ಬೆಳಗಾವಿ: ಬೆಳಗಾವಿಯ ಬ್ಯಾಟರಿ ಅಂಗಡಿಯೊಂದರಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ (Fire accident) ಕಾಣಿಸಿಕೊಂಡಿದೆ.
ಅಕ್ಕಪಕ್ಕದ ಟೈರ್ ಅಂಗಡಿಗೂ ಬೆಂಕಿಯ ಜ್ವಾಲೆಗಳು ಹರಡಿತು. ಇದರ ಪರಿಣಾಮ ಬ್ಯಾಟರಿ ಮತ್ತು ಟೈರ್ ಅಂಗಡಿಗಳು ಸಂಪೂರ್ಣವಾಗಿ ಭಸ್ಮವಾಯಿತು.
ಅಂಗಡಿ ಪಕ್ಕದಲ್ಲಿ ಹಳೆಮರದ ತುಂಡುಗಳಿದ್ದು ಬೆಂಕಿ ಅನಾಹುತವನ್ನು ಹೆಚ್ಚಿಸಿತು. ಸ್ಥಳಕ್ಕೆ 10 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಧಾವಿಸಿದ್ದು, 80 ಕ್ಕೂ ಹೆಚ್ಚು ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು. ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಸ್ಥಳಕ್ಕೆ ಭೇಟಿ ನೀಡಿದರು. ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.
ಮಾರುತಿ ಟೈರ್ಸ್, ಗಣೇಶ್ ಟೈರ್ಸ್, ಟೈರ್ ಮಾರ್ಕೆಟಿಂಗ್, ಸ್ಟಾರ್ ಮಾರ್ಕೆಟಿಂಗ್, ಚೇತನಾ ಬ್ಯಾಟರೀಸ್ ಬೆಂಕಿಯಲ್ಲಿ ಉರಿದಿವೆ. ಬೆಳಗಾವಿಯ ಬಸ್ ಸ್ಟಾಂಡ್ ರಸ್ತೆಯಲ್ಲಿರುವ ಅಂಗಡಿಗಳಾಗಿವೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಅಂಗಡಿ ಸಾಮಾಗ್ರಿ, ಟೈರ್‌ಗಳು ಭಸ್ಮವಾಗಿವೆ.