ಬೆಳಗಾವಿ: ಬೆಳ್ಳಂಬೆಳಿಗ್ಗೆ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟ (LPG Cylinder Blast) ಸಂಭವಿಸಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಬೆಳಗಾವಿಯ ಸುಳಗಾದಲ್ಲಿ ಈ ಭೀಕರ ಸ್ಫೋಟ (Gas Cylinder Blast) ಸಂಭವಿಸಿದೆ.
ಕಲ್ಲಪ್ಪ ಪಾಟೀಲ್ (62), ಸುಮನ್ ಪಾಟೀಲ್(60) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲ್ಲಪ್ಪ ಹಾಗೂ ಸುಮನ್ ಅವರಿಗೆ ಶೇ.70ರಷ್ಟು ಸುಟ್ಟ ಗಾಯಗಳಾಗಿವೆ. ಸ್ಥಳೀಯರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ಬೆಳಗ್ಗೆ 4 ಗಂಟೆಗೆ ಸುಮನ್ ಪಾಟೀಲ್ ಅವರು ಎದ್ದು, ಅಡುಗೆ ಮನೆಗೆ ಹೋಗಲು ಲೈಟ್ ಸ್ವಿಚ್ ಆನ್ ಮಾಡಿದ್ದಾರೆ. ಈ ವೇಳೆ ಏಕಾಏಕಿ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಗ್ಯಾಸ್ ಸಿಲಿಂಡರ್ ಸಮೀಪ ಹೋಗದಿದ್ದರೂ ಸ್ಫೋಟಗೊಂಡಿದೆ. ಗ್ಯಾಸ್ ಲಿಂಕ್ ಆಗಿದ್ದರಿಂದ ಏಕಾಏಕಿ ಲೈಟ್ ಆನ್ ಮಾಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸಿಡಿದ ತೀವ್ರತೆಗೆ ಮನೆಯು ಡ್ಯಾಮೇಜ್ ಆಗಿದೆ. ಸಿಲಿಂಡರ್ ಸ್ಫೋಟಗೊಂಡ ತೀವ್ರತೆಗೆ ಮನೆಯ ವಸ್ತುಗಳೆಲ್ಲ ಚಲ್ಲಾಪಿಲ್ಲಿಯಾಗಿದೆ. ಸ್ಫೋಟದ ತೀವ್ರತೆಗೆ ಜನತೆ ಬೆಚ್ಚಿಬಿದ್ದಿದ್ದಾರೆ. ಮನೆಯ ಇಂಟೀರಿಯರ್ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಟ್ರಜರಿ,ವಸ್ತ್ರ ದವಸ ಧಾನ್ಯಗಳು ಮನೆಯ ತುಂಬ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರಿನಲ್ಲೂ ಸಿಲಿಂಡರ್ ಸ್ಫೋಟಕ್ಕೆ ಆರು ಮಂದಿಗೆ ಗಾಯ
ತುಮಕೂರಿನ ಕುಣಿಗಲ್ ಪಟ್ಟಣದ ಸಿದ್ಧಾರ್ಥ ಪ್ರೌಢಶಾಲೆ ಪಕ್ಕದ ರಸ್ತೆಯಲ್ಲಿ ರವಿಕುಮಾರ್ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟಕ್ಕೆ ಆರು ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿವೆ.
ಸಮೀನ(46), ಕುಶಾಲ್ (11) ಎಂಬುವವರು ಗಂಭೀರ ಗಾಯಗೊಂಡಿದ್ದರೆ, ಮಂಜಮ್ಮ (42), ಶಿವಣ್ಣ(45), ಶ್ರುತಿ (45), ಹೇಮಲತಾ (16) ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಸ್ಫೋಟದ ಶಬ್ಧ ಕೇಳಿ ನೋಡಲು ಮನೆಗೆ ಬಂದವರಿಗೂ ಸಹ ಗಾಯವಾಗಿದೆ. ಈ ಅವಘಡದಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ: Accident Case : ಟ್ರ್ಯಾಕ್ಟರ್ ರೋಟವೇಟರ್‌ಗೆ ಸಿಲುಕಿ ಬಾಲಕನ ದೇಹ ಛಿದ್ರ ಛಿದ್ರ
ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್, ಮೊಬೈಲ್ ಗೀಳಿಗಾಗಿ ಅಣ್ಣನೇ ಕೊಂದ
ಆನೇಕಲ್: ಬೆಂಗಳೂರು ಹೊರವಲಯ (Bangalore rural) ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ (Sarjapura murder) ನಿನ್ನೆ ನಡೆದ ಹದಿನೈದು ವರ್ಷದ ಬಾಲಕನ ಕೊಲೆ ಪ್ರಕರಣದಲ್ಲಿ (boy murder case) ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತಮ್ಮನನ್ನೇ ಕೊಲೆಗೈದ ಪಾಪಿ ಅಣ್ಣ (brother) ಅಂದರ್ ಆಗಿದ್ದಾನೆ.
ಪ್ರಾಣೇಶ್ (15) ಕೊಲೆಯಾಗಿದ್ದ ಬಾಲಕ. ಶಿವಕುಮಾರ್ (18) ಕೊಲೆ ಮಾಡಿದ ಪಾಪಿ ಸಹೋದರ. ಆನ್ಲೈನ್ ಗೇಮ್ ಆಡಲು ಮೊಬೈಲ್ ನೀಡಲಿಲ್ಲ ಅಂತ ಪಾತಕಿ, ತಮ್ಮನನ್ನು ಸಾಯಿಸಿದ್ದಾನೆ. ಕೊಲೆ ಆರೋಪಿಯನ್ನು ಸರ್ಜಾಪುರ ಪೊಲೀಸರು ಬಂಧಿಸಿದ್ದಾರೆ.
ಇವರಿಬ್ಬರೂ ಮೂಲತಃ ಆಂಧ್ರ ಮೂಲದ ಸೂಳೆಕೆರಿ ಗ್ರಾಮದ ಚನ್ನಮ್ಮ ಮತ್ತು ಬಸವರಾಜ್ ದಂಪತಿಯ ಮಕ್ಕಳು. ಈ ಕುಟುಂಬ ಕೆಲಸ ಅರಸಿಕೊಂಡು ಕಳೆದ ಮೂರು ತಿಂಗಳ ಹಿಂದೆ ನೆರಿಗಾ ಗ್ರಾಮಕ್ಕೆ ಬಂದಿತ್ತು. ಪತಿ-ಪತ್ನಿ ಹಾಗೂ ಹಿರಿಯ ಮಗ ಶಿವಕುಮಾರ್ ಗಾರೆ ಕೆಲಸ ಮಾಡಿಕೊಂಡಿದ್ದರು. ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ದ್ವಿತೀಯ ಪುತ್ರ ಪ್ರಾಣೇಶ್ ಸೂಳಕೆರೆ ಗ್ರಾಮದಲ್ಲಿ ಅಜ್ಜಿಯ ಜೊತೆಗೆ ವಾಸವಿದ್ದ.
ಬೇಸಿಗೆ ರಜೆಗೆ ನೆರಿಗಾ ಗ್ರಾಮದಲ್ಲಿನ ತಂದೆ ತಾಯಿ ಬಳಿಗೆ ಪ್ರಾಣೇಶ್ ಬಂದಿದ್ದ. ಮನೆಯಲ್ಲಿದ್ದ ಮೊಬೈಲಿನಲ್ಲಿ ಶಿವಕುಮಾರ್ ಯಾವಾಗ್ಲೂ ಆನ್ಲೈನ್ ಗೇಮ್ ಆಡುತ್ತಿದ್ದ. ಪ್ರಾಣೇಶ್ ಮನೆಗೆ ಬಂದವನೇ ಮೊಬೈಲ್‌ನಲ್ಲಿ ತಾನು ಗೇಮ್ ಆಡಲು ಶುರು ಮಾಡಿದ್ದ. ಪ್ರಾಣೇಶ್ ಬಳಿ ಮೊಬೈಲ್ ನೀಡುವಂತೆ ಶಿವಕುಮಾರ್ ಕೇಳುತ್ತಿದ್ದ. ಆದರೆ ಪ್ರಾಣೇಶ್ ಮೊಬೈಲ್ ನೀಡುತ್ತಿರಲಿಲ್ಲ.
ನನಗೆ ಆನ್ಲೈನ್ ಗೇಮ್ ಆಡಲು ಮೊಬೈಲ್ ಸಿಗುತ್ತಿಲ್ಲ ಎಂದು ಶಿವಕುಮಾರ ಕುಪಿತಗೊಂಡಿದ್ದ. ಇಬ್ಬರೂ ಮೊಬೈಲ್‌ಗಾಗಿ ಆಗಾಗಾ ಗಲಾಟೆ ಮಾಡಿಕೊಳ್ಳುತ್ತಿದ್ದರು. ಕಳೆದ ಹದಿನೈದನೇ ತಾರೀಕು ಗಾರೆ ಕೆಲಸಕ್ಕೆ ಹೋದ ಶಿವಕುಮಾರ ತಮ್ಮನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದ. ಕೆಲಸ ಮಾಡುತ್ತಿದ್ದ ಜಾಗದಿಂದ ಸಣ್ಣ ಸುತ್ತಿಗೆಯನ್ನು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ.
ಬಯಲು ಶೌಚಕ್ಕೆ ಹೋಗಿದ್ದ ಪ್ರಾಣೇಶನನ್ನು ಹಿಂಬಾಲಿಸಿಕೊಂಡು ಹೋಗಿದ್ದ ಶಿವಕುಮಾರ್, ಅಲ್ಲಿ ಸುತ್ತಿಗೆಯಿಂದ ತಲೆ ಹಾಗೂ ಎದೆ ಭಾಗಕ್ಕೆ ಹಲ್ಲೆ ನಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಪ್ರಾಣೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ತಂದೆ ತಾಯಿ ಸಂಜೆ ಮನೆಗೆ ಬಂದು ಎಲ್ಲೆಡೆ ಹುಡುಕಾಡಿದ್ದರು. ಈ ವೇಳೆ ತಮ್ಮನ ಶವ ಬಿದ್ದಿದೆ ಎಂದು ಓಡೋಡಿ ಬಂದು ಪೋಷಕರಿಗೆ ತಿಳಿಸಿದ್ದ ಶಿವಕುಮಾರ.
ಸರ್ಜಾಪುರ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆಗೆ ಇಳಿದಿದ್ದರು. ತಮ್ಮನ ಶವವನ್ನು ನಾನೇ ಮೊದಲು ನೋಡಿದೆ ಎಂದು ಹೇಳುತ್ತಿದ್ದ ಶಿವಕುಮಾರನ ಮೇಲೆ ಪೋಲೀಸರಿಗೆ ಅನುಮಾನ ಮೂಡಿತ್ತು. ವಿಚಾರಣೆ ನಡೆಸಿದಾಗ ಆರೋಪಿ ಬಾಯಿ ಬಿಟ್ಟಿದ್ದಾನೆ. ಆರೋಪಿ ಶಿವಕುಮಾರ್‌ನನ್ನು ಬಂಧಿಸಿದ ಸರ್ಜಾಪುರ ಪೋಲೀಸರು ಜೈಲಿಗೆ ಕಳುಹಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ