ಬೆಳಗಾವಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿಯ ಐತಿಹಾಸಿಕ ರಾಜಹಂಸಘಡ ಕೋಟೆಯಲ್ಲಿ ಶಿವಾಜಿಯ ಪುತ್ಥಳಿ ಅನಾವರಣಗೊಳಿಸಿದ್ದರು. ವೈಯಕ್ತಿಕವಾಗಿ ಕಾರ್ಯಕ್ರಮ ನಡೆಸಿದ್ದರು. ಇದೀಗ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಕುಮಾರ್ ಪಾಟೀಲ್ ಅವರು ಸರ್ಕಾರದ ಅನುದಾನದಲ್ಲಿ ಶಿವಚರಿತ್ರೆ ನಿರ್ಮಿಸಿದ್ದಾರೆ.
10 ಕೋಟಿ ವೆಚ್ಚದಲ್ಲಿ ಶಿವಾಜಿ ಉದ್ಯಾನವನದಲ್ಲಿ ಶಿವಚರಿತ್ರೆ ಎಂಬ ಬೆಳಕು ಹಾಗೂ ಧ್ವನಿಗಳ ಮೂಲಕ ಶಿವಾಜಿ ಮಹಾರಾಜರ ಬದುಕು-ಸಾಧನೆ ಬಿಂಬಿಸುವ ಕಾರ್ಯಕ್ರಮ ನಡೆಯಲಿದೆ. ಶಿವಚರಿತ್ರೆಯ ಉದ್ಘಾಟನೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಹ್ವಾನಿಸಲಾಗಿದೆ. ದಕ್ಷಿಣ ಮತಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಮರಾಠಾ ಮತಗಳ ಓಲೈಕೆಗೆ ಈ ಮೂಲಕ ಪಕ್ಷ ಕಸರತ್ತು ನಡೆಸಿದೆ. ಈ 40 ನಿಮಿಷದ ಕಾರ್ಯಕ್ರಮ ಪ್ರತಿದಿನವೂ ಇರಲಿದೆ. ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಪ್ರಸಾರವಾಗಲಿದೆ. ಶಿವಚರಿತ್ರೆ ವೀಕ್ಷಣೆಗೆ ಒಬ್ಬರಿಗೆ 50 ರೂ ಟಿಕೆಟ್ ದರ ನಿಗದಿ ಮಾಡಲಾಗಿದೆ.