ಬೆಳಗಾವಿ: ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ಕಸರತ್ತು ನಡೆಸುತ್ತಿವೆ. ಈ ನಡುವೆ ಜಿಲ್ಲೆಯ ಖಾನಪುರ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ (MLA Anjali Nimbalkar) ಕಡೆಯಿಂದ ವಿತರಿಸಲಾಗಿರುವ ಊಟದ ಡಬ್ಬಿ(ಟಿಫಿನ್ ಬಾಕ್ಸ್) ಪಡೆಯಲು ಜನರು ಮುಗಿಬಿದ್ದ ವಿಡಿಯೋ ವೈರಲ್ ವೈರಲ್ ಆಗಿದೆ.
ಜಿಲ್ಲೆ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಟಿಫಿನ್ ಬಾಕ್ಸ್‌ಗಾಗಿ ಮಹಿಳೆಯರು ಮುಗಿಬಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ನವ ದುರ್ಗಾ ಹಳದಿ-ಕುಂಕುಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಹಿಳೆಯರಿಗೆ ಉಚಿತ ಟಿಫಿನ್ ಬಾಕ್ಸ್ ಹಂಚಿಕೆ ಮಾಡಿದ್ದರಿಂದ ನೂಕು ನುಗ್ಗಲು ಉಂಟಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಮತದಾರರರಿಗೆ ಟಿಫಿನ್ ಬಾಕ್ಸ್ ಅಷ್ಟೇ ಅಲ್ಲ ಸೀರೆಗಳನ್ನು ಹಂಚುವ ಮೂಲಕ ಮತಗಳನ್ನು ಸೆಳೆಯಲು ಆಮಿಷ ಒಡ್ಡುತ್ತಿದ್ದಾರೆ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಖಾನಾಪುರ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರರಾದ ಡಾ.ಸೋನಾಲಿ ಸರ್ನೋಬತ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ರಾಹುಲ್ ಗಾಂಧಿ ಹೋದ ಕಡೆಯೆಲ್ಲ ಕಾಂಗ್ರೆಸ್ ಮಟಾಷ್: ಆತ ದೇಶಾದ್ಯಂತ ಪ್ರವಾಸ ಮಾಡಲಿ ಎಂದ ಶ್ರೀರಾಮುಲು