Site icon Vistara News

Murder Case : ನಡು ರಸ್ತೆಯಲ್ಲೇ ಯುವಕನ ಬರ್ಬರ ಕೊಲೆ; ಕೆಲಸ ಮುಗಿಸಿ ಬರುವಾಗ ಅಟ್ಯಾಕ್

Shivashankara Murdered in Belagavi

‌ಗೋಕಾಕ (ಬೆಳಗಾವಿ): ಕಂಪನಿಯೊಂದರ ಕೆಲಸ ಮುಗಿಸಿಕೊಂಡು ಬೈಕ್​​ನಲ್ಲಿ ತಮ್ಮ ಮನೆಗೆ ಮರಳುತ್ತಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder case) ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ (Belagavi News) ಗೋಕಾಕ ತಾಲೂಕಿನ ಶಿವಾಪೂರ ಹೊರವಲಯ ಮಡ್ಡಿ ಸಿದ್ದಪ್ಪನ ದೇವಸ್ಥಾನದ ಸಮೀಪದ ಗುರುವಾ ರಾತ್ರಿ 8.30ಕ್ಕೆ ಈ ಘಟನೆ ನಡೆದಿದೆ. ಶಿವಶಂಕರ ಶಿವಪುತ್ರ ಮಗದುಮ್ಮ ಸಾವಳಗಿಯ ಮುತ್ನಾಳ ನಿವಾಸಿ (35) ಮೃತ ಯುವಕ.

ಶಿವಶಂಕರ ಅವರ ಮೇಲೆ ಮೊದಲೇ ಕಣ್ಣಿಟ್ಟಿದ್ದ ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ಊಟ ಮಾಡುವ ನೆಪ ಮಾಡಿ ಹೊಂಚು ಹಾಕಿ ಕುಳಿತಿದ್ದರು. ಶಿವಶಂಕರ ಅವರು ಬೈಕ್‌ನಲ್ಲಿ ಬರುತ್ತಿದ್ದಂತೆಯೇ ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ದಾಳಿ ಮಾಡಲಾಗಿದೆ. ಜನನಿಬಿಡವಾದ ನಡು ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಬೆಳಗಾವಿಯ ರಿಲಯನ್ಸ್ ಕಂಪನಿಯಲ್ಲಿ ಕೆಲಸ‌ ಮಾಡಿಕೊಂಡಿದ್ದ ಶಿವಶಂಕರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗೋಕಾಕ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಗೋಪಾಲ್ ರಾಥೋಡ್ ಪಿಎಸ್ಐ ಕಿರಣ್ ಮೋಹಿತ್ ಹಾಗೂ ಪೊಲೀಸ್ ಸಿಬ್ಬಂದಿ ಆರೋಪಿಗಳಿಗೆ ಬಲೆ ಬೀಸಿದ್ದಾರೆ.

ಶಿವಶಂಕರ ಮತ್ತು ಈ ತಂಡ ನಡುವೆ ಯಾವುದಾದರೂ ಹಳೆ ದ್ವೇಷವಿದ್ದು, ಅದೇ ಕಾರಣಕ್ಕಾಗಿ ಈ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಹಂತಕರು ಊಟ ಮಾಡುವ ನೆಪ ಮಾಡಿಕೊಂಡು ದಾರಿ ಬದಿಯಲ್ಲಿ ಕುಳಿತು ಹೊಂಚು ಹಾಕುತ್ತಿದ್ದರು. ಕೊಲೆ ಮಾಡಿದ ಬಳಿಕ ಆ ಊಟ, ತಿಂಡಿಯ ಪೊಟ್ಟಣಗಳನ್ನು ಅಲ್ಲೇ ಎಸೆದು ಪರಾರಿಯಾಗಿದ್ದಾರೆ.

ಇದನ್ನೂ ಓದಿ: Road Accident : ಜೀಪ್‌, ಬೈಕ್‌ ನಡುವೆ ಭೀಕರ ಅಪಘಾತ; ಸವಾರರು ಸ್ಥಳದಲ್ಲೇ ಮೃತ್ಯು

ಮತ್ತೊಬ್ಬಳ ಮೋಹಿಸಿದ; ಉಸಿರುಗಟ್ಟಿಸಿ 2ನೇ ಹೆಂಡ್ತಿಯನ್ನು ಕೊಂದ!

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆ ಆತ್ಮಹತ್ಯೆ ಪ್ರಕರಣವೊಂದು ತನಿಖೆ ವೇಳೆ ಕೊಲೆ (Murder Case) ಎಂಬುದು ತಿಳಿದು ಬಂದಿದೆ. ಪರಪ್ಪನ ಅಗ್ರಹಾರದ ಕೂಡ್ಲು ಶಿವ ದೇವಾಲಯದ ನಂಜಾರೆಡ್ಡಿ ಲೇಔಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಪತ್ನಿ ಮೃತಪಟ್ಟಿದ್ದಾಳೆ ಎಂದು ಪತಿಯೊಬ್ಬ ಕಥೆ ಕಟ್ಟಿದ್ದ. ಪೊಲೀಸರು ಕೂಡ ಅಸಹಜ ಸಾವೆಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆ ಸಾವಿನ ರಹಸ್ಯ ಬಯಲಾಗಿದೆ. ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಅನುರಾಧ ಅಲಿಯಾಸ್ ಅಲೀಮಾ (31) ಹತ್ಯೆಯಾದವಳು. ರಾಜಶೇಖರ್‌ ಕೊಲೆ ಆರೋಪಿಯಾಗಿದ್ದಾನೆ. ಅನುರಾಧ ರಾಜಶೇಖರ್ ಜತೆ ಎರಡನೇ ಮದುವೆಯಾಗಿದ್ದಳು. ಮೊದಮೊದಲು ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆದರೆ ಈ ನಡುವೆ ರಾಜಶೇಖರ್ ಬೇರೊಬ್ಬ ಮಹಿಳೆ ಜತೆಗೆ ಸಂಪರ್ಕ ಹೊಂದಿದ್ದ. ಇದೇ ವಿಚಾರಕ್ಕೆ ಅನುರಾಧ ಹಾಗೂ ರಾಜಶೇಖರ್‌ ನಡುವೆ ಗಲಾಟೆ ನಡೆಯುತ್ತಲೆ ಇತ್ತು.

ಹತ್ಯೆ ದಿನವು ಅನುರಾಧ ಹಾಗೂ ರಾಜಶೇಖರ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ರಾಜಶೇಖರ್‌ ಕೈಗಳಿಂದ ಕುತ್ತಿಗೆ ಹಿಸುಕಿ ನಂತರ ವೇಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿ ಬಳಿಕ ಅನುರಾಧಳನ್ನು ಆಸ್ಪತ್ರೆಗೂ ದಾಖಲು ಮಾಡಿದ್ದ.

ಮಾತ್ರವಲ್ಲ ಅನುಮಾನ ಬಾರದೆ ಇರಲಿ ಎಂದು ತಾನೇ ಪೊಲೀಸ್ ಠಾಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿಯನ್ನು ನೀಡಿದ್ದ. ಪರಪ್ಪನ ಅಗ್ರಹಾರ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ರಹಸ್ಯ ಹೊರಬಂದಿದೆ. ಬಲವಂತವಾಗಿ ಕುತ್ತಿಗೆ ಹಿಸುಕಿರುವುದು ಬೆಳಕಿಗೆ ಬಂದಿದೆ.

Exit mobile version