ಬೆಂಗಳೂರು: ರಾಜ್ಯದಲ್ಲಿರುವ ಬಂಜಾರ (ಲಂಬಾಣಿ) ಸಮುದಾಯದವರನ್ನು ವಿವಿಧ ಆಮಿಷಗಳನ್ನು ಒಡ್ಡಿ ಮತಾಂತರ (Religious conversion) ಮಾಡಲಾಗುತ್ತಿದ್ದು, ಸುಮಾರು 1,700 ಕುಟುಂಬಗಳನ್ನು ಪುನಃ ಹಿಂದು ಧರ್ಮಕ್ಕೆ (Ghar Wapsi) ಕರೆತರಲಾಗಿದೆ ಎಂದು ಕುಡಚಿ ಬಿಜೆಪಿ ಶಾಸಕ ಪಿ. ರಾಜೀವ್ ಹೇಳಿದ್ದಾರೆ.
ಹಿಂದು ಧರ್ಮದ ಅರ್ಥದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಯಮಕನಮರಡಿ ಕಾಂಗ್ರೆಸ್ ಶಾಸಕ ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ಕುರಿತು ಪಿ. ರಾಜೀವ್ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಭಾರತವನ್ನು ಹಿಂದು ಭೂಮಿ ಎಂದು ಕರೆಯುತ್ತೇವೆ. ಭಾರತಕ್ಕೆ ಇರುವ ಎರಡು ದೊಡ್ಡ ಸಮಸ್ಯೆ ಎಂದರೆ ಜಿಹಾದಿ ಮನಸ್ಥಿತಿ ಹಾಗೂ ಕ್ರೈಸ್ತ ಮಷಿನರಿಗಳು ನಡೆಸುವ ಮತಾಂತರ.
ಬಂಜಾರ ಸಮುದಾಯದವನ್ನು ವ್ಯವಸ್ಥಿತವಾಗಿ ಮತಾಂತರ (Religious conversion) ಮಾಡುವ ಕೆಲಸ ಆಗುತ್ತಿದೆ. ವಿಕೃತ ಮನಸ್ಸಿನ ಮನಸ್ಥಿತಿಯವರು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಿಯಾಗಿ ಅಶ್ಲೀಲ ಎಂದು ಹೇಳುವುದು ಹೇಗೆ ಸಾಧ್ಯ? ಹಿಂದು ಮತಗಳನ್ನು ಪಡೆದು ಗೆಲ್ಲುತ್ತಾರೆ. ಆದರೆ ಅದೇ ಹಿಂದುವನ್ನು ಅಶ್ಲೀಲ ಎಂದು ಕರೆಯುವ ದಾಷ್ಟ್ಯ ಬೆಳೆಸಿಕೊಂಡಿದ್ದಾರೆ.. ಅಂತವರನ್ನು ವಿಕೃತಿ ಮನಸ್ಥಿತಿ ಎನ್ನುತ್ತೇನೆ ಎಂದರು.
ಬಂಜಾರಾ ತಾಂಡದ ಬಹಳಷ್ಟು ಜನರನ್ನು ಮತಾಂತರ (Religious conversion) ಮಾಡಿದ್ದಾರೆ. 1,700 ಕುಟುಂಬದವರನ್ನು ಘರ್ ವಾಪ್ಸಿ ಮಾಡಿದ್ದೇವೆ. ಕಾಂಗ್ರೆಸ್‌ನವರು ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮ ಮಾಡಿರಲಿಲ್ಲ. ಆದರೆ ಬೊಮ್ಮಾಯಿ ಅವರು ಕಂದಾಯ ಗ್ರಾಮ ಮಾಡಿದ್ದಾರೆ. 75 ಕುಟುಂಬಕ್ಕೆ ಕಂದಾಯ ಗ್ರಾಮದಡಿ ಹಕ್ಕು ಪತ್ರ ನೀಡುತ್ತಿದ್ದೇವೆ.
ಡಿಸೆಂಬರ್ ಮೊದಲ ವಾರ ಒಂದೇ ವೇದಿಕೆಯಲ್ಲಿ 60 ಸಾವಿರ ಕುಟುಂಬಕ್ಕೆ ಹಕ್ಕು ಪತ್ರ ನೀಡುತ್ತಿದ್ದೇವೆ. ಬಳಿಕ ಶಿವಮೊಗ್ಗದಲ್ಲಿ ಹಕ್ಕು ಪತ್ರ ನೀಡುವ ಕಾರ್ಯಕ್ರಮ ಮಾಡುತ್ತೇವೆ. ಈಗ ಕಲಬುರಗಿ, ಕೊಪ್ಪಳ, ರಾಯಚೂರು ಬೀದರ್ ಭಾಗದ ತಾಂಡಾದವರಿಗೆ ಹಕ್ಕು ಪತ್ರ ನೀಡುತ್ತಿದ್ದೇವೆ ಎಂದರು.
ಎಸ್‌ಸಿಎಸ್‌ಪಿ ಟಿಎಸ್‌ಪಿ ಅಡಿಯಲ್ಲಿ ಹಣವನ್ನು ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗೆ ಸರ್ಕಾರ ಬಳಸಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ರಾಜೀವ್, ಈ ಹಣವನ್ನು ಡೈವರ್ಶನ್ ಮಾಡೊಕೆ ಶುರು ಮಾಡಿದ್ದೆ ಸಿದ್ದರಾಮಯ್ಯ. ಬಿಜೆಪಿ ಸರ್ಕಾರ 28 ಸಾವಿರ ಕೋಟಿ ರೂ. ಅನುದಾನ ನೀಡಿದೆ. ಸಿದ್ದರಾಮಯ್ಯ ಸುಳ್ಳು ಅಂಕಿ ಅಂಶಗಳನ್ನು ಹೇಳುವುದರಲ್ಲಿ ಸಿದ್ದರಾಮಯ್ಯ ಸಿದ್ಧಹಸ್ತರು ಎಂದರು.
ಇದನ್ನೂ ಓದಿ | Religion Conversion | ವಿಶ್ವಕರ್ಮ ಸಮಾಜದವರು ಸೌಲಭ್ಯ ಸಿಗದಿದ್ದಕ್ಕೆ ಮತಾಂತರವಾಗುತ್ತಿದ್ದಾರೆ: ಎಂಎಲ್‌ಸಿ ಕೆ.ಪಿ ನಂಜುಂಡಿ