Site icon Vistara News

Road Accident: ಚಾಲಕನ ನಿಯಂತ್ರಣ ತಪ್ಪಿ ಹೈಡ್ರಾಲಿಕ್ ಕ್ರೇನ್‌ ಪಲ್ಟಿ; ಒಬ್ಬ ಸಾವು

Crane accident

#image_title

ಬೆಳಗಾವಿ: ಚಿಕ್ಕೋಡಿ ಪಟ್ಟಣದ ಹೊರವಲಯದ ಘಟ್ಟಿ ಬಸವಣ್ಣ ದೇವಸ್ಥಾನದ ಬಳಿ ಚಾಲಕನ ನಿಯಂತ್ರಣ ತಪ್ಪಿ ಹೈಡ್ರಾಲಿಕ್ ಕ್ರೈನ್ ಪಲ್ಟಿಯಾಗಿ (Crane Overturns) ಒಬ್ಬರು ಮೃತಪಟ್ಟಿದ್ದಾರೆ.

ಚಿಕ್ಕೋಡಿ- ಹುಕ್ಕೇರಿ ರಾಜ್ಯ ಹೆದ್ದಾರಿ ಮೇಲೆ ದುರ್ಘಟನೆ (Road accident) ನಡೆದಿದೆ. ಚಿಕ್ಕೋಡಿ ತಾಲೂಕಿನ ಜೋಡಕುರಳಿ ನಿವಾಸಿಯಾಗಿರುವ ಸತ್ಯಪ್ಪಾ‌ ಖದ್ದಿ (27) ಮೃತಪಟ್ಟ ಯುವಕ.

ಸತ್ಯಪ್ಪಾ ಖದ್ದಿ ಕರೋಶ್‌ ಗ್ರಾಮದ ಕ್ರೇನನ್ನು ಡ್ರೈವ್‌ ಮಾಡಿಕೊಂಡು ಹೋಗುತ್ತಿದ್ದಾಗ ಅದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ ಸತ್ಯಪ್ಪಾ ಖದ್ದಿ ಮೃತಪಟ್ಟಿದ್ದಾರೆ. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ವಿಜಯ್ ನಿಕಮ್ ಮತ್ತು ವಿಕಾಸ್ ಪವಾರ್ ಅವರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಚಿಕ್ಕೋಡಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಚಿಕ್ಕೋಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚಿಕ್ಕೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೀನು ಹಿಡಿಯಲು ಹೋದ ಯುವಕ ತೆಪ್ಪ ಮಗುಚಿ ಮೃತ್ಯು

ವಿಜಯಪುರ: ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ತೆಪ್ಪ ಮಗುಚಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ (Youth drowned) ವಿಜಯಪುರ ಜಿಲ್ಲೆಯ (Vijayapura news) ಮುದ್ದೇಬಿಹಾಳ ತಾಲ್ಲೂಕಿನ ತಾರನಾಳ ಕೆರೆಯಲ್ಲಿ (Taranaa pond) ನಡೆದಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಸೋಮವಾರ ಮುಂಜಾನೆ ಶವ ಪತ್ತೆಯಾಗಿದೆ.

ಮಂಜುನಾಥ ಶಿವಪ್ಪ ಚಲವಾದಿ (17) ಮತ್ತು ಇನ್ನೊಬ್ಬ ಯುವಕ ಮನೆಯವರಿಗೆ ತಿಳಿಸದೆ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರು. ತೆಪ್ಪ ಬಳಸಿ ಅವರು ಮೀನು ಹಿಡಿಯುತ್ತಿದ್ದರು. ಆದರೆ, ಒಂದು ಹಂತದಲ್ಲಿ ಅವರು ಸಾಗುತ್ತಿದ್ದ ತೆಪ್ಪ ಪಲ್ಟಿಯಾಗಿದೆ.

#image_title

ತೆಪ್ಪ‌ ಮಗುಚಿ ಯುವಕರು ಮುಳುಗುತ್ತಿರುವುದು ಗಮನಿಸಿದ ದಾರಿಹೋಕರೊಬ್ಬರು ಕೂಡಲೇ ನೀರಿಗೆ ಧುಮುಕಿ ಒಬ್ಬ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಆದರೆ, ಅಷ್ಟು ಹೊತ್ತಿಗೆ ಇನ್ನೊಬ್ಬ ಮುಳುಗಿ ಆಗಿತ್ತು.

ಇತ್ತ ರಕ್ಷಿಸಲ್ಪಟ್ಟ ಯುವಕ ಜನರು ತನ್ನನ್ನೇ ತಪ್ಪಿತಸ್ಥ ಎಂದು ಗುರುತಿಸಿ ಹಲ್ಲೆ ಮಾಡಬಹುದು ಎಂಬ ಭಯದಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಕ್ಷಣ ನಾಪತ್ತೆಯಾಗಿದ್ದ.

ಇತ್ತ ವಿಷಯ ತಿಳಿದ ಮಂಜುನಾಥ ಶಿವಪ್ಪ ಚಲವಾದಿ ಮನೆಯವರು ಸ್ಥಳಕ್ಕೆ ಆಗಮಿಸಿದರು. ಇದು ಭಾನುವಾರ ಸಂಜೆ ಕತ್ತಲಾವರಿಸುವ ಹೊತ್ತಿನಲ್ಲಿ ನಡೆದ ಘಟನೆ. ಆದರೂ ಮಾಹಿತಿ ತಿಳಿದು ಸಂಜೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಸ್ಥಳಕ್ಕಾಗಮಿಸಿ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಕೆಲವು ಸೀಮಿತ ಸಲಕರಣೆಗಳಷ್ಟೇ ಇದ್ದಿದ್ದರಿಂದ ಮತ್ತು ಕತ್ತಲಾಗಿದ್ದರಿಂದ ಹೆಚ್ಚಿನ ಹುಡುಕಾಟ ಆಗಿರಲಿಲ್ಲ.

ಇದನ್ನೂ ಓದಿ: Crime News: ಶೀಲ ಶಂಕಿಸಿ ಪತ್ನಿಯ ಮರ್ಮಾಂಗಕ್ಕೆ ಚೂರಿಯಿಂದ ಇರಿದ!

ಅಗ್ನಿಶಾಮಕ‌ ದಳದ ಸಿಬ್ಬಂದಿ ಕಾರ್ಯಾಚರಣೆ ಯಶಸ್ವಿಯಾಗದೆ ಅಸಹಾಯಕರಾಗಿ ಮರಳಿದ್ದ.ರು. ಸೋಮವಾರ ಬೆಳಗ್ಗೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತೆ ತಾರನಾಳ ಕೆರೆ ಪ್ರದೇಶಕ್ಕೆ ಆಗಮಿಸಿದರೂ ಆದರೆ ಕಾರ್ಯಾಚರಣೆಗೆ ಬೋಟ್ ಸೇರಿದಂತೆ ತುರ್ತು ಸಂದರ್ಭದಲ್ಲಿ ಬಳಸುವ ಯಾವುದೇ ಆಧುನಿಕ ತಂತ್ರಜ್ಞಾನ ಆಧಾರಿತ ಸಲಕರಣೆಗಳು ಇರಲಿಲ್ಲ. ಸೋಮವಾರ ಮುಂಜಾನೆ ಊರಿನವೇ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.

Exit mobile version