ಬೆಳಗಾವಿ: ಮೂಡಲಗಿ ಪಟ್ಟಣದ ಹಳ್ಳವೊಂದರಲ್ಲಿ ಭ್ರೂಣಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಭ್ರೂಣಗಳ ಮರಣೋತ್ತರ ಪರೀಕ್ಷೆ ವರದಿ ಬಹಿರಂಗವಾಗಿದೆ.
ಬೆಳಗಾವಿಯ ಬೀಮ್ಸ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆದಿತ್ತು. ಮೂಡಲಗಿಯ ಹಳ್ಳದಲ್ಲಿ 6 ಗಂಡು ಭ್ರೂಣಗಳು ಮತ್ತು ಒಂದು ಗರ್ಭಕೋಶ ಪತ್ತೆಯಾಗಿತ್ತು. ಇವುಗಳು ಸ್ಥೂಲ ಜನ್ಮಜಾತ ಬೆಳವಣಿಗೆಯ ವೈಪರೀತ್ಯ ಹೊಂದಿದ ಭ್ರೂಣಗಳಾಗಿತ್ತು ಎಂದು ವೈದ್ಯಕೀಯ ತಜ್ಞರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭ್ರೂಣ ಶೇಖರಿಸಿಡುವ ಪ್ರಯತ್ನ
ಫಾರ್ಮಾಲಿನ್ ಬಳಸಿ ಭ್ರೂಣಗಳನ್ನು ಶೇಖರಿಸಿಡುವ ಪ್ರಯತ್ನ ಮೇಲ್ನೋಟಕ್ಕೆ ಕಂಡುಬಂದಿದೆ. ಆದಾಗ್ಯೂ ಭ್ರೂಣಗಳನ್ನು ಹೇಗೆ ಸಂಗ್ರಹಿಸಲಾಯಿತು ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಲಾಗುವುದು. ಹೇಗೆ ಇದ್ದರೂ ಇದು ಕಾನೂನು ಬಾಹಿರ, ಸಮಗ್ರ ತನಿಖೆ ನಡೆಸಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿಕೆ ನೀಡಿದ್ದಾರೆ.