Site icon Vistara News

Dead body found : ದೇವಾಲಯದ ಕೆರೆಯಲ್ಲಿ ಶವವಾಗಿ ಪತ್ತೆಯಾದವರು ಪ್ರೇಮಿಗಳೂ ಅಲ್ಲ, ಬಂಧುಗಳೂ ಅಲ್ಲ; ಹಾಗಿದ್ದರೆ ಯಾರವರು?

Dead body identity revealed

ಬೆಳಗಾವಿ: ಇಲ್ಲಿನ ಕಪಿಲೇಶ್ವರ ದೇವಸ್ಥಾನಕ್ಕೆ (Kapileshwara temple) ಸಂಬಂಧಿಸಿದ ಹೊಂಡದಲ್ಲಿ (Temple pond) ಶವವಾಗಿ ಪತ್ತೆಯಾದವರ (Dead Body found) ಗುರುತು ಪತ್ತೆಯಾಗಿದೆ. ಆದರೆ, ಮೊದಲೆಲ್ಲ ಅಂದಾಜಿಸಿದಂತೆ ಇವರು ಪ್ರೇಮಿಗಳೂ ಅಲ್ಲ, ಬಂಧುಗಳೂ ಅಲ್ಲ, ಇನ್ನೂ ಹೆಚ್ಚು ಹೇಳಬೇಕು ಎಂದರೆ ಅವರಿಗೂ ಇವರಿಗೂ ಸಂಬಂಧವೇ ಇಲ್ಲ!

ಕಪಿಲೇಶ್ವರ ದೇವಸ್ಥಾನದ (Belagavi Kapileshwara Temple) ಹೊಂಡದಲ್ಲಿ ಶವಗಳು (dead bodies found) ಯಾರವು ಎನ್ನುವುದರ ಬಗ್ಗೆ ಅಲ್ಲಿ ದೊಡ್ಡ ಕುತೂಹಲ ಸೃಷ್ಟಿಯಾಗಿತ್ತು. ಯಾಕೆಂದರೆ, ಎರಡೂ ಶವಗಳು ಅಕ್ಕ ಪಕ್ಕವೇ ಇದ್ದವು. ಇಬ್ಬರೂ ಸೇರಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಪ್ರೇಮಿಗಳಿರಬಹುದೇ ಎನ್ನುವುದು ಮೊದಲ ಸಂಶಯವಾಗಿತ್ತು. ಆದರೆ, ಮುಖ ನೋಡೋಣವೆಂದರೆ ಇಬ್ಬರ ಮುಖಗಳೂ ನೀರಿನಲ್ಲಿ ಮುಳುಗಿರುವಂತೆ ದೇಹ ಉಲ್ಟಾ ಆಗಿ ಇತ್ತು. ಮಹಿಳೆ ಧರಿಸಿದ ಹಸಿರು ಚೂಡಿದಾರ್‌, ಪುರುಷ ಧರಿಸಿದ ಟೀಶರ್ಟ್‌, ಅವರ ದೇಹ ವೈಖರಿ ಅವರು ಸಣ್ಣ ವಯಸ್ಸಿನವರೇನೂ ಅಲ್ಲ. ಮಧ್ಯ ವಯಸ್ಸಿನವರು ಇರಬಹುದು ಎಂಬ ಸಂಶಯ ಮೂಡಿಸಿತ್ತು. ಹಾಗಿದ್ದರೆ ಬೇರೆ ಬೇರೆಯವರ ಜತೆ ಮದುವೆಯಾಗಿ ಈಗ ಸಂಸಾರ ಬಿಟ್ಟು ಜತೆಯಾಗಿ ಓಡಿ ಬಂದಿರಬಹುದೇ? ಅಥವಾ ಬದುಕಿನ ಜಂಜಾಟದಿಂದ ದೂರ ಹೋಗಲು ನಿರ್ಧರಿಸಿದ ದಂಪತಿ ಇರಬಹುದೇ ಎಂದು ಜನರು ಮಾತನಾಡಿಕೊಂಡರು. ಆತ್ಮಹತ್ಯೆಯೇ ಕೊಲೆಯೇ ಎನ್ನುವುದು ಇನ್ನೊಂದು ಪ್ರಶ್ನೆ.

Dead bodies found in Belagavi

ಬೆಳಗ್ಗೆ ವಾಕಿಂಗ್‌ಗೆ ಬಂದವರು ಕಂಡು ಬೆಚ್ಚಿಬಿದ್ದ ಬಳಿಕ ಇಡೀ ಊರಿನ ಜತೆ ದೇವಸ್ಥಾನದ ಬಳಿಗೆ ಬಂದಿತ್ತು. ಪೊಲೀಸರು ಯಾವಾಗ ಬರ್ತಾರೆ, ಯಾವಾಗ ಶವವನ್ನು ಮೇಲೆತ್ತಿ ಮುಖ ನೋಡುತ್ತೇವೋ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಕೊನೆಗೆ ಪೊಲೀಸರು, ಅಗ್ನಿಶಾಮಕ ದಳ ಎಲ್ಲವೂ ಬಂತು. ಶವವನ್ನೂ ಮೇಲೆತ್ತಲಾಯಿತು.

ಆದರೆ, ಮುಖ ನೋಡಿದರೆ ಇಬ್ಬರಿಗೂ ವಯಸ್ಸಾಗಿತ್ತು. ಮತ್ತು ಅವರು ಈ ಊರಿನವರೇ ಅಲ್ಲ ಎನ್ನುವುದು ಗೊತ್ತಾಯಿತು. ಆಗ ಅವರ ಮೂಲ ಹುಡುಕುವ ಕೆಲಸ ಪೊಲೀಸರಿಗೆ! ಕೊನೆಗೂ ಪೊಲೀಸರು ಅವರ ಮೂಲವನ್ನು ಪತ್ತೆ ಹಚ್ಚಿದ್ದಾರೆ. ಈಗ ತಿಳಿದುಬಂದಿರುವ ಸಂಗತಿ ಏನೆಂದರೆ ಅವರು ಎಳೆಹರೆಯದ ಪ್ರೇಮಿಗಳಲ್ಲ, ಗಂಡ ಹೆಂಡತಿಯಲ್ಲ, ಮಧ್ಯ ವಯಸ್ಸಿನ ಪ್ರೇಮಿಗಳೂ ಅಲ್ಲ. ನಿಜವೆಂದರೆ ಅವರಿಗೂ ಇವರಿಗೂ ಸಂಬಂಧವೇ ಇಲ್ಲ. ಅವರೇ ಬೇರೆ ಇವರೇ ಬೇರೆ!

ಹೌದು, ಈಗ ತಿಳಿದುಬಂದ ಮಾಹಿತಿ ಪ್ರಕಾರ, ಒಂದೇ ಕೆರೆಯಲ್ಲಿ ಒಂದೇ ಹೊತ್ತಲ್ಲಿ ಒಂದೇ ರೀತಿಯಲ್ಲಿ ಶವವಾಗಿ ಪತ್ತೆಯಾದ ಅವರಿಬ್ಬರ ನಡುವೆ ಸಂಬಂಧವೇ ಇಲ್ಲ. ಇವರಲ್ಲಿ ಮಹಿಳೆ ಶಹಾಪುರದವರಾದರೆ, ಪುರುಷ ಬೆಳಗಾವಿಯ ಕಾಂಗೇಗಲ್ಲಿಯವರು. ಅವರಿಬ್ಬರು ಇಲ್ಲಿಗೆ ಬಂದಿದ್ದು ಪರಸ್ಪರ ಗೊತ್ತಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದು ಕೂಡಾ ಪರಸ್ಪರರಿಗೆ ಗೊತ್ತಿಲ್ಲ.

ಇದನ್ನೂ ಓದಿ: Dead bodies found : ದೇವಸ್ಥಾನದ ಹೊಂಡದಲ್ಲಿ ಜೋಡಿ ಶವ ಪತ್ತೆ; ಆತ್ಮಹತ್ಯೆನಾ? ಕೊಲೆನಾ?

ಹಾಗಿದ್ದರೆ ಯಾರು ಈ ಇಬ್ಬರು?

ಮೃತ ಪುರುಷನ ಹೆಸರು ವಿಜಯ ಪವಾರ್‌, ವಯಸ್ಸು 58. ಇವರು ಬೆಳಗಾವಿಯ ಕಾಂಗಲೇಗಲ್ಲಿಯ ನಿವಾಸಿ. ವಿಜಯ ಪವಾರ್‌ ಅವರ ಪತ್ನಿ ಇತ್ತೀಚೆಗೆ ಸಾವನ್ನಪ್ಪಿದ್ದರು. ವಿಜಯ ಪವಾರ್‌ ಅವರು ಪತ್ನಿಯ ಸಾವಿನಿಂದ ನೊಂದು ವಿಜಯ ಪವಾರ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತ ಮಹಿಳೆಯ ಹೆಸರು ಚಿತ್ರಲೇಖಾ ಶ್ರೀಕಾಂತ ಸರಾಫ್. ವಯಸ್ಸು 70. ಇವರು ಶಹಾಪುರದ ದಾನೆ ಗಲ್ಲಿಯ ನಿವಾಸಿ. ಇವರ ತಾಯಿ ಇತ್ತೀಚೆಗೆ ಮೃತಪಟ್ಟಿದ್ದರು. ಬೇರೆ ದಿಕ್ಕಿಲ್ಲದೆ ನೊಂದಿದ್ದ ಅವರು ಇಲ್ಲಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಎರಡು ಪ್ರತ್ಯೇಕ ಘಟನೆಯಾಗಿದ್ದರೂ ಏಕಕಾಲಕ್ಕೆ ಶವ ಪತ್ತೆಯಾಗಿರುವುದು ವಿಶೇಷವಾಗಿದೆ. ಇಷ್ಟಾದರೂ ಬೆಳಗಾವಿಯ ಖಡೇಬಜಾರ್ ಪೊಲೀಸರಿಂದ ತನಿಖೆ ಮುಂದುವರಿದಿದೆ.

Exit mobile version