ಬೆಳಗಾವಿ: ಮಗನ ಅನಾರೋಗ್ಯದಿಂದ ಮಾನಸಿಕ ಚಿಂತೆಗೀಡಾಗಿದ್ದ ತಾಯಿ ವ್ಯಥೆಯಿಂದ ಆತ್ಮಹತ್ಯೆ (self harm) ಮಾಡಿಕೊಂಡಿದ್ದಾರೆ. ನಿನ್ನೆ ಮಲಪ್ರಭಾ ನದಿ ಹಿನ್ನೀರಿನಲ್ಲಿ ಮಹಿಳೆಯ ಶವ (woman body found) ಪತ್ತೆಯಾಗಿತ್ತು.
ಧಾರವಾಡ ಮೂಲದ ಪ್ರಿಯದರ್ಶಿನಿ ಲಿಂಗರಾಜ್ ಪಾಟೀಲ್(40) ಮೃತ ಮಹಿಳೆ. ಸವದತ್ತಿ ತಾಲೂಕಿನ ಗೊರವನಕೊಳ್ಳದ ಮಲಪ್ರಭಾ ಹಿನ್ನೀರಿನಲ್ಲಿ ಶವ ಪತ್ತೆಯಾಗಿತ್ತು. ಪ್ರಿಯದರ್ಶಿನಿ ಪತಿ ಲಿಂಗರಾಜ್ ಆಸ್ಟ್ರೇಲಿಯಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ಆಗಸ್ಟ್ 18ರಂದು ರಾಜ್ಯಕ್ಕೆ ಮರಳಿದ್ದ ಪ್ರಿಯದರ್ಶಿನಿ ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ಪ್ರಿಯದರ್ಶಿನಿ ಅವರ ಸಾವಿಗೆ ಮಗ ಅಮರ್ತ್ಯನ ಅನಾರೋಗ್ಯವೇ ಕಾರಣ ಎಂದು ವರದಿಯಾಗಿದೆ. ಹಲವು ಕಾಲದಿಂದ ಮಗನನ್ನು ಬಾಧಿಸುತ್ತಿದ್ದ ಅಸೌಖ್ಯದಿಂದ ತಾಯಿ ತುಂಬಾ ಚಿಂತೆಗೀಡಾಗಿದ್ದರು ಎಂದು ತಿಳಿದುಬಂದಿದೆ. ಇದರಿಂದಾಗಿ ಆಸ್ಟ್ರೇಲಿಯಾದಿಂದ ಕರ್ನಾಟಕಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರಬಹುದು (suicide case) ಎಂಬ ಶಂಕೆ ಮೂಡಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್ ಡಿಕ್ಕಿ, ಯುವಕ ಸಾವು, ಸ್ನೇಹಿತನಿಗೆ ಹೃದಯಾಘಾತ
ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಸುದ್ದಿ ತಿಳಿದ ಸ್ನೇಹಿತನಿಗೆ ಹೃದಯಾಘಾತವಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕೆಎಸ್ಸಾರ್ಟಿಸಿ ಡಿಪೊ ಬಳಿ ಬೈಕ್ಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ.
ಪುಣೇದಹಳ್ಳಿಯ ಆನಂದ(30) ಮೃತ ದುರ್ದೈವಿ. ಗಾಯಾಳು ಮೊಹಮ್ಮದ್ ಮಲ್ಲಿಕ್(19)ರನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನವರಾಜ್, ಜಾವೀದ್ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆನಂದ್, ನವರಾಜ್ ಸ್ನೇಹಿತನ ಹುಟ್ಟುಹಬ್ಬದ ಕೇಕ್ ತರಲು ಹೊರಟಿದ್ದರು. ಶಿಕಾರಿಪುರದಿಂದ ಪುಣೇದಹಳ್ಳಿಗೆ ವಾಪಸಾಗುವಾಗ ಅವಘಡ ನಡೆದಿದೆ. ಸ್ನೇಹಿತನ ಸಾವಿನ ಸುದ್ದಿ ಕೇಳಿ ಸಾಗರ್ಗೆ ಹೃದಯಾಘಾತವಾಗಿದೆ.
ಇದನ್ನೂ ಓದಿ: Road Accident : ಗೊಲ್ಲರದೊಡ್ಡಿ ಅಪಘಾತ ಪ್ರಕರಣ; ಚಿಕಿತ್ಸೆ ಫಲಿಸದೆ ಮತ್ತೊಂದು ಮಗು ಸಾವು