Site icon Vistara News

ಪೊಲೀಸರಿಗೆ ತಲೆನೋವಾದ ನವ್ಯಶ್ರೀ ಪ್ರಕರಣ ; ಸಮರ್ಪಕ ದಾಖಲೆ ಕೇಳಿ ಮತ್ತೊಂದು ನೋಟಿಸ್?

ನವ್ಯಶ್ರೀ

ಬೆಳಗಾವಿ: ಬೆಳಗಾವಿ ಪೊಲೀಸರಿಗೆ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಪ್ರಕರಣ ತೀವ್ರ ತಲೆ ನೋವಾಗಿ ಪರಿಣಮಿಸಿದೆ. ಈಕೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಠಾಕಳೆ ವಿರುದ್ಧ ನೀಡಿದ್ದ ಮಾಧ್ಯಮ ಹೇಳಿಕೆ ಹಾಗೂ ಪೊಲೀಸರಿಗೆ ನೀಡಿದ ದೂರಿಗೂ ಕೆಲ ವ್ಯತ್ಯಾಸ ಕಂಡುಬಂದಿದ್ದು, ಸಮರ್ಪಕ ದಾಖಲೆ ಕೇಳಿ ಮತ್ತೊಂದು ನೋಟಿಸ್ ನೀಡುವ ಸಾಧ್ಯತೆ ಇದೆ.

ನವ್ಯಶ್ರೀ ರಾವ್ 12 ಪುಟಗಳ ಕೈ ಬರಹದ ದೂರು ಪೊಲೀಸರಿಗೆ ನೀಡಿದ್ದಾರೆ. ಇದಕ್ಕೂ ಮುನ್ನ ರಾಜಕುಮಾರ್‌ ಠಾಕಳೆ ಈಕೆಯ ವಿರುದ್ಧ ವಂಚನೆ, ಜೀವ ಬೆದರಿಕೆ ಹಾಗೂ ಸುಳ್ಳು ಅತ್ಯಾಚಾರ ಕೇಸ್‌ ದಾಖಲಿಸುವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಬಳಿಕ ನವ್ಯಶ್ರೀ ಕೂಡ ರಾಜಕುಮಾರ್‌ ಠಾಕಳೆ ವಿರುದ್ಧ ಅತ್ಯಾಚಾರ, ಅಪಹರಣ, ಗರ್ಭಪಾತ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿದೂರು ನೀಡಿದ್ದರು. ದೂರಿನ ಸಂಬಂಧ 20ಕ್ಕೂ ಹೆಚ್ಚು ಅಂಶಗಳ ಸಂಬಂಧ ದಾಖಲೆ ನೀಡುವಂತೆ ನವ್ಯಶ್ರೀಗೆ ಪೊಲೀಸರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ | Black Mail Case | ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ವಿಚಾರಣೆಗೆ ಹಾಜರು

ಆಸ್ಪತ್ರೆ ಊಟ ಬೇಡ, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕು!
ವೈದ್ಯಕೀಯ ತಪಾಸಣೆಗೆ ಬೆಳಗಾವಿ ಬಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದ ನವ್ಯಶ್ರೀ ಆಸ್ಪತ್ರೆ ವೈದ್ಯರೊಂದಿಗೆ ಕಿರಿಕ್‌ ಮಾಡಿದ್ದಾಳೆ ಎನ್ನಲಾಗಿದೆ. ತನಗೆ ಆಸ್ಪತ್ರೆ ಊಟ ಬೇಡ, ಬಿಸಿನೀರು, ಹೋಟೆಲ್ ಊಟ, ಚಿಕನ್ ಬಿರಿಯಾನಿ ಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಜತೆಗೆ ನವ್ಯಶ್ರೀ ವಾಗ್ವಾದ ನಡೆಸಿದ್ದಾಳೆ. ನವ್ಯಶ್ರೀ ಕಿರಿಕ್ ಮಾಡುತ್ತಿದ್ದಂತೆ ಪೊಲೀಸರು ಬಿಸಿನೀರು, ಹೊರಗಡೆಯಿಂದ ಪಲಾವ್ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ | ಸುಳ್ಳು ಅತ್ಯಾಚಾರ ಕೇಸ್, ಬೆದರಿಕೆ ಆರೋಪ; ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ವಿರುದ್ಧ FIR

Exit mobile version