್ಚಾಗಿ ಅಪಾರ್ಟ್ಮೆಂಟ್ ಒಳಗೆ ದೊಡ್ಡ ಸಂಖ್ಯೆಯಲ್ಲಿ ಜನರ ಏಕಾಏಕಿ ಜಮಾಯಿಸಿದ್ದು ಕಂಡು ಸಾಕಷ್ಟು ಜನರು ಇಂಥದ್ದು ನಡೆಯಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮಗಳ ವರದಿಗಳ ಪ್ರಕಾರ, ನಾಯಿಯ ಕಡಿತಕ್ಕೆ ಒಳಗಾಗ ಮಗು ಗಂಭೀರವಾಗಿ ಗಾಯಗೊಂಡಿದೆ. ಘಟನೆಯ ನಂತರ ನಿವಾಸಿಗಳೆಲ್ಲರೂ ಒಟ್ಟಿಗೆ ಜಮಾಯಿಸಿ ಆ ಸೊಸೈಟಿಯಲ್ಲಿ ವಾಸಿಸುವ ನಾಯಿಗಳಿಗೆ ಆಹಾರ ನೀಡುವವರ ವಿರುದ್ಧ ಪ್ರತಿಭಟಿಸಿದರು. ನಾಯಿಗೆ ಆಹಾರ ಹಾಕುವ ದಂಪತಿ ಸೇರಿ ಹಲವರ ಮೇಲೆ ದೂರು ದಾಖಲಿಸಿದ್ದಾರೆ.
ಉದ್ರಿಕ್ತ ಗುಂಪು ಶುಭಂ ಮತ್ತು ಸಂಕಲಿತಾ ಎಂಬ ಹೆಸರಿನ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅವರು ಕೂಡ ಪೊಲೀಸ್ ದೂರು ನೀಡಿದ್ದಾರೆ. ಇದೆ ವೇಳೆ ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರನ್ನು ತಳ್ಳಿದ್ದಾರೆ ಎನ್ನಲಾಗಿದೆ. ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ಗಳು ಈ ಬಗ್ಗೆ ದೂರು ನೀಡಿದ್ದಾರೆ. ಗಲಾಟೆ ವೇಳೆ ಕೆಲವರು ಸಿಸಿ ಟಿವಿ ಕ್ಯಾಮೆರಾಗಳನ್ನು ಆಫ್ ಮಾಡಲು ಸಹ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ದಂಪತಿಯ ಆರೋಪ
ಗಲಾಟೆಯನ್ನು ರೆಕಾರ್ಡ್ ಮಾಡಲು ಮುಂದಾದಾಗ ಅವರಲ್ಲಿ ಒಬ್ಬರು ನನ್ನ ಹೆಂಡತಿಯ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಅಲ್ಲದೆ ಅವಳಿಗೆ ಗಾಯ ಮಾಡಿದ್ದಾರೆ ಎಂದು ಶುಭಮ್ ಹೇಳಿದ್ದಾರೆ. ನನ್ನನ್ನು ರಕ್ಷಿಸಲು ಬಂದ ತನ್ನ ಕೆಲವು ಸ್ನೇಹಿತರನ್ನೂ ಎಳೆದಾಡಿದ್ದಾರೆ. ಅದರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಪೀಪಲ್ ಫಾರ್ ಅನಿಮಲ್ಸ್ (ಪಿಎಫ್ಎ) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ, ಗುಂಪಿನ ವೀಡಿಯೊವನ್ನು ಹಂಚಿಕೊಂಡಿದೆ. “ನೋಯ್ಡಾದ ಸೆಕ್ಟರ್ 70 ರ ಪಾನ್ ಒಯಾಸಿಸ್ನಲ್ಲಿ ಹಿಂಸಾತ್ಮಕ ಗುಂಪು ನಾಯಿಗಳಿಗೆ ಆಹಾರ ಮತ್ತು ಆರೈಕೆ ಮಾಡುವ ಯುವ ದಂಪತಿ ಮೇಲೆ ದಾಳಿ ಮಾಡಿ ಕಾನೂನು ಉಲ್ಲಂಘಿಸಿದೆ. ಪೊಲೀಸರನ್ನು ಸಹ ತಳ್ಳಲಾಗಿದೆ. ಗಲಭೆಕೋರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದೆ.
ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಿ ಲಸಿಕೆ ಹಾಕಿದ ಆರೈಕೆದಾರಿಗೆ ಹಲ್ಲೆ ಮಾಡಲಾಗಿದೆ. ಅಶ್ಲೀಲವಾಗಿ ನಿಂದಿಸಲಾಗಿದೆ ಮತ್ತು ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಪ್ರಾಣಿ ಕಲ್ಯಾಣ ಸಂಸ್ಥೆ ಹೇಳಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ