ಬೆಳಗಾವಿ: ಕಾಲ ಕೆಟ್ಟುಹೋಯಿತಾ ಅಥವಾ ಮನುಷ್ಯನೇ ಕೆಟ್ಟ ದಾರಿಯಲ್ಲಿ ಹೋಗುತ್ತಿದ್ದನಾ? ಇಂತಹದೊಂದು ಪ್ರಶ್ನೆ ಸಹಜವಾಗಿ ಕಾಡುತ್ತೆ. ಕಾರಣ ನಂಬಿಕೆ ಎಂಬ ಪದವನ್ನು ಹುಸಿಗೊಳಿಸುವ ಸಂಗತಿಗಳೇ ಹೆಚ್ಚಾಗಿ ನಡೆಯಯುತ್ತಿದೆ. ಸದ್ಯ ಡಿವೋರ್ಸ್ ಕೊಡು ಇಲ್ಲದಿದ್ದರೆ ಖಾಸಗಿ ಫೋಟೊ, ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ (Husband Assault) ಘಟನೆ ನಡೆದಿದೆ.
ರಕ್ತ ಸಂಬಂಧವಿಲ್ಲದೇ ತಾಳಿ ಅನ್ನುವ ಬಂಧಕ್ಕೆ ಶರಣಾಗಿ, ಸರ್ವಸ್ವವೂ ನೀನೆ ಎಂದು ನಂಬಿ ಆತನೊಂದಿಗೆ ಸಪ್ತಪದಿ ತುಳಿದಿದ್ದಳು. ಆದರೆ ಆಕೆಯ ನಂಬಿಕೆಯನ್ನು ಹುಸಿಗೊಳಿಸಿದ ಪತಿ, ಡಿವೋರ್ಸ್ ಕೊಡು ಇಲ್ಲದಿದ್ದರೆ, ನನ್ನೊಟ್ಟಿಗೆ ಕಳೆದ ಖಾಸಗಿ ಕ್ಷಣದ ವಿಡಿಯೊವನ್ನು ಅಪ್ಲೋಡ್ ಮಾಡುತ್ತೀನಿ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದಾನೆ.
ಹೆಂಡತಿಯನ್ನು ಬ್ಲ್ಯಾಕ್ ಮೇಲ್ ಮಾಡಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಕಿರಣ್ ಪಾಟೀಲ್ ಎಂಬಾತ ಅಶ್ಲೀಲ ವಿಡಿಯೋ ಇಟ್ಟುಕೊಂಡು ಪತ್ನಿಯನ್ನು ಹೆದರಿಸುತ್ತಿದ್ದ. ಕಿರಣ್ ಪಾಟೀಲ್ ತನ್ನ ಪತ್ನಿಗೆ ಜತೆಗೆ ಚೆನ್ನಾಗಿ ಇದ್ದಾಗ ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣವನ್ನು ವಿಡಿಯೊ ಮಾಡಿಕೊಂಡಿದ್ದ. ಆದರೆ ದಿನ ಕಳೆದಂತೆ ಆಕೆಯಿಂದ ದೂರಾಗಲು ಮುಂದಾಗಿದ್ದ ಕಿರಣ್, ಪತ್ನಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದ.
ಇದನ್ನೂ ಓದಿ: Blast Case : ಪೊಟ್ಟಣದಲ್ಲಿ ಸಿಡಿಮದ್ದು; ಆಹಾರವೆಂದು ತಿನ್ನಲು ಹೋದ ನಾಯಿ ಸಾವು
ಆದರೆ ಡಿವೋರ್ಸ್ ಕೊಡಲು ಒಪ್ಪದ ಪತ್ನಿಗೆ ಟಾರ್ಚರ್ ಕೊಡಲು ಶುರು ಮಾಡಿದ್ದ. ನನ್ನೊಂದಿಗೆ ಕಳೆದ ಖಾಸಗಿ ಕ್ಷಣದ ವಿಡಿಯೊ ಇದೆ. ಅದನ್ನೂ ಎಲ್ಲ ಕಡೆ ಲೀಕ್ ಮಾಡುತ್ತೀನಿ. ಹೀಗೆ ಮಾಡಬಾರದು ಅಂದರೆ ಡಿವೋರ್ಸ್ ಕೊಡು ಇಲ್ಲದಿದ್ದರೆ ಎಲ್ಲ ವಿಡಿಯೊ ವೈರಲ್ ಮಾಡುತ್ತೀನಿ ಎಂದು ಬೆದರಿಕೆ ಹಾಕುತ್ತಿದ್ದ.
ಕಿರಣ್‌ಗೆ ಸಾಕಷ್ಟು ಬುದ್ಧಿವಾದ ಹೇಳಿದರೂ ಕೇಳದೇ ಇದ್ದಾಗ ಸಂತ್ರಸ್ತೆ ಪತಿ ವಿರುದ್ಧ ಬೆಳಗಾವಿಯ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಳು. ಸಂತ್ರಸ್ತೆ ದೂರನ್ನಾಧರಿಸಿ ತನಿಖೆ ನಡೆಸಿದ ಪೊಲೀಸರು ಕಿರಣ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಆತ್ಮಹತ್ಯೆ ಡ್ರಾಮಾ
ಇತ್ತ ಪೊಲೀಸರು ಕಿರಣ್‌ನನ್ನು ಬಂದಿಸಲು ಹೋದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾವನ್ನೇ ಮಾಡಿದ್ದ. ಆತ್ಮಹತ್ಯೆಗೆ ಯತ್ನಿಸಿದ ಕಾರಣಕ್ಕೆ ಪೊಲೀಸರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆತ ಗುಣಮುಖನಾದ ಮೇಲೆ ನಿನ್ನೆ ಗುರುವಾರ ಕಿರಣ್‌ನನ್ನು ಬಂಧಿಸಿದ್ದಾರೆ. ಬೆಳಗಾವಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.